ಬೆಂಗಳೂರಲ್ಲಿ ಹತ್ಯೆ ಮಾಡಿದ್ದವರು ತಮಿಳುನಾಡಿನಲ್ಲಿ ಬಂಧನ!
ರಾಜಗೋಪಾಲನಗರದ ಕಸ್ತೂರಿನಗರದಲ್ಲಿ ಶ್ರೀನಿವಾಸ ಅಲಿಯಾಸ್ ಕರಿಸೀನ ಎಂಬುವವರ ಹತ್ಯೆ ಮಾಡಿದ್ದ ಗ್ಯಾಂಗ್ ತಮಿಳುನಾಡಿಗೆ ಪರಾರಿಯಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು: ರಾಜಗೋಪಾಲ ನಗರದ ಕಸ್ತೂರಿ ನಗರದಲ್ಲಿ ಜ. 9ರಂದು ಶ್ರೀನಿವಾಸ ಅಲಿಯಾಸ್ ಕರಿಸೀನ ಎಂಬುವವರ ಹತ್ಯೆಯಾಗಿತ್ತು. ಹತ್ಯೆ ಮಾಡಿದ್ದ ಗ್ಯಾಂಗ್ ತಮಿಳುನಾಡಿಗೆ ಪರಾರಿಯಾಗಿದ್ದು, ತಮಿಳುನಾಡು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಭಿಶೇಕ್, ರಘುವರನ್, ಪ್ರವೀಣ್, ಮನೋಜ್ ಕುಮಾರ್ ಬಂಧಿತ ಆರೋಪಿಗಳು. ಇವರು ಬೆಂಗಳೂರಿನಲ್ಲಿ ರಾಬರಿ ಮಾಡಿ, ಇಲ್ಲಿನ ಪೊಲೀಸರಿಂದ ತಪ್ಪಿಸಿಕೊಳ್ಳಲು ತಮಿಳುನಾಡಿನಲ್ಲಿ ಬಚ್ಚಿಟ್ಟುಕೊಂಡಿದ್ದರು.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಎಂಬುವವರನ್ನು ಹತ್ಯೆಗೈದ ಗ್ಯಾಂಗ್, ತಮಿಳುನಾಡಿಗೆ ಪರಾರಿಯಾಗಿದ್ದರು. ಅಲ್ಲಿ, ದರೋಡೆ ಪ್ರಕರಣದಲ್ಲಿ ತಮಿಳುನಾಡು ಪೊಲೀಸರಿಂದ ಬಂಧನಕ್ಕೊಳಗಾದರು. ಈ ಕುರಿತಂತೆ, ವಿಚಾರಣೆ ವೇಳೆ ಶ್ರೀನಿವಾಸ್ ಹತ್ಯೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ. ಬಾಡಿ ವಾರಂಟ್ ಹಿನ್ನೆಲೆ ಬೆಂಗಳೂರು ಪೊಲೀಸರು ಕರೆತರಲಿದ್ದಾರೆ. ಪ್ರಕರಣದ ಮಾಸ್ಟರ್ ಮೈಂಡ್ ಸೇರಿ ಇನ್ನೂ ಕೆಲವರು ನಾಪತ್ತೆಯಾಗಿದ್ದು, ಉಳಿದ ಆರೋಪಿಗಳಿಗಾಗಿ ಬೆಂಗಳೂರು ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮದುವೆಗಾಗಿ ಪೀಡಿಸಿದ ಪ್ರೇಯಸಿಯ ಕೊಲೆ ಮಾಡಿ ಫ್ಲಾಟ್ನಲ್ಲೇ ಹೂತಿಟ್ಟ.. 3 ತಿಂಗಳ ನಂತರ ಸಿಕ್ತು ಅಸ್ಥಿಪಂಜರ