ನೇಹಾ ಹಿರೇಮಠ ಹತ್ಯೆ ಖಂಡಿಸಿ ಅರ್ಧದಿನ ಹುಬ್ಬಳ್ಳಿ-ಧಾರವಾಡ ಬಂದ್ ಗೆ ಕರೆ ನೀಡಿರುವ ಅಂಜುಮನ್ ಸಂಸ್ಥೆ

|

Updated on: Apr 22, 2024 | 11:42 AM

ಹುಬ್ಬಳ್ಳಿ ನಗರದ ಶಾಹ ಬಜಾರ್ ನಲ್ಲಿ ಸುಮಾರು 1,000 ಮುಸ್ಲಿಂ ವ್ಯಾಪಾರಸ್ಥರಿದ್ದು ಅವರೆಲ್ಲ ಅಂಗಡಿಗಳನ್ನು ಮುಚ್ಚಿ ನೇಹಾ ಕುಟುಂಬದ ಜೊತೆ ಐಕ್ಯತೆಯನ್ನು ಪ್ರದರ್ಶಿಸಿದ್ದಾರೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಫಯಾಜ್ ಪರ ಯಾರೂ ವಕಾಲತ್ತು ವಹಿಸಬಾರದೆಂದು ಮುಸ್ಲಿಂ ವಕೀಲರ ಜೊತೆ ಹುಬ್ಬಳ್ಳಿ-ಧಾರವಾಡ ವಕೀಲರ ಸಂಘ ಸಹ ನಿರ್ಧರಿಸಿದೆ.

ಹುಬ್ಬಳ್ಳಿ: ನಗರದ ಕಾಲೇಜು ಯುವತಿ ನೇಹಾ ಹಿರೇಮಠಳನ್ನು (Neha Hiremath) ಹತ್ಯೆಗೈದ ಫಯಾಜ್ (Fayaz) ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಹುಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆ ಎನಿಸಿಕೊಂಡಿರುವ ಅಂಜುಮನ್ (Anjuman Organisation) ನೇಹಾ ಹತ್ಯೆಯನ್ನು ಖಂಡಿಸಿ ಇಂದು ಎರಡೂ ನಗರಗಳಲ್ಲಿನ ಅಂಗಡಿ ಮುಂಗಟ್ಟುಗಳನ್ನು ಅರ್ಧದಿನದ ಮಟ್ಟಿಗೆ ಬಂದ್ ಮಾಡಲು ಕರೆ ನೀಡಿದ್ದು ಉತ್ತಮ ಪ್ತತಿಕ್ರಿಯೆ ವ್ಯಕ್ತವಾಗಿದೆ. ಟಿವಿ9 ಹುಬ್ಬಳ್ಳಿ ವರದಿಗಾರ ಹುಬ್ಬಳ್ಳಿ ವರದಿಗಾರ ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಅರ್ಧದಿನದ ಬಂದ್ ಕುರಿತಂತೆ ಒಂದು ಪ್ರತ್ಯಕ್ಷ ವರದಿ ನೀಡಿದ್ದಾರೆ. ನೇಹಾ ಕೊಲೆ ನಡೆದು ಇಂದಿಗೆ 5 ದಿನ ಕಳೆದಿವೆ ಮತ್ತು ‘ಜಸ್ಟಿಸ್ ಟು ನೇಹಾ ಹಿರೇಮಠ’ ಅಂತ ಬರೆದಿರುವ ಪ್ಲೆಕಾರ್ಡ್ ಗಳನ್ನು ಬಂದ್ ಮಾಡಿರುವ ಅಂಗಡಿಗಳ ಮುಂದೆ ತೂಗುಹಾಕಲಾಗಿದೆ. ವರದಿಗಾರ ಹೇಳುವಂತೆ ಹುಬ್ಬಳ್ಳಿ ನಗರದ ಶಾಹ ಬಜಾರ್ ನಲ್ಲಿ ಸುಮಾರು 1,000 ಮುಸ್ಲಿಂ ವ್ಯಾಪಾರಸ್ಥರಿದ್ದು ಅವರೆಲ್ಲ ಅಂಗಡಿಗಳನ್ನು ಮುಚ್ಚಿ ನೇಹಾ ಕುಟುಂಬದ ಜೊತೆ ಐಕ್ಯತೆಯನ್ನು ಪ್ರದರ್ಶಿಸಿದ್ದಾರೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಫಯಾಜ್ ಪರ ಯಾರೂ ವಕಾಲತ್ತು ವಹಿಸಬಾರದೆಂದು ಮುಸ್ಲಿಂ ವಕೀಲರ ಜೊತೆ ಹುಬ್ಬಳ್ಳಿ-ಧಾರವಾಡ ವಕೀಲರ ಸಂಘ ಸಹ ನಿರ್ಧರಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನೇಹಾ ಹಿರೇಮಠ ಮನೆಗೆ ಭೇಟಿ ನೀಡಿ ಆಘಾತದಿಂದ ಚೇತರಿಸಿಕೊಳ್ಳದ ತಂದೆತಾಯಿಗೆ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Follow us on