ಹಲ್ಲೆಗೊಳಗಾಗಿದ್ದ ಆರ್​ಟಿಐ ಕಾರ್ಯಕರ್ತ ಸಾವು; ಬಲಗೈ, ಬಲಗಾಲನ್ನು ಕತ್ತರಿಸಿ ಪರಾರಿಯಾದ ಅರೋಪಿಗಳ ಬಂಧನಕ್ಕೆ ವಿಶೇಷ ತಂಡ ನೇಮಕ

ವೆಂಕಟೇಶ್ ತಾವರೆಕೆರೆ ನಿವಾಸಿ. ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ತಮ್ಮ ಕಚೇರಿಯಲ್ಲಿದ್ದ ವೆಂಕಟೇಶ್​ರನ್ನು ಹೊರಗೆ ಎಳೆದು ಹಲ್ಲೆ ನಡೆಸಿದ್ದರು. ಮಾರಕಾಸ್ತ್ರಗಳಿಂದ ಬಲಗೈ ಮತ್ತು ಬಲಗಾಲನ್ನು ಕತ್ತರಿಸಿದ್ದರು. ವೆಂಕಟೇಶ್​ರನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹಲ್ಲೆಗೊಳಗಾಗಿದ್ದ ಆರ್​ಟಿಐ ಕಾರ್ಯಕರ್ತ ಸಾವು; ಬಲಗೈ, ಬಲಗಾಲನ್ನು ಕತ್ತರಿಸಿ ಪರಾರಿಯಾದ ಅರೋಪಿಗಳ ಬಂಧನಕ್ಕೆ ವಿಶೇಷ ತಂಡ ನೇಮಕ
ಆರ್ಟಿಐ ಕಾರ್ಯಕರ್ತ ವೆಂಕಟೇಶ್
Edited By:

Updated on: Jul 19, 2021 | 8:44 AM

ರಾಮನಗರ: ಹಲ್ಲೆಗೊಳಗಾಗಿದ್ದ ಆರ್​ಟಿಐ ಕಾರ್ಯಕರ್ತ ವೆಂಕಟೇಶ್(50) ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆಯಲ್ಲಿ ಜುಲೈ 15ರಂದು ವೆಂಕಟೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಬೈಕ್ನಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಭೀಕರ ಹಲ್ಲೆಗೊಳಗಾಗಿದ್ದ ವೆಂಕಟೇಶ್ನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು (ಜುಲೈ 19) ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ವೆಂಕಟೇಶ್ ತಾವರೆಕೆರೆ ನಿವಾಸಿ. ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ತಮ್ಮ ಕಚೇರಿಯಲ್ಲಿದ್ದ ವೆಂಕಟೇಶ್​ರನ್ನು ಹೊರಗೆ ಎಳೆದು ಹಲ್ಲೆ ನಡೆಸಿದ್ದರು. ಮಾರಕಾಸ್ತ್ರಗಳಿಂದ ಬಲಗೈ ಮತ್ತು ಬಲಗಾಲನ್ನು ಕತ್ತರಿಸಿದ್ದರು. ವೆಂಕಟೇಶ್​ರನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಮುಂಗೈ ಮತ್ತು ಮೊಣಕಾಲನ್ನ ಮರು ಜೋಡಣೆ ಮಾಡಲಾಗಿತ್ತು. ನಂತರ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾರೆ.

ಸಿನಿಮೀಯ ಶೈಲಿಯಲ್ಲಿ ಬಂದು ಹತ್ಯೆ ನಡೆಸಿದ ಐವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ಮೂರು ವಿಶೇಷ ತಂಡವನ್ನು ನೇಮಿಸಲಾಗಿದೆ.

ಇದನ್ನೂ ಓದಿ

ರಾಜ್ಯದಲ್ಲಿ ಬೆಚ್ಚಿಬೀಳಿಸುವ ಕೃತ್ಯ; ಆರ್​ಟಿಐ ಕಾರ್ಯಕರ್ತನ ಕೈ, ಕಾಲು ಕಟ್ ಮಾಡಿ ಕೌರ್ಯ ಮೆರೆದ ದುಷ್ಕರ್ಮಿಗಳು

ಆರ್​ಟಿಐ ಕಾರ್ಯಕರ್ತ ಶ್ರೀಧರ್ ಕೊಲೆ ಪ್ರಕರಣ: ಮಾಜಿ ಸಚಿವ ಪಿಟಿ ಪರಮೇಶ್ವರ್ ನಾಯ್ಕ್ ಆಪ್ತನ ಬಂಧನ, ತಲೆಮರೆಸಿಕೊಂಡ ಪರಮೇಶ್ವರ್ ನಾಯ್ಕ್ ಮಗ

(An RTI activist venkatesh who was assaulted has died in Bengaluru)