ಬಳ್ಳಾರಿ: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಇದರಿಂದ ಇಡೀ ರಾಜ್ಯ ಸ್ತಬ್ಧವಾಗಿದೆ. ಜನರು ಬೇಕಾಬಿಟ್ಟಿಯಾಗಿ ಓಡಾದಂತೆ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಬಳ್ಳಾರಿಯ ಸಂಚಾರಿ ಪೊಲೀಸ್ ಬಾಣಂತಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಾನವೀಯತೆಯ ಮಾತುಗಳನ್ನು ಕೆಲವರು ಭಾಷಣ ಮಾಡುವಾಗ ಅಥವಾ ಇತರರ ಮುಂದೆ ಹೀರೋ ಎಂದೆನಿಕೊಳ್ಳುವಾಗ ಹೇಳುತ್ತಾರೆ. ಆದರೆ ಮಾನವೀಯ ಗುಣಗಳು ಭಾಷಣ ಬಿಗಿಯುವವರಿಗೇ ಇರುವುದಿಲ್ಲ. ಹಾಗಂತ ಎಲ್ಲರೂ ಈ ವರ್ಗಕ್ಕೆ ಸೇರುವುದಿಲ್ಲ. ಕೆಲವರು ತನಗೆ ತೊಂದರೆಯಾಗುತ್ತದೆ, ದುಡ್ಡು ಖರ್ಚಾಗುತ್ತದೆ ಎಂದು ಯೋಚಿಸದೆ ಬೇರೆಯವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ. ಹೀಗೆ ಸಹಾಯ ಮಾಡುವ ಮೂಲಕ ಬಳ್ಳಾರಿಯ ಸಂಚಾರಿ ಪೊಲೀಸ್ ಅಧಿಕಾರಿ ಮಾನವೀಯತೆ ಮೆರೆದಿದ್ದಾರೆ.
ಬಾಗೇಪಲ್ಲಿಯಿಂದ ಬಸ್ ಮೂಲಕ ಬಳ್ಳಾರಿಗೆ ಕವಿತಾ ಎಂಬ ಬಾಣಂತಿ ಮಹಿಳೆ ತನ್ನ ಮೂರು ತಿಂಗಳ ಶಿಶುವಿನೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ಬಂದಿದ್ದರು. ಬಳ್ಳಾರಿ ತಾಲೂಕಿನ ಗೋಟೂರು ಗ್ರಾಮಕ್ಕೆ ತೆರಳಬೇಕಿದ್ದ ಕವಿತಾ ವೀಕೆಂಡ್ ಕರ್ಫ್ಯೂನಿಂದ ವಾಹನಗಳಿಲ್ಲದೆ 3 ತಿಂಗಳ ಶಿಶು ಎತ್ತಿಕೊಂಡು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ನಗರದ ರಾಯಲ್ ವೃತ್ತದಲ್ಲಿ ಟ್ರಾಫಿಕ್ ಎಎಸ್ಐ ಹೆಚ್ ನಾಗಭೂಷಣ ಅವರಿಂದ ಆಕೆಯನ್ನು ವಿಚಾರಿಸಿದರು. ವಿಚಾರಿಸಿದ ಬಳಿಕ ಬಾಣಂತಿ ಗೋಟೂರು ಗ್ರಾಮಕ್ಕೆ ಹೋಗಬೇಕಾಗಿರುವುದು ಸಂಚಾರಿ ಪೊಲೀಸ್ ಆದ ನಾಗಭೂಷಣರವರಿಗೆ ತಿಳಿಯಿತು. 3 ತಿಂಗಳ ಶಿಶು ಎತ್ತಿಕೊಂಡು ನಡೆದು ಹೋಗುತ್ತಿದ್ದ ಬಾಣಂತಿ ಕವಿತಾಳನ್ನು ನಿಲ್ಲಿಸಿ ಆಕೆಗೆ ಮನೆ ಹೋಗಲು ಆಟೋ ವ್ಯವಸ್ಥೆ ಮಾಡುವ ಜೊತೆಗೆ ಆಟೋ ಬಾಡಿಗೆಯನ್ನು ಸ್ವತಃ ತಾವೇ ನೀಡಿ ಕಳುಹಿಸಿಕೊಟ್ಟರು.
ಇದನ್ನೂ ಓದಿ
ತೀರ್ಪು ನೀಡುವಾಗ ‘ಜಾಮೀನು ಅಲ್ಲ, ಜೈಲು‘ ಎಂಬ ತತ್ವವನ್ನು ಪಾಲಿಸಿ; ಹೈಕೋರ್ಟ್ಗಳಿಗೆ ಸುಪ್ರೀಂಕೋರ್ಟ್ ಸೂಚನೆ
ವೈರಸ್ ಅಧ್ಯಯನ ಕೇಂದ್ರ, ಲಸಿಕೆ ಉತ್ಪಾದನಾ ಸಂಸ್ಥೆಯಿರುವ ಪುಣೆಯಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವುದೇಕೆ?
(Assistant Sub Inspector helps to woman in bellary)