ಶಿವಮೊಗ್ಗ ಕಾಲೇಜಿನಲ್ಲಿ ಕಲರ್​ಫುಲ್ ಲೋಕ! ಸೀರೆಯುಟ್ಟು ಹೆಜ್ಜೆ ಹಾಕಿದ ವಿದ್ಯಾರ್ಥಿನಿಯರು

ಶಿವಮೊಗ್ಗ: ಸೀರೆಯುಟ್ಟು ಹೆಜ್ಜೆ ಹಾಕ್ತಿರೋ ಚೆಂದುಳ್ಳಿಯರು. ಟ್ರೆಂಡಿ ಡ್ರೆಸ್​ನಲ್ಲಿ ವೈಯ್ಯಾರ ತೋರ್ತಿರೋ ಚಕೋರಿಯರು. ಸ್ಟೈಲ್​ನಲ್ಲೇ ಬ್ಯೂಟಿಗಳು ಚಮಕ್. ಪಂಚೆ ತೊಟ್ಟು, ಶಲ್ಯ ಧರಿಸಿ ಹುಡುಗ್ರು ಎಂಟ್ರಿ ಕೊಟ್ರೆ ಕೇಳ್ಬೇಕಾ. ಟ್ರೆಡಿಶನಲ್​​ ಡೇ ಅಂದ್ರೆ ಕಾಲೇಜ್ ಕುವರಿಯರು ಕನ್ನಡಿ ಬಿಟ್ಟು ಹೊರಗೆ ಬರೋದೆ ಇಲ್ಲ. ಅದ್ರಲ್ಲೂ ಗಂಡೈಕ್ಳಂತೂ ಪಂಚೆ ಉಟ್ಕೊಂಡು ಬ್ಲ್ಯಾಕ್​ ಕಲರ್ ಶರ್ಟ್ ತೊಟ್ಟು ಗಾಗಲ್ ಹಾಕ್ಕೊಂಡು ರೌಂಡ್ಸ್ ಹಾಕಿದ್ರೆ ಮುಗಿದೋಯ್ತು ಕಥೆ. ಅಂದ್ಹಾಗೆ ಶಿವಮೊಗ್ಗ ನಗರದಲ್ಲಿರೋ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕ್ಯಾಂಪಸ್ ಸಿಕ್ಕಾಪಟ್ಟೆ ಕಲರ್​ಫುಲ್ […]

ಶಿವಮೊಗ್ಗ ಕಾಲೇಜಿನಲ್ಲಿ ಕಲರ್​ಫುಲ್ ಲೋಕ! ಸೀರೆಯುಟ್ಟು ಹೆಜ್ಜೆ ಹಾಕಿದ ವಿದ್ಯಾರ್ಥಿನಿಯರು
Follow us
ಸಾಧು ಶ್ರೀನಾಥ್​
|

Updated on:Feb 18, 2020 | 12:28 PM

ಶಿವಮೊಗ್ಗ: ಸೀರೆಯುಟ್ಟು ಹೆಜ್ಜೆ ಹಾಕ್ತಿರೋ ಚೆಂದುಳ್ಳಿಯರು. ಟ್ರೆಂಡಿ ಡ್ರೆಸ್​ನಲ್ಲಿ ವೈಯ್ಯಾರ ತೋರ್ತಿರೋ ಚಕೋರಿಯರು. ಸ್ಟೈಲ್​ನಲ್ಲೇ ಬ್ಯೂಟಿಗಳು ಚಮಕ್. ಪಂಚೆ ತೊಟ್ಟು, ಶಲ್ಯ ಧರಿಸಿ ಹುಡುಗ್ರು ಎಂಟ್ರಿ ಕೊಟ್ರೆ ಕೇಳ್ಬೇಕಾ.

ಟ್ರೆಡಿಶನಲ್​​ ಡೇ ಅಂದ್ರೆ ಕಾಲೇಜ್ ಕುವರಿಯರು ಕನ್ನಡಿ ಬಿಟ್ಟು ಹೊರಗೆ ಬರೋದೆ ಇಲ್ಲ. ಅದ್ರಲ್ಲೂ ಗಂಡೈಕ್ಳಂತೂ ಪಂಚೆ ಉಟ್ಕೊಂಡು ಬ್ಲ್ಯಾಕ್​ ಕಲರ್ ಶರ್ಟ್ ತೊಟ್ಟು ಗಾಗಲ್ ಹಾಕ್ಕೊಂಡು ರೌಂಡ್ಸ್ ಹಾಕಿದ್ರೆ ಮುಗಿದೋಯ್ತು ಕಥೆ. ಅಂದ್ಹಾಗೆ ಶಿವಮೊಗ್ಗ ನಗರದಲ್ಲಿರೋ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕ್ಯಾಂಪಸ್ ಸಿಕ್ಕಾಪಟ್ಟೆ ಕಲರ್​ಫುಲ್ ಆಗಿತ್ತು. ಇಷ್ಟು ದಿನ ಪಾಠ ಅಂತಿದ್ದ ಸ್ಟೂಡೆಂಟ್ಸ್​ ಕ್ಲಾಸ್​​ಗೆ ಮಾರೋ ಗೋಲಿ, ಮಾಡ್ರೋ ಹಾವಳಿ ಅಂದ್ರು.

ಕಲರ್​​ಫುಲ್ ಡ್ರೆಸ್​​ನಲ್ಲಿ ಮಿಂಚಿದ ವಿದ್ಯಾರ್ಥಿಗಳು: ಇಷ್ಟು ದಿನ ಯೂನಿಫಾರ್ಮ್​ ಹಾಕ್ಕೊಂಡು ಕಾಲೇಜ್​ಗೆ ಎಂಟ್ರಿ ಕೊಡ್ತಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳು ಕಲರ್​​ಫುಲ್ ಡ್ರೆಸ್​​ನಲ್ಲಿ ಮಿಂಚಿದ್ದೇ ಮಿಂಚಿದ್ದು. ಕಾಲೇಜ್​​ನಲ್ಲಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಟ್ರೆಡಿಶನಲ್ ಡೇಯಲ್ಲಿ ಸ್ಟೂಡೆಂಟ್ಸ್​ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ರು. ಹುಡುಗಿಯರು ಸಾಂಸ್ಕೃತಿಕ ಉಡುಗೆಯಲ್ಲಿ ಮಿಂಚಿದ್ರೆ, ಹುಡುಗರು ಹಳ್ಳಿ ಸ್ಟೈಲ್​ ಡ್ರೆಸ್​ನಲ್ಲಿ ಲುಕ್ ಕೊಟ್ರು.

ಬರೀ ಕ್ಲಾಸ್​​.. ಎಕ್ಸಾಂ ಅಂತಿದ್ದ ವಿದ್ಯಾರ್ಥಿಗಳು ಫುಲ್ ಖುಷಿ ಮೂಡ್​​ನಲ್ಲಿದ್ರು. ಕೆಲವರು ಫ್ರೆಂಡ್ಸ್​ ಜೊತೆ ಸೆಲ್ಫಿಗೆ ಪೋಸ್​​ ಕೊಟ್ರು. ಇತ್ತ ಉಪನ್ಯಾಸಕರು ಕೂಡ ವಿದ್ಯಾರ್ಥಿಗಳ ಜೊತೆ ಹೆಜ್ಜೆ ಹಾಕಿದ್ರು. ಒಟ್ನಲ್ಲಿ ಇಷ್ಟು ದಿನ ಮೊಬೈಲ್ ಫೋನ್, ಕ್ಲಾಸ್​ ರೂಂಗಳಲ್ಲಿ ಪಾಠದ ಟೆನ್ಷನ್​ನಲ್ಲಿ ಬ್ಯುಸಿಯಾಗಿದ್ದ ವಿದ್ಯಾರ್ಥಿಗಳು ಟ್ರೆಡಿಶನ್ ಡೇ ಸ್ಪೆಷಲ್​​ನಲ್ಲಿ ಮಿಂದೆದ್ರು. ಹುಡುಗಿಯರು ಡಿಫರೆಂಟ್ ಡ್ರೆಸ್​ನಲ್ಲಿ ಮಿಂಚಿದ್ರೆ, ಗಂಡೈಕ್ಳು ನಾವ್ಯಾರಿಗೂ ಕಡಿಮೆ ಇಲ್ಲ ಅಂತ ಲುಕ್ ಕೊಟ್ರು.

Published On - 12:22 pm, Tue, 18 February 20

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್