ಹಿರಿತನ ಮತ್ತು ಸ್ಥಾನಕ್ಕೆ ಗೌರವ ಕೊಡಲೇಬೇಕು, ಅನಂತಕುಮಾರ್ ಹೆಗಡೆ ಮಾತುಗಳನ್ನು ಸಮರ್ಥಿಸಲ್ಲ: ಸಿಟಿ ರವಿ
ಹಿಂದೆ, ಮೊಘಲರ ಆಳ್ವಿಕೆಯಲ್ಲಿ ಮತ್ತ ದಕ್ಷಿಣ ಭಾರತದಲ್ಲಿ ಆದಿಲ್ ಶಾಹಿ, ನಿಜಾಮ ಮೊದಲಾದವರ ಅರಸೊತ್ತಿಗೆಯ ಕಾಲದಲ್ಲಿ 42,000 ಕ್ಕಿಂತ ಹೆಚ್ಚು ದೇವಸ್ಥಾನಗಳನ್ನು ಬೀಳಿಸಿ ಮಸೀದಿಗಳನ್ನು ನಿರ್ಮಿಸಿದ್ದು ಸತ್ಯ, ಮಂದಿರವಿದ್ದ ಜಾಗದಲ್ಲಿ ಕಟ್ಟಲಾಗಿರುವ ಮಸೀದಿಯಲ್ಲಿ ನಮಾಜ್ ಸಲ್ಲಿಸುವುದು ಹರಾಮ್ ಅಂತ ಭಾರತೀಯ ಮುಸಲ್ಮಾನರಿಗೆ ಮನವರಿಕೆಯಾದ ದಿನ ಎಲ್ಲವೂ ತಿಳಿಯಾಗಲಿದೆ ಎಂದು ರವಿ ಹೇಳಿದರು.
ಚಿಕ್ಕಮಗಳೂರು: ಬಿಜೆಪಿ ಸಂಸದ ಅನಂತಕುಮಾರ ಹೆಗಡೆ (Anantkumar Hegde) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕುರಿತು ವಿವಾದಾತ್ಮಕ ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ ದಿನವೇ ಆ ಮಾತುಗಳನ್ನು ಅವರ ಪಕ್ಷದವರೂ ಸಮರ್ಥಿಸಲ್ಲ ಅಂತ ನಾವು ಹೇಳಿದ್ದೆವು. ಹೆಗಡೆ ಹೇಳಿಕೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ನಿನ್ನೆ ಖಂಡಿಸಿದ್ದರು ಮತ್ತು ಇವತ್ತು ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಶಾಸಕ ಸಿಟಿ ರವಿ (CT Ravi) ಸಹ ಸಂಸದನ ಅವಹೇಳನಕಾರಿ ಮಾತುಗಳನ್ನು ಟೀಕಿಸಿದರು. ಹಿರಿಯರಿಗೆ ಮತ್ತು ಸ್ಥಾನಕ್ಕೆ ಗೌರವ ನೀಡಲೇಬೇಕು, ಅವರ ಮನಸ್ಸಿಗೆ ಘಾಸಿಯುಂಟು ಮಾಡುವ ಭಾಷೆ ಬಳಕೆಯಾದರೆ ಅದನ್ನು ತಾನು ಸಮರ್ಥಿಸುವುದಿಲ್ಲ ಎಂದು ರವಿ ಹೇಳಿದರು. ಹೆಗಡೆಯವರ ಕಾರ್ಯಶೈಲಿ ಭಿನ್ನವಾಗಿರಬಹುದು, ಹಾಗಂತ ರಾಜ್ಯದ ಮುಖ್ಯಮಂತ್ರಿಯ ಬಗ್ಗೆ ಏಕವಚನದಲ್ಲಿ ಮಾತಾಡುವುದು ಸರಿಯಲ್ಲ ಎಂದು ಅವರು ಹೇಳಿದರು. ಹಿಂದೆ, ಮೊಘಲರ ಆಳ್ವಿಕೆಯಲ್ಲಿ ಮತ್ತ ದಕ್ಷಿಣ ಭಾರತದಲ್ಲಿ ಆದಿಲ್ ಶಾಹಿ, ನಿಜಾಮ ಮೊದಲಾದವರ ಅರಸೊತ್ತಿಗೆಯ ಕಾಲದಲ್ಲಿ 42,000 ಕ್ಕಿಂತ ಹೆಚ್ಚು ದೇವಸ್ಥಾನಗಳನ್ನು ಬೀಳಿಸಿ ಮಸೀದಿಗಳನ್ನು ನಿರ್ಮಿಸಿದ್ದು ಸತ್ಯ, ಮಂದಿರವಿದ್ದ ಜಾಗದಲ್ಲಿ ಕಟ್ಟಲಾಗಿರುವ ಮಸೀದಿಯಲ್ಲಿ ನಮಾಜ್ ಸಲ್ಲಿಸುವುದು ಹರಾಮ್ ಅಂತ ಭಾರತೀಯ ಮುಸಲ್ಮಾನರಿಗೆ ಮನವರಿಕೆಯಾದ ದಿನ ಎಲ್ಲವೂ ತಿಳಿಯಾಗಲಿದೆ ಎಂದು ರವಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ