ಶಿವಮೊಗ್ಗ ದುರಂತಕ್ಕೆ ಇನ್ನೊಂದು ಟ್ವಿಸ್ಟ್​; ಸ್ಫೋಟಕ ಸಾಗಿಸಿದ್ದ ಇನ್ನೂ ಒಂದು ವಾಹನದ ಚಾಲಕ ನಾಪತ್ತೆ!

|

Updated on: Jan 23, 2021 | 11:23 AM

ಘಟನೆಯ ಬಳಿಕ ಶಶಿ, ತನ್ನ ಬೊಲೆರೋ ಸಮೇತ ನಾಪತ್ತೆಯಾಗಿದ್ದಾನೆ. ತಂದೆ ಬೋರೇಗೌಡನಿಗೆ ಕರೆ ಮಾಡಿ ತಾನು ಬದುಕಿದ್ದಾಗಿಯೂ ಹೇಳಿಕೊಂಡಿದ್ದಾನೆ. ಈತ ಭದ್ರಾವತಿ ತಾಲೂಕಿನ ಆರ್​.ಎಚ್​.ನಗರ ಗ್ರಾಮದ ನಿವಾಸಿಯಾಗಿದ್ದು, ಆಟೋ ಓಡಿಸುತ್ತಿದ್ದ.

ಶಿವಮೊಗ್ಗ ದುರಂತಕ್ಕೆ ಇನ್ನೊಂದು ಟ್ವಿಸ್ಟ್​; ಸ್ಫೋಟಕ ಸಾಗಿಸಿದ್ದ ಇನ್ನೂ ಒಂದು ವಾಹನದ ಚಾಲಕ ನಾಪತ್ತೆ!
ಸ್ಫೋಟಗೊಂಡು ಛಿದ್ರವಾಗಿರುವ ವಾಹನ
Follow us on

ಶಿವಮೊಗ್ಗ: ಹುಣಸೋಡಿನಲ್ಲಿ ಜನವರಿ 21ರ ರಾತ್ರಿ ಭಾರೀ ಪ್ರಮಾಣದಲ್ಲಿ ಜಿಲಿಟಿನ್ ಕಡ್ಡಿಗಳು ತುಂಬಿದ್ದ ಬೊಲೆರೋ ವಾಹನ ಸ್ಫೋಟವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಶಿ ಎನ್ನುವ ಮತ್ತೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಶಶಿಯ ತಂದೆ ಬೋರೆಗೌಡರನ್ನು ವಶಕ್ಕೆ ಪಡೆದಿದ್ದಾರೆ.

ಜ. 21ರಂದು ಬೊಲೆರೋ ವಾಹನ ಸ್ಫೋಟಗೊಂಡು ಅದರಲ್ಲಿದ್ದ ಪ್ರವೀಣ ಮತ್ತು ಮಂಜುನಾಥ್​ ಇಬ್ಬರೂ ಮೃತಪಟ್ಟಿದ್ದರು. ಅಂದು ಈ ಶಶಿ ಮತ್ತೊಂದು ಬೊಲೆರೋದಲ್ಲಿ ಸ್ಫೋಟಕಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ಅನ್​ಲೋಡ್​ ಮಾಡಿ ವಾಪಸ್ ಬಂದಿದ್ದಾನೆ. ಶಶಿ ಇತ್ತ ಬಂದ ಕೂಡಲೆ ಅತ್ತ ಹುಣಸೋಡಿನಲ್ಲಿ ಭಯಾನಕ ಸ್ಫೋಟ ಸಂಭವಿಸಿದೆ.

ತಂದೆಗೆ ಫೋನ್ ಮಾಡಿ ತಾನು ಬದುಕಿದ್ದಾಗಿ ಹೇಳಿಕೊಂಡ ಬೊಲೆರೋ ವಾಹನದ ಚಾಲಕ
ಈ ಘಟನೆಯ ಬಳಿಕ ಶಶಿ, ತನ್ನ ಬೊಲೆರೋ ವಾಹನದ ಸಮೇತ ನಾಪತ್ತೆಯಾಗಿದ್ದಾನೆ. ತಂದೆ ಬೋರೇಗೌಡನಿಗೆ ಕರೆ ಮಾಡಿ ತಾನು ಬದುಕಿದ್ದಾಗಿಯೂ ಹೇಳಿಕೊಂಡಿದ್ದಾನೆ. ಈತ ಭದ್ರಾವತಿ ತಾಲೂಕಿನ ಆರ್​.ಎಚ್​.ನಗರ ಗ್ರಾಮದ ನಿವಾಸಿಯಾಗಿದ್ದು, ಆಟೋ ಓಡಿಸುತ್ತಿದ್ದ. ಇತ್ತೀಚೆಗೆ ಹೊಸ ಕಾರನ್ನೂ ಖರೀದಿಸಿದ್ದ. ಅಷ್ಟೇ ಅಲ್ಲ, ಬೆಂಗಳೂರಿನಲ್ಲಿ ಸೈಟ್ ಕೂಡ ಖರೀದಿ ಮಾಡಿದ್ದ. ಕಡಿಮೆ ಅವಧಿಯಲ್ಲಿ ಇಷ್ಟು ಪ್ರಮಾಣದ ಆಸ್ತಿ ಮಾಡಿದ್ದು, ಗ್ರಾಮಸ್ಥರಲ್ಲಿ ಅಚ್ಚರಿಯನ್ನು ಮೂಡಿಸಿತ್ತು. ಇದೀಗ ಶಶಿಯ ಫೋನ್ ಕೂಡ ಸ್ವಿಚ್ ಆಫ್​ ಆಗಿದೆ. ಆತನ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ.

Shivamogga Blast ಪ್ರಕರಣಕ್ಕೆ ತಮಿಳುನಾಡು ಲಿಂಕ್​, ಮೃತಪಟ್ಟವರೆಲ್ಲರು ಭದ್ರಾವತಿ ಮೂಲದವರು..!

Published On - 11:22 am, Sat, 23 January 21