ಎಲ್ಲಾ ಸಮೀಕ್ಷೆಗಳು ಸುಳ್ಳಾಗುತ್ತವೆ, ಬಿಜೆಪಿ ಸರ್ಕಾರ ಮನೆಗೆ ಹೋಗುತ್ತೆ

ಬಾಗಲಕೋಟೆ: ನಾಳೆ ಉಪಚುನಾವಣಾ ಫಲಿತಾಂಶ ಹಿನ್ನೆಲೆ ಬಾದಾಮಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಾ ಸಮೀಕ್ಷೆಗಳು ಸುಳ್ಳಾಗುತ್ತವೆ ಎಂದು ಹೇಳಿದ್ದಾರೆ. ಫಲಿತಾಂಶ ಯಾರಿಗೂ ಗೊತ್ತಿಲ್ಲ. ಸಮೀಕ್ಷೆಗಳ ಪರವಾಗಿ ಫಲಿತಾಂಶ ಇರೋಕೆ ಸಾಧ್ಯವೇ ಇಲ್ಲ. ಪಕ್ಷಾಂತರ ಮಾಡಿದವರಿಗೆ ಅನರ್ಹರಿಗೆ ವಿರೋಧವಾದ ವಾತಾವರಣ ಇದೆ. ಜನರ ಅಭಿಪ್ರಾಯ ಅನರ್ಹರ ವಿರೋಧ ಇದೆ. ನಾವು 8ರಿಂದ 10 ಸ್ಥಾನ ಗೆಲ್ತೀವಿ ಅನ್ಕೊಂಡಿದ್ದೀವಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಾನು ಯಡಿಯೂರಪ್ಪ ಮನೆಗೆ ಹೋಗುತ್ತಾರೆ ಅಂದಿಲ್ಲ. ಬಿಜೆಪಿ ಸರಕಾರ ಹೋಗುತ್ತೆ ಅಂದಿದ್ದೀನಿ ಎಂದು […]

ಎಲ್ಲಾ ಸಮೀಕ್ಷೆಗಳು ಸುಳ್ಳಾಗುತ್ತವೆ, ಬಿಜೆಪಿ ಸರ್ಕಾರ ಮನೆಗೆ ಹೋಗುತ್ತೆ

Updated on: Dec 08, 2019 | 5:15 PM

ಬಾಗಲಕೋಟೆ: ನಾಳೆ ಉಪಚುನಾವಣಾ ಫಲಿತಾಂಶ ಹಿನ್ನೆಲೆ ಬಾದಾಮಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಾ ಸಮೀಕ್ಷೆಗಳು ಸುಳ್ಳಾಗುತ್ತವೆ ಎಂದು ಹೇಳಿದ್ದಾರೆ. ಫಲಿತಾಂಶ ಯಾರಿಗೂ ಗೊತ್ತಿಲ್ಲ. ಸಮೀಕ್ಷೆಗಳ ಪರವಾಗಿ ಫಲಿತಾಂಶ ಇರೋಕೆ ಸಾಧ್ಯವೇ ಇಲ್ಲ.

ಪಕ್ಷಾಂತರ ಮಾಡಿದವರಿಗೆ ಅನರ್ಹರಿಗೆ ವಿರೋಧವಾದ ವಾತಾವರಣ ಇದೆ. ಜನರ ಅಭಿಪ್ರಾಯ ಅನರ್ಹರ ವಿರೋಧ ಇದೆ. ನಾವು 8ರಿಂದ 10 ಸ್ಥಾನ ಗೆಲ್ತೀವಿ ಅನ್ಕೊಂಡಿದ್ದೀವಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಾನು ಯಡಿಯೂರಪ್ಪ ಮನೆಗೆ ಹೋಗುತ್ತಾರೆ ಅಂದಿಲ್ಲ. ಬಿಜೆಪಿ ಸರಕಾರ ಹೋಗುತ್ತೆ ಅಂದಿದ್ದೀನಿ ಎಂದು ಹೇಳಿದ್ದಾರೆ.