ನರಗುಂದದಲ್ಲಿ ಮತ್ತೆ ಭೂಕುಸಿತ, 5 ಮಂದಿ ಪ್ರಾಣಾಪಾಯದಿಂದ ಪಾರು

  • TV9 Web Team
  • Published On - 12:22 PM, 22 Nov 2019
ನರಗುಂದದಲ್ಲಿ ಮತ್ತೆ ಭೂಕುಸಿತ, 5 ಮಂದಿ ಪ್ರಾಣಾಪಾಯದಿಂದ ಪಾರು

ಗದಗ: ನರಗುಂದದಲ್ಲಿ ಭೂಕುಸಿತ ಮುಂದುವರೆದಿದೆ. ಗದಗ ಜಿಲ್ಲೆಯ ನರಗುಂದ ಪಟ್ಟಣದ ಕಸಬಾ ಓಣಿಯಲ್ಲಿ ರಾತ್ರಿ ಭೂಕುಸಿತದಿಂದ ಮನೆಯೊಂದರ ಗೋಡೆ ಬಿದ್ದಿದೆ. ರಾತ್ರಿ ಮಲಗಿದ್ದಾಗ ಮಣ್ಣು ಉದುರುತ್ತಿದ್ದದ್ದು ಭಾಸವಾಗಿ ಕಾಶಪ್ಪ ಗುಡಗಾನೂರ ಕುಟುಂಬದ 5 ಮಂದಿ, ಮನೆಯಿಂದ ಹೊರಬಂದಿದ್ದಾರೆ.

ಈ ವೇಳೆ ಭೂಕುಸಿತದಿಂದ ಮನೆ ಗೋಡೆ ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಆ ಐವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು, ಇದೇ ತಿಂಗಳಲ್ಲಿ 9 ಬಾರಿ ಭೂಕುಸಿತವಾಗಿದೆ. ಈ ರೀತಿ ಪದೇ ಪದೇ ಭೂಮಿ ಕುಸಿಯುತ್ತಿರುವ ಹಿನ್ನೆಲೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.