ಬಾಗಲಕೋಟೆ ಜಿಲ್ಲೆಯಲ್ಲಿ ಪ್ರೀತಿಸುತ್ತಿದ್ದ ಯುವಕನಿಂದಲೇ ಅಪ್ರಾಪ್ತೆ ಕೊಲೆ?

|

Updated on: Jan 01, 2020 | 10:32 AM

ಬಾಗಲಕೋಟೆ: ಪ್ರೀತಿಸುತ್ತಿದ್ದ ಯುವಕನಿಂದಲೇ ಅಪ್ರಾಪ್ತೆ ಕೊಲೆಯಾಗಿರುವ ಘಟನೆ ಗುಳೇದಗುಡ್ಡ ತಾಲೂಕಿನ ಹುಲ್ಲಿಕೇರಿ ಎಸ್‌.ಪಿ. ಗ್ರಾಮದ ಬಳಿ ನಡೆದಿದೆ. 10ನೇ ತರಗತಿ ಓದುತ್ತಿದ್ದ ದ್ಯಾಮವ್ವ ಬೂದಿಹಾಳ(16) ಮೃತ ದುರ್ದೈವಿ. ಕೆಲ ತಿಂಗಳಿನಿಂದ ದ್ಯಾಮವ್ವ, ಕುಮಾರ್ ಪರಸ್ಪರ ಪ್ರೀತಿಸ್ತಿದ್ದರು. ನಿನ್ನೆ ಶಾಲೆಯಿಂದ ದ್ಯಾಮವ್ವಳನ್ನ ಕುಮಾರ್ ಕರೆದೊಯ್ದಿದ್ದಾನೆ. ಅಪ್ರಾಪ್ತೆ ದ್ಯಾಮವ್ವಗೆ ಅರಿಶಿಣದ ತಾಳಿ ಕಟ್ಟಿ ವಿಷಕುಡಿಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಅಪ್ರಾಪ್ತೆಗೆ ವಿಷ ಕುಡಿಸಿ ಕೊಲೆ ಮಾಡಿದ್ದಾನೆಂದು ಯುವಕ ಕುಮಾರ್(20) […]

ಬಾಗಲಕೋಟೆ ಜಿಲ್ಲೆಯಲ್ಲಿ ಪ್ರೀತಿಸುತ್ತಿದ್ದ ಯುವಕನಿಂದಲೇ ಅಪ್ರಾಪ್ತೆ ಕೊಲೆ?
Follow us on

ಬಾಗಲಕೋಟೆ: ಪ್ರೀತಿಸುತ್ತಿದ್ದ ಯುವಕನಿಂದಲೇ ಅಪ್ರಾಪ್ತೆ ಕೊಲೆಯಾಗಿರುವ ಘಟನೆ ಗುಳೇದಗುಡ್ಡ ತಾಲೂಕಿನ ಹುಲ್ಲಿಕೇರಿ ಎಸ್‌.ಪಿ. ಗ್ರಾಮದ ಬಳಿ ನಡೆದಿದೆ. 10ನೇ ತರಗತಿ ಓದುತ್ತಿದ್ದ ದ್ಯಾಮವ್ವ ಬೂದಿಹಾಳ(16) ಮೃತ ದುರ್ದೈವಿ.

ಕೆಲ ತಿಂಗಳಿನಿಂದ ದ್ಯಾಮವ್ವ, ಕುಮಾರ್ ಪರಸ್ಪರ ಪ್ರೀತಿಸ್ತಿದ್ದರು. ನಿನ್ನೆ ಶಾಲೆಯಿಂದ ದ್ಯಾಮವ್ವಳನ್ನ ಕುಮಾರ್ ಕರೆದೊಯ್ದಿದ್ದಾನೆ. ಅಪ್ರಾಪ್ತೆ ದ್ಯಾಮವ್ವಗೆ ಅರಿಶಿಣದ ತಾಳಿ ಕಟ್ಟಿ ವಿಷಕುಡಿಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಅಪ್ರಾಪ್ತೆಗೆ ವಿಷ ಕುಡಿಸಿ ಕೊಲೆ ಮಾಡಿದ್ದಾನೆಂದು ಯುವಕ ಕುಮಾರ್(20) ವಿರುದ್ಧ ಮೃತ ದ್ಯಾಮವ್ವ ಪೋಷಕರು ಆರೋಪಿಸಿದ್ದಾರೆ. ಅಸ್ವಸ್ಥ ಕುಮಾರ್‌ಗೆ ಗುಳೇದಗುಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 10:31 am, Wed, 1 January 20