
ಕರಾವಳಿಯ ಗಂಡುಕಲೆ ಯಕ್ಷಗಾನ ರಂಗದಲ್ಲಿ ಕಳೆದ 16 ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮುಸ್ಲಿಂ ಯುವತಿ ಆರ್ಷಿಯಾ ಖಾನ್ ಅವರ ಸಾಧನೆ ಅಪೂರ್ವವಾದದ್ದು. ಧಾರ್ಮಿಕ ಸೌಹಾರ್ದತೆಗೆ ಅತ್ಯುತ್ತಮ ಉದಾಹರಣೆಯಾಗಿರುವ ವಿಟ್ಲದ ಆರ್ಷಿಯಾ, ಈಗ ಈ ಬಾರಿಯ ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಪ್ರದರ್ಶನಗೊಳ್ಳಲಿರುವ ಪ್ರಸಿದ್ಧ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನದಲ್ಲಿ ದೇವಿಯಾಗಿ ಬಣ್ಣಹಚ್ಚಲು ಸಜ್ಜಾಗಿದ್ದಾರೆ.
‘ಯಕ್ಷಪ್ರಿಯೆ ತನು ವಿಟ್ಲ’ ಎಂದೇ ಪರಿಚಿತರಾಗಿರುವ ಆರ್ಷಿಯಾ, ಕದ್ರಿಯ ಕದಳಿ ಕಲಾ ಕೇಂದ್ರದ ವಿದ್ಯಾರ್ಥಿನಿ. ಈ ಕೇಂದ್ರವು ನಗರದ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಆಯೋಜಿಸಿರುವ ‘ಕದಳಿ ದಶಾಹಃ’ ಯಕ್ಷಗಾನ ಹಬ್ಬದ ಭಾಗವಾಗಿ ಅ.20ರಂದು ಪ್ರದರ್ಶನಗೊಳ್ಳಲಿರುವ ಸಂಪೂರ್ಣ ‘ಶ್ರೀದೇವಿ ಮಹಾತ್ಮೆ’ಯಲ್ಲಿ ಅಷ್ಟಭುಜ ಧಾರಣಿ ದೇವಿಯಾಗಿ ಆರ್ಷಿಯಾ ರಂಗದಲ್ಲಿ ಮಿಂಚಲಿದ್ದಾರೆ.
‘12 ವರ್ಷಗಳಿಂದ ಯಕ್ಷಗಾನ ಪಾತ್ರಗಳನ್ನು ಮಾಡುತ್ತಿದ್ದೇನೆ. ಆದಿಮಾಯೆ, ವಿವಿಧ ಅಸುರ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಕಟೀಲು ದುರ್ಗಪರಮೇಶ್ವರಿ ತಾಯಿ ಆದ ಉಳ್ಳಾಲ್ತಿ ಅಮ್ಮನ ಮೇಲಿನ ಭಕ್ತಿಯೇ ನನ್ನ ಯಕ್ಷಗಾನದ ಆಸಕ್ತಿಗೆ ಕಾರಣ. ಈ ಬಾರಿ ನವರಾತ್ರಿಯ ಪರ್ವಕಾಲದಲ್ಲಿ ದೇವಿ ಪಾತ್ರ ಮಾಡಲು ಅವಕಾಶ ದೊರೆತಿರುವುದು ನನ್ನ ಪಾಲಿನ ಭಾಗ್ಯ. ಅಷ್ಟಭುಜ ಧರಿಸಿ ವೇದಿಕೆಯೇರುವ ಆ ಪವಿತ್ರ ಕ್ಷಣದ ಕಲ್ಪನೆಯೇ ನನ್ನಲ್ಲಿ ಕಂಪನ ಸೃಷ್ಟಿಸುತ್ತಿದೆ’ ಎಂದು ಆರ್ಷಿಯಾ ಹೇಳಿಕೊಂಡಿದ್ದಾರೆ.
ಅರ್ಷಿಯಾ ಖಾನ್ (ತನು ವಿಟ್ಲ) ಅವರು ಕರಾವಳಿಯ ಪ್ರಸಿದ್ಧ ಗಂಡುಕಲೆ ಯಕ್ಷಗಾನ ರಂಗದಲ್ಲಿ ಗುರುತಿಸಿಕೊಂಡಿರುವ ಮೊದಲ ಮುಸ್ಲಿಂ ಮಹಿಳಾ ಯಕ್ಷಗಾನ ಕಲಾವಿದೆಯಾಗಿದ್ದಾರೆ. ಇವರು ಕರಾವಳಿಯ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಧಾರ್ಮಿಕ ಸೌಹಾರ್ದತೆಗೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ.
ಇದನ್ನೂ ಓದಿ: ಹನುಮಾನ್ ಚಾಲೀಸಾ ಉಗಮದ ರೋಚಕ ಕಥೆ: ಬಂದೀಖಾನೆಯಲ್ಲಿ ತುಳಸಿದಾಸರು ರಚಿಸಿದ ದಿವ್ಯ ಸ್ತೋತ್ರದ ಇತಿಹಾಸ
2026 ರ ಆಗಸ್ಟ್ 20 ರಂದು ನವರಾತ್ರಿ ಪ್ರಯುಕ್ತ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನಡೆಯಲಿರುವ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟದಲ್ಲಿ ಇವರು ಮುಖ್ಯ ಭೂಮಿಕೆಯಾದ ‘ಶ್ರೀದೇವಿ’ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಇದು ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವೆಂದು ಪರಿಗಣಿಸಲಾಗುವ ‘ದೇವಿ ಮಹಾತ್ಮೆ’ ಪ್ರಸಂಗದಲ್ಲಿ ಶ್ರೀದೇವಿ (ದುರ್ಗೆ) ಪಾತ್ರವಾಗಿದೆ.

ಮಂಗಳೂರು ಮೂಲದ ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವತಿ. ಯಕ್ಷಗಾನ ರಂಗದಲ್ಲಿ ಇವರು ತನು ವಿಟ್ಲ ಎಂದೇ ಜನಪ್ರಿಯರಾಗಿದ್ದಾರೆ. ಈ ಬಗ್ಗೆ 9 ವರ್ಷ ಗಳ ಹಿಂದೆ Tv9 ಸುದ್ದಿವಾಹಿನಿ ಬೆಳಕು ಚೆಲ್ಲಿತ್ತು. ಯಕ್ಷಗಾನ ಕಲಾವಿದೆಯಾಗಿ ಹಲವು ವರ್ಷಗಳಿಂದ ವಿವಿಧ ಪಾತ್ರಗಳನ್ನು ಮಾಡುತ್ತಾ ಬಂದಿರುವ ಇವರು, ಮುಸ್ಲಿಂ ಧರ್ಮಕ್ಕೆ ಸೇರಿದ್ದರೂ ಸನಾತನ ಸಂಸ್ಕೃತಿಯ ಯಕ್ಷಗಾನದ ಮೇಲಿರುವ ಅಪಾರ ಆಸಕ್ತಿಯಿಂದ ಕಲೆ ಕಲಿತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Sun, 4 October 26