ಕಲಬುರಗಿ: ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ. ಕಲಬುರಗಿಯಲ್ಲಿ 80 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡುವ ಮೂಲಕ ದೃಢಪಡಿಸಿದ್ದಾರೆ.
ವೃದ್ಧ ಕಳೆದ 3 ವರ್ಷಗಳಿಂದ ಪಾರ್ಕಿನ್ಸನ್ ನಿಂದ ಬಳಲುತ್ತಿದ್ದರು. ಮಧ್ಯರಾತ್ರಿ ಜ್ವರ, ನಿಶ್ಯಕ್ತಿ ಕಂಡು ಬಂದದ್ದ ಹಿನ್ನೆಲೆ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಬೆಳಗ್ಗೆ 9 ಗಂಟೆಗೆ ವೃದ್ಧ ಮೃತಪಟ್ಟಿದ್ದಾರೆ. ನಂತರ ನಿನ್ನೆ ರಾತ್ರಿ ಮೃತರ ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ಇದ್ದದ್ದು ತಿಳಿದುಬಂದಿದೆ.
ಕಲಬುರಗಿಯಲ್ಲಿ ಈಗಾಗಲೇ ಕೊರೊನಾ ಸೋಂಕಿಗೆ 3ಜನ ಮೃತಪಟ್ಟಿದ್ದರು. ಇದು 4 ಮೃತ ಪ್ರಕರಣವಾಗಿದೆ. ರಾಜ್ಯದಲ್ಲೇ ಹೆಚ್ಚು ಮೃತರ ಸಂಖ್ಯೆ ಕಲಬುರಗಿಯಲ್ಲಿ ದಾಖಲಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಈವರೆಗೆ ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ 17 ಜನ ಬಲಿಯಾಗಿದ್ದು, ಕಲಬುರಗಿಯಲ್ಲಿ 4, ಬೆಂಗಳೂರು 4, ಚಿಕ್ಕಬಳ್ಳಾಪುರ 2, ವಿಜಯಪುರ 2, ಬಾಗಲಕೋಟೆ 1, ದಕ್ಷಿಣ ಕನ್ನಡ 1, ಬೆಳಗಾವಿ 1, ತುಮಕೂರು 1, ಗದಗದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
Published On - 8:15 am, Tue, 21 April 20