ನೇಹಾ ತಂದೆ ನಿರಂಜನ್ ಹಿರೇಮಠ ನಿವಾಸಕ್ಕೆ ಮುಸ್ಲಿಂ ಮುಖಂಡರ ಭೇಟಿ
ನಗರದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ನಿರಂಜನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಬಿಡನಾಳ ಬಡಾವಣೆಯಲ್ಲಿರುವ ನೇಹಾ ತಂದೆ ನಿರಂಜನ್ ಹಿರೇಮಠ ನಿವಾಸಕ್ಕೆ ಮುಸ್ಲಿಂ ಮುಖಂಡರು ಭೇಟಿ ನೀಡಿ ಸಾಂತ್ವಾನ ಹೇಳಿದರು. ‘ನಿನ್ನೆ(ಏ.19) ನಿಮ್ಮನ್ನು ಭೇಟಿಯಾಗಲು ಧೈರ್ಯ ಸಾಲಲಿಲ್ಲ. ನಿಮಗೆ ಧೈರ್ಯ ಹೇಳೋಕೆ ಮನಸು ಇಲ್ಲ ಎಂದು ಮುಸ್ಲಿಂ ಮುಖಂಡರು ಹೇಳಿದರು.
ಹುಬ್ಬಳ್ಳಿ, ಏ.20: ನಗರದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ನಿರಂಜನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ (Hubballi)ಯ ಬಿಡನಾಳ ಬಡಾವಣೆಯಲ್ಲಿರುವ ನೇಹಾ ತಂದೆ ನಿರಂಜನ್ ಹಿರೇಮಠ ನಿವಾಸಕ್ಕೆ ಮುಸ್ಲಿಂ ಮುಖಂಡರು ಭೇಟಿ ನೀಡಿ ಸಾಂತ್ವಾನ ಹೇಳಿದರು. ‘ನಿನ್ನೆ(ಏ.19) ನಿಮ್ಮನ್ನು ಭೇಟಿಯಾಗಲು ಧೈರ್ಯ ಸಾಲಲಿಲ್ಲ. ನಿಮಗೆ ಧೈರ್ಯ ಹೇಳೋಕೆ ಮನಸು ಇಲ್ಲ ಎಂದು ಮುಸ್ಲಿಂ ಮುಖಂಡರು ಹೇಳಿದರು. ಈ ವೇಳೆ ಮೃತ ಯುವತಿ ತಂದೆ ನಿರಂಜನ್, ‘ಅಣ್ಣ ಯಾರೋ ಒಬ್ಬರು ಮಾಡಿದ್ರೆ ನಾನ ಯಾವಾಗ ನಿಮ್ಮ ಸಮಾಜದ ಬಗ್ಗೆ ಮಾತಾಡೀನಿ, ನೇಹಾ ನಮ್ಮ ಮನೆ ಮಾಹಾಲಕ್ಷ್ಮೀ, ಅವಳನ್ನು ಯಾರೋ ಟಾರ್ಗೆಟ್ ಮಾಡಿದ್ದರೆ ಎಂದರು.
ಇದೇ ವೇಳೆ ಮುಸ್ಲಿಂ ಮುಖಂಡರು, ‘ ಟಾರ್ಗೆಟ್ ಮಾಡಿದವರಿಗೆ ಒಳ್ಳೆದ ಆಗಲ್ಲ. ನಾವ ಕೆಟ್ಡದ್ದ ವಿಚಾರ ಮಾಡಿದ್ರೆ, ದೇವ್ರು ನಮಗೆ ಕೆಟ್ಟದ್ದು ಮಾಡ್ತಾನೆ. ನಾವೆಲ್ಲರೂ ನಿಮ್ಮ ಜೊತೆ ಇದೀವಿ. ನಾನು ಮತ್ತು ನಿರಂಜನ್ ಡಿಗ್ರೀವರೆಗೂ ಒಟ್ಟಿಗೆ ಕಲಿತಿದ್ದೇವೂ ಎಂದರು. ಈ ವೇಳೆ ಹರಿಹರ ಪೀಠದ ವಚಾನನಂದ ಸ್ವಾಮೀಜಿ ಕೂಡ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ