ಕೊನೆಗೂ ಅರೆಸ್ಟ್ ಆದ ಆದಿತ್ಯ ಆಳ್ವಾ.. ಕೆಲ ರಾಜಕಾರಣಿಗಳು, ಸೆಲೆಬ್ರೆಟಿಗಳಿಗೆ ಒಳಗೊಳಗೆ ಶುರುವಾಯ್ತು ಭಯ
ಆದಿತ್ಯ ಆಳ್ವಾ ಬಂಧನ ಹಿನ್ನೆಲೆಯಲ್ಲಿ ಕೆಲ ರಾಜಕಾರಣಿಗಳು, ಸೆಲೆಬ್ರೆಟಿಗಳಿಗೆ ಸಂಕಷ್ಟ ಎದುರಾಗಲಿದೆ. ಡ್ರಗ್ಸ್ ಜಾಲದ ನಂಟು ಹೊಂದಿರುವ ಅನೇಕರ ಹೆಸರು ರಿವಿಲ್ ಆಗಲಿದೆ.
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಆರೋಪ ಪ್ರಕರಣ ಸಂಬಂಧ ತಲೆಮರಿಸಿಕೊಂಡಿದ್ದ A1 ಆರೋಪಿ ಆದಿತ್ಯ ಆಳ್ವಾ ನಿನ್ನೆ (ಜ.11) ರಾತ್ರಿ ಚೆನ್ನೈನಲ್ಲಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಡ್ರಗ್ಸ್ ಜಾಲದ ಕುರಿತು ಅಧಿಕಾರಿಗಳು ವಿಚಾರಣೆ ಶುರು ಮಾಡಿದ್ದು ಹಲವರಿಗೆ ಮತ್ತೆ ಸಂಕಷ್ಟ ಎದುರಾಗಲಿದೆ.
ಆದಿತ್ಯ ಆಳ್ವಾ ಬಂಧನ ಹಿನ್ನೆಲೆಯಲ್ಲಿ ಕೆಲ ರಾಜಕಾರಣಿಗಳು, ಸೆಲೆಬ್ರೆಟಿಗಳಿಗೆ ಸಂಕಷ್ಟ ಎದುರಾಗಲಿದೆ. ಈ ಹಿಂದೆ ಡ್ರಗ್ಸ್ ಕೇಸ್ನಲ್ಲಿ ಬಂಧಿತರಾಗಿದ್ದ ನಟಿ ರಾಗಿಣಿ, ಸಂಜನಾ, ವಿರೇನ್ ಖನ್ನಾ ಸೇರಿದಂತೆ ಸಾಕಷ್ಟು ಜನರೊಂದಿಗೆ ಆದಿತ್ಯ ಆಳ್ವ ನಿಕಟ ಸಂಪರ್ಕ ಹೊಂದಿದ್ದ. ಈಗ ಈತ ಅರೆಸ್ಟ್ ಆಗಿದ್ದು ಡ್ರಗ್ಸ್ ಜಾಲದ ನಂಟು ಹೊಂದಿರುವ ಅನೇಕರ ಹೆಸರು ರಿವಿಲ್ ಆಗಲಿದೆ.
ಆದಿತ್ಯ ಆಳ್ವಾ ತನ್ನ ಹೌಸ್ ಆಫ್ ಲೈವ್ಸ್‌ನಲ್ಲಿ ಪೇಜ್ 3 ಪಾರ್ಟಿ ಆಯೋಜನೆ ಮಾಡ್ತಿದ್ದ. ಲಾಕ್‌ಡೌನ್ ಸಮಯದಲ್ಲೂ ಪಾರ್ಟಿಗಳಿಗೆ ಸೆಲೆಬ್ರೆಟಿಗಳನ್ನು ಕರೆಸುತ್ತಿದ್ದ. ಉದ್ಯಮಿಗಳು, ಟೆಕ್ಕಿಗಳನ್ನ ಪಾರ್ಟಿಗೆ ಬರುವಂತೆ ಸೆಳೆಯುತ್ತಿದ್ದ. ಹಾಗೂ ವಿರೇನ್ ಖನ್ನಾ ಜತೆಯೂ ಸೇರಿ ಪೇಜ್ 3 ಆಯೋಜಿಸುತ್ತಿದ್ದ. ಪಾರ್ಟಿಯಲ್ಲಿ ಎಕ್ಸ್‌ಟಸಿ ಮಾತ್ರೆ, LLT ಸ್ಟಿಪ್ಸ್ ಬಳಕೆ ಮಾಡಲಾಗುತ್ತಿತ್ತು. ವಿರೇನ್ ಲೂಮ್ ಪೆಪ್ಪರ್ ಸಾಂಬನಿಂದ ಡ್ರಗ್ಸ್ ತರಿಸುತ್ತಿದ್ದ ಆ ಡ್ರಗ್ಸ್ ಪಾರ್ಟಿಗಳಲ್ಲಿ ಬಳಕೆ ಮಾಡುತ್ತಿದ್ದ ಎಂಬ ಶಂಕೆ ಇದೆ.
ಡ್ರಗ್ಸ್ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಆದಿತ್ಯ ಆಳ್ವಾ ಕೊನೆಗೂ ಅರೆಸ್ಟ್
Published On - 8:30 am, Tue, 12 January 21