ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಕೇಸ್​: ಬೊಮ್ಮಾಯಿ-ಸಿದ್ದರಾಮಯ್ಯ ಮಧ್ಯೆ ಮಾತಿನ ಜಟಾಪಟಿ

| Updated By: ವಿವೇಕ ಬಿರಾದಾರ

Updated on: Feb 25, 2023 | 11:35 AM

ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ, ನಾನಲ್ಲ (ಸಿಎಂ ಬೊಮ್ಮಾಯಿ). ಕೆಂಪಣ್ಣ ಆಯೋಗದ ವರದಿಯನ್ನು ನಾನು ಓದಿದ್ದೇನೆ. ಈ ಹಿನ್ನೆಲೆ ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಕೇಸ್​: ಬೊಮ್ಮಾಯಿ-ಸಿದ್ದರಾಮಯ್ಯ ಮಧ್ಯೆ ಮಾತಿನ ಜಟಾಪಟಿ
ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ (Arkavathi Layout Denotification) ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಮಧ್ಯೆ ವಾಗ್ಯುದ್ಧ ಶುರುವಾಗಿದೆ. ಸಿದ್ದರಾಮಯ್ಯ (Siddaramaiah) ಸುಳ್ಳು ಹೇಳಿದ್ದಾರೆ, ನಾನಲ್ಲ (ಸಿಎಂ ಬೊಮ್ಮಾಯಿ). ಕೆಂಪಣ್ಣ ಆಯೋಗದ ವರದಿಯನ್ನು ನಾನು ಓದಿದ್ದೇನೆ. ಈ ಹಿನ್ನೆಲೆ ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಅಧಿಕಾರಿಗಳು ವರದಿಯನ್ನು ತೆಗೆದುಕೊಂಡು ಬಂದಿದ್ದರೆಂದು ಅವರೇ ಹೇಳಿದ್ದಾರೆ. ಇದರ ಅರ್ಥ ಏನು, ಅವರು ಅಡ್ಮಿಷನ್ ಆದಾಗೆ ಅಲ್ವಾ?, ವರದಿಯನ್ನು ಅನುಮೋದಿಸಿದ್ದೇನೆ ಎಂದು ಬರೆದಿದ್ದೇನೆ. ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ, ಅದನ್ನೇ ನಾನು ಹೇಳಿದ್ದೇನೆ. ಸಿದ್ದರಾಮಣ್ಣನವರು ಕಟುಸತ್ಯ ಎದುರಿಸುವ ಕಾಲ ಬಂದಿದೆ. ಈಗಾಗಲೇ ಏನು ಕ್ರಮ ಕೈಗೊಳ್ಳಬೇಕು ಅದನ್ನು ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಅವರು ಅಡ್ವೇಕೇಟ್ ಜನರಲ್ ವಾದ ಹೇಳಿದ್ದಾರೆ. ಆದರೆ ಆದೇಶ ಏನು ಬಂತು ಅದು ಮುಖ್ಯ ಅಲ್ವಾ? ಆದೇಶದಲ್ಲಿ ಕ್ಲಿಯರ್ ಆಗಿ ಹೇಳಿದ್ದಾರೆ. ಅದನ್ನ ನಾನು ಹೇಳಿದ್ದೇನೆ ಎಂದರು.

ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಿದ್ದ ಸಿಎಂ

ಗುರುವಾರ (ಫೆ.23) ಬಜೆಟ್​ ಮೇಲಿನ ಚರ್ಚೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್​​ ಕುರಿತು ನ್ಯಾ. ಕೆಂಪಣ್ಣ ಆಯೋಗದ ವರದಿಯನ್ನು ಪ್ರಸ್ತಾಪಿಸಿ “ನೀವು ಭ್ರಷ್ಟರಾಗಿದ್ದಲ್ಲದೇ ವ್ಯವಸ್ಥೆಯನ್ನೂ ಭ್ರಷ್ಟಗೊಳಿಸಿದ್ದೀರಿ. ಈ ಹಿನ್ನೆಲೆ ಕಾಂಗ್ರೆಸ್​ ಆಡಳಿತದ ಅವಧಿಯ ಎಲ್ಲ ಭ್ರಷ್ಟಾವಾರದ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಿ ತಪ್ಪಿತಸ್ಥರನ್ನು ಶಿಕ್ಷಿಸದೆ ಬಿಡುವುದಿಲ್ಲ” ಎಂದು ಬೊಮ್ಮಾಯಿ ಶಪತಗೈದರು.

ಸಿಎಂ ಬೊಮ್ಮಾಯಿ ಸುಳ್ಳು ಆರೋಪ ಮಾಡಿದ್ದಾರೆ

ಸಿಎಂ ಬೊಮ್ಮಾಯಿ ಸದನದಲ್ಲಿ ಗುಡುಗಿದ ಬೆನ್ನಲ್ಲೇ ನಿನ್ನೆ (ಫೆ.24) ಸುದ್ದಿಗೋಷ್ಠಿ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧದ ಶೇ 40 ರಷ್ಟು ಕಮಿಷನ್​ ಆರೋಪ ಹಾಗೂ ಸಾಲು ಸಾಲಾಗಿ ಹೊರಬರುತ್ತಿರುವ ಹಗರಣಗಳನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:33 am, Sat, 25 February 23