ಆಟೋ ಚಾಲಕನ ಅಮಾನವೀಯ ವರ್ತನೆ! ಸುಮ್ಮನೆ ನಿಂತಿದ್ದವನ ಮೇಲೆ ಆಟೋ ಹತ್ತಿಸಿಯೇ ಬಿಡೋದಾ!

|

Updated on: Jan 12, 2021 | 9:53 AM

ರಸ್ತೆ ಬದಿಯಲ್ಲಿ ನಿಂತಿದ್ದ ನಿರ್ಗತಿಕನ ಮೇಲೆ ಆಟೋ ಹತ್ತಿಸಿ ಆಟೋ ಚಾಲಕ ಅಮಾನವೀಯತೆ ವರ್ತನೆಯಿಂದ ದರ್ಪ ಮೆರೆದಿದ್ದಾನೆ. ಮೈಸೂರಿನ ಗಾಂಧಿ ನಗರದ 4ನೇ ಕ್ರಾಸ್​ ಬಳಿ ಘಟನೆ ನಡೆದಿದೆ.

ಆಟೋ ಚಾಲಕನ ಅಮಾನವೀಯ ವರ್ತನೆ! ಸುಮ್ಮನೆ ನಿಂತಿದ್ದವನ ಮೇಲೆ ಆಟೋ ಹತ್ತಿಸಿಯೇ ಬಿಡೋದಾ!
ಆಟೋ ಚಾಲಕನ ಅಮಾನವೀಯ ವರ್ತನೆ
Follow us on

ಮೈಸೂರು: ರಸ್ತೆ ಬದಿಯಲ್ಲಿ ನಿಂತಿದ್ದ ನಿರ್ಗತಿಕನ ಮೇಲೆ ಆಟೋ ಹತ್ತಿಸಿ ಅಮಾನವೀಯತೆ ವರ್ತನೆ ತೋರಿಸಿರುವ ಘಟನೆ ಗಾಂಧಿ ನಗರದ 4ನೇ ಕ್ರಾಸ್​ನಲ್ಲಿ ನಡೆದಿದೆ. ನಿನ್ನೆ(ಜ.11) ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಸ್ತೆಯ ಬದಿಯಲ್ಲಿ ಸುಮ್ಮನೆ ತನ್ನ ಪಾಡಿಗೆ ತಾನು ಎಂಬಂತೆ ನಿರ್ಗತಿಕನೊಬ್ಬ ನಿಂತಿದ್ದ. ಚಾಲಕ ಏಕಾಏಕಿ ಆಟೋದಿಂದ ಗುದ್ದಿ ಆತನನ್ನು ಕೆಳಗೆ ಬೀಳಿಸಿದ್ದಾನೆ. ಸ್ವಲ್ಪ ದೂರ ಹೋದ ಆಟೋ ಚಾಲಕ ಮತ್ತೆ ಹಿಂತಿರುಗಿ ಬಂದು ಕೆಳಗೆ ಬಿದ್ದ ನಿರ್ಗತಿಕನ ಮೇಲೆ ಆಟೋ ಹತ್ತಿಸಿ ದರ್ಪ ತೋರಿಸಿದ್ದಾನೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ನಿರ್ಗತಿಕನನ್ನು ಕೆ.ಆರ್​ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎನ್​.ಆರ್​ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸಾರಿಗೆ ನೌಕರರ ಪ್ರತಿಭಟನೆ ಬಿಸಿ ಜೋರು, ಆಟೋ ಚಾಲಕರಿಂದ ದುಪ್ಪಟ್ಟು ಹಣ ವಸೂಲಿ

 

Published On - 9:33 am, Tue, 12 January 21