ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಕಾರು ಅಪಘಾತ; ಸ್ವಾಮೀಜಿ ಸೇರಿದಂತೆ ಮೂವರಿಗೆ ಗಾಯ

| Updated By: ವಿವೇಕ ಬಿರಾದಾರ

Updated on: Aug 09, 2022 | 5:02 PM

ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಕಾರು ನೀಲಗಿರಿ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ತೋಗುಣಸಿ ತಾಂಡಾದಲ್ಲಿ ನಡೆದಿದೆ.

ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಕಾರು ಅಪಘಾತ; ಸ್ವಾಮೀಜಿ ಸೇರಿದಂತೆ ಮೂವರಿಗೆ ಗಾಯ
ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ
Follow us on

ಬಾಗಲಕೋಟೆ: ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಕಾರು ನೀಲಗಿರಿ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ತೋಗುಣಸಿ ತಾಂಡಾದಲ್ಲಿ ನಡೆದಿದೆ. ಸ್ವಾಮೀಜಿ ಹಾಗೂ ಚಾಲಕ ಸೇರಿದಂತೆ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗುಳೇದಗುಡ್ಡ ಪಟ್ಟಣದ ಕಾಡಸಿದ್ದೇಶ್ವರ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಗದಗ ಜಿಲ್ಲೆ ಹಾಲಕೇರಿಯಿಂದ ಗುಳೇದಗುಡ್ಡ ಪಟ್ಟಣಕ್ಕೆ ಬರುತ್ತಿದ್ದರು.

ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಬೆಳಿಗ್ಗೆ ೭.೩೦ ರ ಸುಮಾರಿಗೆ ನೀಲಗಿರಿ ಮರಕ್ಕೆ ಡಿಕ್ಕಿ  ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಸ್ವಾಮೀಜಿ ಹಾಗೂ ಚಾಲಕ ಸೇರಿದಂತೆ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ವಾಮೀಜಿ ಗುಳೇದಗುಡ್ಡ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಮಠಕ್ಕೆ ತೆರಳಿದ್ದಾರೆ.  ವೈದ್ಯರು ಯಾವುದೆ ಅಪಾಯವಿಲ್ಲ ಎಂದಿದ್ದಾರೆ.

ಸಂಸದರ ಕಾರಿನ ಎದುರಲ್ಲೇ ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ

ಕೋಲಾರ: ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಕೋಲಾರದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಂಸದ ಮುನಿಸ್ವಾಮಿ ಚಲಿಸುತ್ತಿದ್ದ ಕಾರಿನ ಮುಂಭಾಗ  ನಡೆದಿದೆ.  ಓರ್ವ ಬೈಕ್ ಸವಾರ ಅಮ್ಮೇರಹಳ್ಳಿಯ ನಾರಾಯಣಸ್ವಾಮಿ ಎಂಬುವರಿಗೆ ಗಾಯಗಳಾಗಿವೆ. ಕೂಡಲೆ ಸಂಸದ ಮುನಿಸ್ವಾಮಿ ಬೈಕ್ ಸವಾರನ ನೆರವಿಗೆ ಧಾವಿಸಿದ್ದಾರೆ.

ಸಂಸದ ಮುನಿಸ್ವಾಮಿ ಅಫಘಾತದಲ್ಲಿ ಗಾಯಗೊಂಡದವರನ್ನು ಉಪಚರಿಸಿ ತಮ್ಮ ಕಾರಿನಲ್ಲೇ ಗಾಯಾಳುವನ್ನು  ಕೋಲಾರದ ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

Published On - 4:09 pm, Tue, 9 August 22