ವ್ಯಕ್ತಿ ಕಾಲಿಗೆ ಬಿದ್ದರೂ ಸ್ಪಂದಿಸದ ಅನಿತಾ ಕುಮಾರಸ್ವಾಮಿ

ರಾಮನಗರ: ವ್ಯಕ್ತಿ ಕಾಲಿಗೆ ಬಿದ್ದರೂ ಅನಿತಾ ಕುಮಾರಸ್ವಾಮಿ ಸ್ಪಂದಿಸದೆ ತೆರಳಿರುವ ಅಮಾನವೀಯ ಘಟನೆ ರಾಮನಗರ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಮನಗರ JDS ಶಾಸಕಿ ಅನಿತಾ ಕುಮಾರಸ್ವಾಮಿ ನಗರಸಭೆ ಅಧಿಕಾರಿಗಳ ಜತೆ ಸಭೆ ನಡೆಸಿ ತೆರಳುವಾಗ ರಾಜು ಎಂಬ ವ್ಯಕ್ತಿ ಶಾಸಕಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಈ ವೇಳೆ ಅವರ ಕಾಲಿಗೆ ಬಿದ್ದು ಬೇಡಿಕೊಂಡರು ಇದ್ಯಾವುದಕ್ಕೂ ಸ್ಪಂದಿಸದೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತೆರಳಿದ್ದಾರೆ. ಬಳಿಕ ಶಾಸಕಿ ಕಾರಿನ್ನು ತಡೆಯಲು ಸಾರ್ವಜನಿಕರಿಬ್ಬರು ಕಾರಿಗೆ ಅಡ್ಡ ಕುಳಿತ್ತಿದ್ದರು. […]

ವ್ಯಕ್ತಿ ಕಾಲಿಗೆ ಬಿದ್ದರೂ ಸ್ಪಂದಿಸದ ಅನಿತಾ ಕುಮಾರಸ್ವಾಮಿ
ಸಾಧು ಶ್ರೀನಾಥ್​

Updated on: Dec 11, 2019 | 4:33 PM

ರಾಮನಗರ: ವ್ಯಕ್ತಿ ಕಾಲಿಗೆ ಬಿದ್ದರೂ ಅನಿತಾ ಕುಮಾರಸ್ವಾಮಿ ಸ್ಪಂದಿಸದೆ ತೆರಳಿರುವ ಅಮಾನವೀಯ ಘಟನೆ ರಾಮನಗರ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಮನಗರ JDS ಶಾಸಕಿ ಅನಿತಾ ಕುಮಾರಸ್ವಾಮಿ ನಗರಸಭೆ ಅಧಿಕಾರಿಗಳ ಜತೆ ಸಭೆ ನಡೆಸಿ ತೆರಳುವಾಗ ರಾಜು ಎಂಬ ವ್ಯಕ್ತಿ ಶಾಸಕಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಈ ವೇಳೆ ಅವರ ಕಾಲಿಗೆ ಬಿದ್ದು ಬೇಡಿಕೊಂಡರು ಇದ್ಯಾವುದಕ್ಕೂ ಸ್ಪಂದಿಸದೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತೆರಳಿದ್ದಾರೆ.

ಬಳಿಕ ಶಾಸಕಿ ಕಾರಿನ್ನು ತಡೆಯಲು ಸಾರ್ವಜನಿಕರಿಬ್ಬರು ಕಾರಿಗೆ ಅಡ್ಡ ಕುಳಿತ್ತಿದ್ದರು. ಇದಕ್ಕೆ ಆಕ್ರೂಶ ವ್ಯಕ್ತಪಡಿಸಿದ JDS ತಾಲೂಕು ಅಧ್ಯಕ್ಷ ರಾಜಶೇಖರ್‌ ರಾಜು ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ತಮ್ಮ ಕಣ್ಮುಂದೆಯೇ ದೌರ್ಜನ್ಯ ನಡೆಯುತ್ತಿದ್ದರೂ ಶಾಸಕಿ ಅನಿತಾ ಕುಮಾರಸ್ವಾಮಿ ಮಾತ್ರ ಮೌನದಲ್ಲೇ ಇದ್ದರು. ಇಷ್ಟಾದ್ರೂ ಯಾವುದಕ್ಕೂ ಸ್ಪಂದಿಸದೆ ಕಂಡುಕಾಣದಂತೆ ತೆರಳಿದ್ದಾರೆ.

Published On - 4:29 pm, Wed, 11 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us