Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಜರಾಯಿ ಇಲಾಖೆಯಲ್ಲಿ ಬೃಹತ್ ಭ್ರಷ್ಟಾಚಾರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಭಾರಿ ಭ್ರಷ್ಟಾಚಾರದ ಆರೋಪ

Corruption charges in Kollur Mookambika Temple: ರಾಜ್ಯದಲ್ಲಿ A ಗ್ರೇಡ್ ದೇವಸ್ಥಾನಗಳು 120 ಇವೆ. ಅದರಲ್ಲಿ A ಗ್ರೇಡ್ ದೇವಸ್ಥಾನವಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕೋಟ್ಯಾಂತರ ಹಣ ಮೋಸ ಆಗಿದೆ. ದೇವಸ್ಥಾನದ ಚಿನ್ನ,ಬೆಳ್ಳಿ, ಹಣದ ದುರುಪಯೋಗ ಆಗಿದೆ. ಬಂಗಾರದ ರೂಪದಲ್ಲಿ ಬಂದಿರುವ ದೇಣಿಗೆಯ ನೋಂದಣಿ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮುಜರಾಯಿ ಇಲಾಖೆಯಲ್ಲಿ ಬೃಹತ್ ಭ್ರಷ್ಟಾಚಾರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಭಾರಿ ಭ್ರಷ್ಟಾಚಾರದ ಆರೋಪ
ಕರ್ನಾಟಕ ರಾಜ್ಯ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ನಡೆದ ಸುದ್ದಿಗೋಷ್ಠಿ
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on: Mar 09, 2021 | 2:01 PM

ಬೆಂಗಳೂರು: ಮುಜರಾಯಿ ಇಲಾಖೆಯಲ್ಲಿ ಬೃಹತ್ ಭ್ರಷ್ಟಾಚಾರ. ಇಲಾಖೆಯ ಸುಪರ್ದಿಯಲ್ಲಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಹಗರಣಗಳ ಹುತ್ತಗಳು ಎದ್ದಿವೆ. ದೇವಸ್ಥಾನದಲ್ಲಿ ಅನ್ಯಾಯ ಆಗ್ತಿದೆ. ದೇವಸ್ಥಾನದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಕೇಳಿಬಂದಿದೆ.

ಮುಜರಾಯಿ ಇಲಾಖೆಯಲ್ಲಿ 31,200 ದೇವಸ್ಥಾನಗಳಿವೆ. ರಾಜ್ಯದಲ್ಲಿ A ಗ್ರೇಡ್ ದೇವಸ್ಥಾನಗಳು 120 ಇವೆ. ಅದರಲ್ಲಿ A ಗ್ರೇಡ್ ದೇವಸ್ಥಾನವಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕೋಟ್ಯಾಂತರ ಹಣ ಮೋಸ ಆಗಿದೆ. ದೇವಸ್ಥಾನದ ಚಿನ್ನ,ಬೆಳ್ಳಿ, ಹಣದ ದುರುಪಯೋಗ ಆಗಿದೆ. ಬಂಗಾರದ ರೂಪದಲ್ಲಿ ಬಂದಿರುವ ದೇಣಿಗೆಯ ನೋಂದಣಿ ಮಾಡಿಲ್ಲ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಮನ್ವಯಕ ಮೋಹನ್ ಗೌಡ ಅವರು ಆರೋಪಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿಯ ಫೋನ್ ಬಿಲ್ಲನ್ನು ದೇವಸ್ಥಾನದ ಹುಂಡಿಯಿಂದ ಪಾವತಿ ಮಾಡಲಾಗಿದೆ 2018- 19 ರ ದೇಣಿಗೆ ಸ್ವೀಕರಿಸಿದ ಪಟ್ಟಿ ಸರ್ಕಾರಕ್ಕೆ ಸಲ್ಲಿಸಿಲ್ಲ. 2017 ರಲ್ಲಿ ದೇವಸ್ಥಾನದಲ್ಲಿ ದೊಡ್ಡ ಹಗರಣ ನಡೆಯಿತು. ದೇವಸ್ಥಾನದ 4.4 ಕೆ‌ಜಿ ಚಿನ್ನವನ್ನು ಅಧಿಕಾರಿಗಳು, EO ಕಳ್ಳತನ ಮಾಡಿದ್ದರು. ನಕಲಿ ಸಿಬ್ಬಂದಿ ತೋರಿಸಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೀತಿದೆ. ಅಡ್ವಾನ್ಸ್ಡ್ ಪೇಮೆಂಟ್ ರಿಜಿಸ್ಟರ್ ದೇವಸ್ಥಾನದಲ್ಲಿಲ್ಲ.

Corruption charges in Kollur Mookambika Temple (2)

ಉಡುಪಿ ಜಿಲ್ಲಾಧಿಕಾರಿಯ ಫೋನ್ ಬಿಲ್ಲನ್ನು ದೇವಸ್ಥಾನದ ಹುಂಡಿಯಿಂದ ಪಾವತಿ ಮಾಡಲಾಗಿದೆ: ಆರೋಪ

ಸಾವಿರಾರು ಎಕರೆ ಜಮೀನು ದೇವಸ್ಥಾನ ಅಧೀನದಲ್ಲಿದೆ. ಆದರೆ ದೇವಸ್ಥಾನದಲ್ಲಿ ಯಾವುದೇ ಜಮೀನಿನ ದಾಖಲೆಗಳಿಲ್ಲ. ದೇವಸ್ಥಾನದ ಆಸ್ತಿಯನ್ನು ಸಾರ್ವಜನಿಕರು ಲೂಟಿ ಮಾಡ್ತಾ ಇದ್ದಾರೆ. ಕಟ್ಟಡ ನಿರ್ಮಾಣ ಕೆಲಸದಲ್ಲೂ ಟೆಂಡರ್ ಆಗದೇ ಹಣ ಪಾವತಿಯಾಗಿದೆ. ಉಡುಪಿ ಜಿಲ್ಲಾಧಿಕಾರಿಯ ಫೋನ್ ಬಿಲ್ಲನ್ನು ದೇವಸ್ಥಾನದ ಹುಂಡಿಯಿಂದ ಪಾವತಿ ಮಾಡಲಾಗಿದೆ. ಸರ್ಕಾರದಿಂದ ದೇವಸ್ಥಾನ ನಡೆಸಲು ಸಾಧ್ಯನಾ? ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ: ಸಮಾವೇಶಕ್ಕೆ ಮುನ್ನ ‘ಟೆಂಪಲ್​ ರನ್​’: ಕೊಲ್ಲೂರಿನಲ್ಲಿ ಡಿಕೆಶಿ, ಬನಶಂಕರಿ ಸನ್ನಿಧಿಯಲ್ಲಿ ಈಶ್ವರಪ್ಪ

ಸಮಾಜ ಸ್ವಾಮೀಜಿಯನ್ನು ಕಡೆಗಣಿಸಿಲಾರಂಭಿಸಿದರೆ ಅಚ್ಚರಿಯಿಲ್ಲ: ವಿಜುಗೌಡ
ಸಮಾಜ ಸ್ವಾಮೀಜಿಯನ್ನು ಕಡೆಗಣಿಸಿಲಾರಂಭಿಸಿದರೆ ಅಚ್ಚರಿಯಿಲ್ಲ: ವಿಜುಗೌಡ
2 ಬಾರಿ ಫೈನ್ ಕಟ್ಟಿದ ಬಳಿಕ ಹೊಸ ಸೆಲೆಬ್ರೇಷನ್ ಪರಿಚಯಿಸಿದ ದಿಗ್ವೇಶ್ ರಾಠಿ
2 ಬಾರಿ ಫೈನ್ ಕಟ್ಟಿದ ಬಳಿಕ ಹೊಸ ಸೆಲೆಬ್ರೇಷನ್ ಪರಿಚಯಿಸಿದ ದಿಗ್ವೇಶ್ ರಾಠಿ
ಅಧಿವೇಶನದ ಬಗ್ಗೆ ಬೆಂಗಳೂರಲ್ಲಿ ಬ್ರೀಫ್ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ
ಅಧಿವೇಶನದ ಬಗ್ಗೆ ಬೆಂಗಳೂರಲ್ಲಿ ಬ್ರೀಫ್ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ
ದಾಳಿಗೆ ಬಂದ ಚಿರತೆಯಿಂದ ಬಾಲಕನನ್ನು ರಕ್ಷಿಸಿದ ಶ್ವಾನಗಳು
ದಾಳಿಗೆ ಬಂದ ಚಿರತೆಯಿಂದ ಬಾಲಕನನ್ನು ರಕ್ಷಿಸಿದ ಶ್ವಾನಗಳು
ಕೊಕ್ಕನೂರ ಆಂಜನೇಯ ಉತ್ಸವದಲ್ಲಿ ಗಮನ ಸೆಳೆದ ಗರಿ ಗರಿ ನೋಟಿನ‌ ಪಲ್ಲಕ್ಕಿ
ಕೊಕ್ಕನೂರ ಆಂಜನೇಯ ಉತ್ಸವದಲ್ಲಿ ಗಮನ ಸೆಳೆದ ಗರಿ ಗರಿ ನೋಟಿನ‌ ಪಲ್ಲಕ್ಕಿ
ರಥಗಳ ಮೇಲೆ ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡ ಭಕ್ತರು
ರಥಗಳ ಮೇಲೆ ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡ ಭಕ್ತರು
ಬೆಟ್ಟಿಂಗ್ ಆ್ಯಪ್ ಪ್ರಮೋಷನ್​ಗೆ ಇನ್​ಫ್ಲುಯೆನ್ಸರ್​ಗಳು ಎಷ್ಟು ಪಡೀತಾರೆ?
ಬೆಟ್ಟಿಂಗ್ ಆ್ಯಪ್ ಪ್ರಮೋಷನ್​ಗೆ ಇನ್​ಫ್ಲುಯೆನ್ಸರ್​ಗಳು ಎಷ್ಟು ಪಡೀತಾರೆ?
ಶವ ಸಂಸ್ಕಾರದ ಸಮಯದಲ್ಲಿ ಮಾಡಿದ ಸಹಾಯ ಹೇಗೆ ಫಲ ಕೊಡುತ್ತೆ?
ಶವ ಸಂಸ್ಕಾರದ ಸಮಯದಲ್ಲಿ ಮಾಡಿದ ಸಹಾಯ ಹೇಗೆ ಫಲ ಕೊಡುತ್ತೆ?
ರವಿ ಮೀನ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯಲ್ಲಿ ಸಂಚಾರ
ರವಿ ಮೀನ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯಲ್ಲಿ ಸಂಚಾರ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ