[lazy-load-videos-and-sticky-control id=”7JBVr1Cm1jo”]
ಕೊರೊನಾ ಮಹಾಮಾರಿಯ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರು ಸರ್ಕಾರ ಪದೇ ಪದೇ ನೀಡಿರುವ ಪೊಳ್ಳು ಭರವಸೆಗಳಿಂದ ಬೇಸತ್ತು ಹೋಗಿದ್ದಾರೆ. ಹೀಗಾಗಿ, ಸರ್ಕಾರ ಧೋರಣೆಯನ್ನ ಖಂಡಿಸಿ ಜುಲೈ 10ರಿಂದ ಅನಿರ್ದಿಷ್ಟಾವಧಿವರೆಗೆ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.
ಚಪ್ಪಾಳೆ ಮತ್ತು ಹೂಮಳೆಗಳ ಗೌರವೂ ಇರಲಿ. ಅದರೊಟ್ಟಿಗೆ ಗೌರವಯುತ ಬದುಕು ನಡೆಸಲು ಸಮರ್ಪಕ ಗೌರವ ಧನವೂ ಸಿಗಲಿ ಎಂಬ ಘೋಷವಾಕ್ಯದಡಿಯಲ್ಲಿ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ 42 ಸಾವಿರ ಆಶಾ ಕಾರ್ಯಕರ್ತೆಯರು ಮುಷ್ಕರ ನಡೆಸಲಿದ್ದಾರೆ. ಮಾಸಿಕ ಗೌರವ ಧನವನ್ನು 12 ಸಾವಿರಕ್ಕೆ ಹೆಚ್ಚಳ ಮಾಡುವುದರ ಜೊತೆಗೆ ಇತರೆ ಅಗತ್ಯ ಸೌಲಭ್ಯಗಳನ್ನೂ ಕಲ್ಪಿಸಿಕೊಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಲಿದ್ದಾರೆ.
Published On - 11:35 am, Tue, 7 July 20