ಬೆಂಗಳೂರು: ಸಿದ್ದರಾಮಯ್ಯ ಅವರದ್ದು ಕಾಮಾಲೆ ಕಣ್ಣು. ಅವರು ಇನ್ನೂ ಭೂತ ಕಾಲದಲ್ಲೇ ಇದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಅಮಿತ್ ಶಾ ಸುಳ್ಳಿನ ಮೂಟೆ ಉರುಳಿಸಿ ಹೋಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, 13ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಎಷ್ಟು ಬಂತು? 14 ನೇ ಹಣಕಾಸು ಆಯೋಗದಲ್ಲಿ ಬಿಜೆಪಿ ಅವಧಿಯಲ್ಲಿ ಎಷ್ಟು ಬಂತು ಅನ್ನೋದು ಸ್ಪಷ್ಟ ಇದೆ.
ನಮ್ಮ ಅಧಿಕಾರವಧಿಯಲ್ಲಿ 9 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ರಾಜ್ಯಕ್ಕೆ ಸಿಕ್ಕಿದೆ. ಅಮಿತ್ ಶಾ ಅವರು ಸತ್ಯವನ್ನೇ ನುಡಿದಿದ್ದಾರೆ. ಸಿದ್ದರಾಮಯ್ಯ ರಾಜಕಾರಣ ಮಾಡುವುದನ್ನು ಬಿಡಬೇಕು. ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡುವುದು ಸರಿಯಲ್ಲ ಎಂದಿದ್ದಾರೆ.
GST ಲೆಕ್ಕದಲ್ಲಿ ನಮಗೆ ದೊಡ್ಡ ಅನ್ಯಾಯವಾಗಿದೆ; ಈ ನಷ್ಟಕ್ಕೆ ಯಾರು ಹೊಣೆ? ಸಿದ್ದರಾಮಯ್ಯರಿಂದ ‘ಅಮಿತ’ ಪ್ರಶ್ನೆ!
Published On - 12:37 pm, Tue, 19 January 21