ಬಿಎಸ್​ವೈ ಬೆಂಬಲಿಗರ ಬದಲಾವಣೆ ಕಸರತ್ತು: ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ವಾಪಸ್

| Updated By: Rakesh Nayak Manchi

Updated on: Jul 12, 2022 | 8:19 AM

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ನೇಮಕಗೊಂಡಿದ್ದ ನಿಗಮ ಮಂಡಳಿಗಳ ಅಧ್ಯಕ್ಷರ ಬದಲಾವಣೆ ಕಸರತ್ತು ಮುಂದುವರಿಕೆ. 47 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ವಾಪಸ್​ ಪಡೆದ ರಾಜ್ಯ ಸರ್ಕಾರ.

ಬಿಎಸ್​ವೈ ಬೆಂಬಲಿಗರ ಬದಲಾವಣೆ ಕಸರತ್ತು: ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ವಾಪಸ್
ವಿಧಾನಸೌಧ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರು ಸಿಎಂ ಕುರ್ಚಿಯಿಂದ ಕೆಳಗಿಳಿದು ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕರ್ಚಿಯಲ್ಲಿ ಕುಳಿತ ನಂತರ ನಿಗಮ ಮಂಡಳಿಗಳಲ್ಲಿನ ಯಡಿಯೂರಪ್ಪ ಬೆಂಬಲಿಗರ ಬದಲಾವಣೆಯ ಕಸರತ್ತುಗಳು ನಡೆಯುತ್ತಲೇ ಇದೆ. ಇದರ ಮುಂದುವರಿದ ಭಾಗವೆಂಬಂತೆ, 47 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಶಾಸಕರು, ಮಾಜಿ ಶಾಸಕರು ಅಧ್ಯಕ್ಷರಿರುವ ನಿಗಮ ಮಂಡಳಿ ಬಿಟ್ಟು ಉಳಿದ 47 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ ಪಡೆಯಲಾಗಿದೆ.

ಇದನ್ನೂ ಓದಿ: Bharat Gaurav Train: ಕಾಶಿ ಬಹಳ ದೂರವಿಲ್ಲ, ಶ್ರಾವಣದ ಕೊನೆಯ ವಾರದಲ್ಲಿ ಕರ್ನಾಟಕದಿಂದ ಕಾಶಿಗೆ ‘ಭಾರತ್‌ ಗೌರವ್‌’ ರೈಲು: ಜೊಲ್ಲೆ

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಯಾವಾಗ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿದಿದ್ದರೋ ಅದರ ನಂತರದ ದಿನಗಳಲ್ಲಿ ಅವರ ಅಧಿಕಾರವಧಿಯಲ್ಲಿ ನೇಮಕಗೊಂಡಿದ್ದ ಅಧ್ಯಕ್ಷರುಗಳನ್ನು ಬದಲಾವಣೆ ಮಾಡುವ ಕಸರತ್ತು ನಡೆಯುತ್ತಲೇ ಬಂದಿದೆ.

ಇದನ್ನೂ ಓದಿ: Karnataka Rain: ಜುಲೈ 14ರವರೆಗೆ ಕರ್ನಾಟಕದಲ್ಲಿ ವ್ಯಾಪಕ ಮಳೆ, ಶಾಲೆಗಳಿಗೆ ರಜೆ; ಕರಾವಳಿಗೆ ರೆಡ್ ಅಲರ್ಟ್​ ಘೋಷಣೆ

ಇದೀಗ ಬಿಎಸ್​ವೈ ಅಧಿಕಾರಾವಧಿಯಲ್ಲಿ ನೇಮಕಗೊಂಡು ಒಂದೂವರೆ ವರ್ಷ ಪೂರೈಸಿದ 47 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ ಪಡೆಯಲಾಗಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಹೊಸ ಅಧ್ಯಕ್ಷರನ್ನು ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲದೆ ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಕೂಡ ಶೀಘ್ರದಲ್ಲೇ ನೇಮಕ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಬಂಗಾಳಕೊಲ್ಲಿ ವಾಯುಭಾರ ಕುಸಿತ: ಕರ್ನಾಟಕ, ಗುಜರಾತ್, ಮಹಾರಾಷ್ಟ್ರದಲ್ಲಿ ಭಾರಿ ಮಳೆ

Published On - 8:19 am, Tue, 12 July 22