ಮಂಗಳೂರು: Dab It! ಕರ್ನಾಟಕದಲ್ಲಿ ದಿಢೀರನೇ ಉಸೇನ್ ಬೋಲ್ಟ್ಗಳು ಉದಯಿಸಿದ್ದಾರೆ. ಇದನ್ನು ಕಂಡ ಜನ ಭಾವಪರವಶರಾಗಿ ಡ್ಯಾಬ್ ಇಟ್, ಡ್ಯಾಬ್ ಇಟ್ ಅಂತಿದ್ಧಾರೆ. ಕೆಲ ದಿನಗಳ ಹಿಂದೆ ಕಂಬಳ ಗದ್ದೆಯಲ್ಲಿ ಓಡೋಡಿ ಉಸೇನ್ ಬೋಲ್ಟ್ನ ದಾಖಲೆಗಳನ್ನು ಕಣ್ ಮಿಟಿಕಿಸುವುದರೊಳಗಾಗಿ ಶ್ರೀನಿವಾಸಗೌಡ ಕರ್ನಾಟಕದ ಉಸೇನ್ ಬೋಲ್ಟ್ ಆಗಿ ಮಿಂಚಿದ್ದರು.
ಆದರೆ ಈ ದಾಖಲೆಯನ್ನು ಮತ್ತೊಬ್ಬ ಕಂಬಳ ವೀರ ಮುರಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದ ಕಂಬಳ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ನಿಶಾಂತ್ ಶೆಟ್ಟಿ ಇದೀಗ ಶ್ರೀನಿವಾಸಗೌಡರಿಗಿಂತ ಜೋರಾಗಿ ಓಡಿ ಹಳೇ ರೆಕಾರ್ಡ್ಗಳನ್ನು ಪೀಸ್ ಪೀಸ್ ಮಾಡಿದ್ದಾರೆ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬಜಗೋಳಿಯ ನಿಶಾಂತ್ ಶೆಟ್ಟಿ 13.61 ಸೆಕೆಂಡ್ನಲ್ಲಿ 143 ಮೀಟರ್ ಕ್ರಮಿಸಿದ್ದಾರೆ. ಶ್ರೀನಿವಾಸ್ ಗೌಡ 13.62 ಸೆಕೆಂಡ್ನಲ್ಲಿ 142.5 ಮೀ. ಕ್ರಮಿಸಿದ್ದರು. ಸದ್ಯ ಕೆಲವೇ ಸೆಕೆಂಡುಗಳ ಅಂತರದಲ್ಲಿ ನಿಶಾಂತ್ ಶೆಟ್ಟಿ ಮೊದಲ ಸ್ಥಾನ ಪಡೆದು ಕರ್ನಾಟಕದ ಹೊಸ ಉಸೇನ್ ಬೋಲ್ಟ್ ಆಗಿದ್ದಾರೆ.
Published On - 11:02 am, Tue, 18 February 20