ಸಮಾವೇಶಕ್ಕೆ ಮುನ್ನ ‘ಟೆಂಪಲ್​ ರನ್​’: ಕೊಲ್ಲೂರಿನಲ್ಲಿ ಡಿಕೆಶಿ, ಬನಶಂಕರಿ ಸನ್ನಿಧಿಯಲ್ಲಿ ಈಶ್ವರಪ್ಪ

ಭಾನುವಾರದಂದು ರಾಜಕೀಯ ನಾಯಕರು ತಮ್ಮ ರಾಜಕೀಯ ವರಸೆ, ಕಸರತ್ತುಗಳಿಗೆ ಕೊಂಚ ಬ್ರೇಕ್​ ಕೊಟ್ಟು ಫುಲ್ ರಿಲಾಕ್ಸ್​ ಮೂಡ್​ನಲ್ಲಿ ಇರಲು ಬಯಸುತ್ತಾರೆ. ಅಂತೆಯೇ, ಇಂದು ಕೆಲ ನಾಯಕರು ದೇವರ ಮೊರೆಹೋಗಿ ಕೊಂಚ ನೆಮ್ಮದಿ ಪಡೆಯಲು ಮುಂದಾದರು.

ಸಮಾವೇಶಕ್ಕೆ ಮುನ್ನ ‘ಟೆಂಪಲ್​ ರನ್​’: ಕೊಲ್ಲೂರಿನಲ್ಲಿ ಡಿಕೆಶಿ, ಬನಶಂಕರಿ ಸನ್ನಿಧಿಯಲ್ಲಿ ಈಶ್ವರಪ್ಪ
ರಾಜಕೀಯ ನಾಯಕರ ಟೆಂಪಲ್​ ರನ್​
Follow us
KUSHAL V
|

Updated on:Nov 29, 2020 | 12:30 PM

ಉಡುಪಿ/ಬಾಗಲಕೋಟೆ: ಭಾನುವಾರದಂದು ರಾಜಕೀಯ ನಾಯಕರು ತಮ್ಮ ರಾಜಕೀಯ ವರಸೆ, ಕಸರತ್ತುಗಳಿಗೆ ಕೊಂಚ ಬ್ರೇಕ್​ ಕೊಟ್ಟು ಫುಲ್ ರಿಲಾಕ್ಸ್​ ಮೂಡ್​ನಲ್ಲಿ ಇರಲು ಬಯಸುತ್ತಾರೆ. ಅಂತೆಯೇ, ಇಂದು ಕೆಲ ನಾಯಕರು ದೇವರ ಮೊರೆಹೋಗಿ ಕೊಂಚ ನೆಮ್ಮದಿ ಪಡೆಯಲು ಮುಂದಾದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಸುಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ‌ ಭೇಟಿಕೊಟ್ಟರು. ಮೂಕಾಂಬಿಕೆಯ ದರ್ಶನ ಪಡೆದ ಡಿ.ಕೆ.ಶಿವಕುಮಾರ್​ ನಂತರ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.

ಇದಲ್ಲದೆ, ದೇವಸ್ಥಾನದಲ್ಲಿ ನಡೆಯುತ್ತಿದ್ದ ರಥೋತ್ಸವದಲ್ಲೂ ಭಾಗಿಯಾದರು. ತದ ನಂತರ, ದೇವಸ್ಥಾನದ ವತಿಯಿಂದ ಡಿಕೆಶಿಗೆ ಪ್ರಸಾದ ಪ್ರದಾನ ಮಾಡಲಾಯಿತು. ದೇಗುಲದ ಅರ್ಚಕರಾದ ನರಸಿಂಹ ಅಡಿಗರು ಪ್ರಸಾದ ನೀಡಿ ಶಿವಕುಮಾರ್​ಗೆ ಗೌರವಿಸಿದರು.

ದರ್ಶನ ಪಡೆದ ನಂತರ ಉಡುಪಿಯತ್ತ ಪ್ರಯಾಣ ಬೆಳೆಸಿದ ಡಿ.ಕೆ.ಶಿವಕುಮಾರ್ ಮಾರ್ಗ ಮಧ್ಯೆ ಮಾರಣಕಟ್ಟೆ ದೇವಾಲಯಕ್ಕೂ ಭೇಟಿಕೊಟ್ಟರು. ಅಂದ ಹಾಗೆ, ಶಿವಕುಮಾರ್ ನಿನ್ನೆ ರಾತ್ರಿ ಕಮಲಶಿಲೆ ದೇವಾಲಯಕ್ಕೆ ಭೇಟಿ ನೀಡಿದ್ದರು ಎಂದು ಸಹ ತಿಳಿದುಬಂದಿದೆ.

ಜಿಲ್ಲೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳಲು ಶಿವಕುಮಾರ್ ಆಗಮಿಸಿದ್ದಾರೆ. ಡಿ.ಕೆ.ಶಿವಕುಮಾರ್​ ಉಡುಪಿಯ ಬಾಸೆಲ್ ಮಿಶನ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದ ಬಳಿಕ‌ ಸಂಜೆ ಉಡುಪಿಯ ಶ್ರೀಕೃಷ್ಣ ಮಠ, ಚರ್ಚ್ ಹಾಗೂ ಮಸೀದಿಗೂ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಬನಶಂಕರಿಯ ಸನ್ನಿಧಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಸಚಿವ ಕೆ.ಎಸ್.ಈಶ್ವರಪ್ಪ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಇತಿಹಾಸ ಪ್ರಸಿದ್ಧ ಬನಶಂಕರಿ ದೇವಸ್ಥಾನಕ್ಕೆ‌ ಭೇಟಿಕೊಟ್ಟರು. ಸಚಿವರೊಟ್ಟಿಗೆ ಅವರ ಪುತ್ರ ಕೆ.ಇ.ಕಾಂತೇಶ್ ಸಹ ಆಗಮಿಸಿದ್ದರು. ದೇವಿಯ ದರ್ಶನ ಪಡೆದ ಈಶ್ವರಪ್ಪ ಇಂದು ಜಿಲ್ಲೆಯಲ್ಲಿ ನಡೆಯಲಿರುವ ಕುರುಬ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಬನಶಂಕರಿಯ ಸನ್ನಿಧಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ

Published On - 12:20 pm, Sun, 29 November 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ