ಬೆಳಗಾವಿ, ಬೀಳಗಿ, ಹೊಳಲ್ಕೆರೆಯಲ್ಲಿ ಎಸಿಬಿ ದಾಳಿ: ಬಲೆಗೆ ಬಿದ್ದರು ಮೂವರು ಭ್ರಷ್ಟರು

|

Updated on: Mar 18, 2021 | 10:32 PM

ಬೆಳಗಾವಿ, ಬೀಳಗಿ ಮತ್ತು ಹೊಳಲ್ಕೆರೆ ಪಟ್ಟಣಗಳಲ್ಲಿ ಗುರುವಾರ (ಮಾರ್ಚ್ 18) ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಭ್ರಷ್ಟರನ್ನು ಬಲೆಗೆ ಕೆಡವಿದ್ದಾರೆ. ದಾಳಿ ವೇಳೆ ಲಕ್ಷಾಂತರ ರೂಪಾಯಿ ಅಕ್ರಮ ಹಣ ಪತ್ತೆಯಾಗಿದೆ.

ಬೆಳಗಾವಿ, ಬೀಳಗಿ, ಹೊಳಲ್ಕೆರೆಯಲ್ಲಿ ಎಸಿಬಿ ದಾಳಿ: ಬಲೆಗೆ ಬಿದ್ದರು ಮೂವರು ಭ್ರಷ್ಟರು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಬೆಳಗಾವಿ, ಬೀಳಗಿ ಮತ್ತು ಹೊಳಲ್ಕೆರೆ ಪಟ್ಟಣಗಳಲ್ಲಿ ಗುರುವಾರ (ಮಾರ್ಚ್ 18) ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಭ್ರಷ್ಟರನ್ನು ಬಲೆಗೆ ಕೆಡವಿದ್ದಾರೆ. ದಾಳಿ ವೇಳೆ ಲಕ್ಷಾಂತರ ರೂಪಾಯಿ ಅಕ್ರಮ ಹಣ ಪತ್ತೆಯಾಗಿದೆ.

ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್​ನ ಟೆಕ್ನಿಕಲ್​ ಜನರಲ್ ಮ್ಯಾನೇಜರ್​ ಸಿದ್ದನಾಯ್ಕ ಪ್ರಾಜೆಕ್ಟ್ ಮ್ಯಾನೇಜರ್ ಸಂಜೀವ್ ಕುಮಾರ್​ರಿಂದ ₹ 60,000 ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದರು. ಬೆಳಗಾವಿ ಸಿಟಿ ಬಸ್ ನಿಲ್ದಾಣದ ಕಾಮಗಾರಿ ಬಿಲ್​ ಮಂಜೂರು ಮಾಡಲು ಲಂಚ ಕೇಳಿದ್ದರು ಎನ್ನಲಾಗಿದೆ. ಮನೆಯಲ್ಲಿ ಲಂಚಪಡೆಯುವಾಗಲೇ ಎಸಿಬಿ ಕಾರ್ಯಾಚರಣೆ ನಡೆಸಿ, ಬಲೆಗೆ ಕೆಡವಿತು. ಮನೆಯಲ್ಲಿ ಶೋಧ ನಡೆಸಿದ ವೇಳೆ ₹ 23.56 ಲಕ್ಷ ಅಕ್ರಮ ಹಣ ಪತ್ತೆಯಾಗಿತ್ತು. ಎಸಿಬಿ ಎಸ್​ಪಿ ಬಿ.ಎಸ್.ನೇಮಗೌಡ ನೇತೃತ್ವದಲ್ಲಿ ಕಾಱಚರಣೆ ನಡೆಯಿತು.

ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮದ (ಕೆಬಿಜೆಎನ್​ಎಲ್) ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಹುಸೇನ್ ಲಿಂಗನ್ನವರ್ ಎಸಿಬಿ ಬಲೆಗೆ ಬಿದ್ದರು. ತಾಲ್ಲೂಕಿನ ಗುಡದಿನ್ನಿಯಲ್ಲಿರುವ ಪುನರ್ವಸತಿ ಕೇಂದ್ರದ ನಿವೇಶನ ದಾಖಲೆಯಲ್ಲಿ ಮರೆಗುದ್ದಿ ಗ್ರಾಮದ ಹನುಮಂತ ಹಳ್ಳಿ ಅವರ ಹೆಸರು ಸೇರ್ಪಡೆ ಮಾಡಲು ಹುಸೇನ್ ಲಂಚ ಕೇಳಿದ್ದರು. ತಂದೆ ಮೃತಪಟ್ಟ ಬಳಿಕ ದಾಖಲೆಯಲ್ಲಿ ಹೆಸರು ಸೇರಿಸಲು ₹ 3000 ಲಂಚ ಕೇಳಿದ್ದರು. ಕಚೇರಿಯಲ್ಲೇ ಲಂಚ ಪಡೆಯುವಾಗ ಬಾಗಲಕೋಟೆ ಎಸಿಬಿ ಡಿವೈಎಸ್​ಪಿ ಸುರೇಶ್​ ರೆಡ್ಡಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರು.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣ ಪಂಚಾಯ್ತಿಯ ಆರೋಗ್ಯ ನಿರೀಕ್ಷಕ ಪರಮೇಶ್ವರಪ್ಪ ಅಂಗಡಿಯೊಂದಕ್ಕೆ ಪರವಾನಗಿ ನೀಡಲು ₹ 2 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದರು. ಹೊಳಲ್ಕೆರೆ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಬಳಿ ವ್ಯಾಪಾರಿ ಸನತ್ ಅವರಿಂದ ಲಂಚ ಸ್ವೀಕರಿಸುತ್ತಿದ್ದಾಗ ಚಿತ್ರದುರ್ಗದ ಎಸಿಬಿ ಡಿವೈಎಸ್​ಪಿ ಬಸವರಾಜ್ ಕಾರ್ಯಾಚರಣೆ ನಡೆಸಿದರು.

ಇದನ್ನೂ ಓದಿ: ಸೇನಾ ನೇಮಕಾತಿಯಲ್ಲಿ ಭ್ರಷ್ಟಾಚಾರ: 23 ಆರೋಪಿಗಳಲ್ಲಿ 7 ಮಂದಿ ಸೇನಾಧಿಕಾರಿಗಳು

ಇದನ್ನೂ ಓದಿ: ಮುಜರಾಯಿ ಇಲಾಖೆಯಲ್ಲಿ ಬೃಹತ್ ಭ್ರಷ್ಟಾಚಾರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಭಾರಿ ಭ್ರಷ್ಟಾಚಾರದ ಆರೋಪ