AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಸಾರ್ವಜನಿಕ ಗಣೇಶ ವಿಸರ್ಜನೆ ವೇಳೆ ಪೊಲೀಸರ ಮೇಲೆ ಹಲ್ಲೆ: ಆರು ಜನರ ಬಂಧನ

ವಿದ್ಯುತ್​ ಪ್ರವಹಿಸಿ ಮೂವರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

Crime News: ಸಾರ್ವಜನಿಕ ಗಣೇಶ ವಿಸರ್ಜನೆ ವೇಳೆ ಪೊಲೀಸರ ಮೇಲೆ ಹಲ್ಲೆ: ಆರು ಜನರ ಬಂಧನ
ಗಣೇಶ ವಿಸರ್ಜನೆ ವೇಳೆ ಪೊಲೀಸರ ಮೇಲೆ ಹಲ್ಲೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 07, 2022 | 2:09 PM

ಬಾಗಲಕೋಟೆ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ನಿನ್ನೆ ರಾತ್ರಿ ನಡೆದಿದೆ. ಮೆರವಣಿಗೆ ವೇಳೆ ಸಿಪಿಐ, ಇಬ್ಬರು ಕಾನ್ಸ್​​ಟೇಬಲ್​ಗಳ ಮೇಲೆ ಹಲ್ಲೆ ಮಾಡಿದ್ದು, ಕೆರೂರು ಠಾಣೆ ಕಾನ್ಸ್​​ಟೇಬಲ್​ ಸುರೇಶ್​, ರಮೇಶ್ ಮೇಲೆ ಹಲ್ಲೆ ಮಾಡಲಾಗಿದೆ. ಬೇಗ ಗಣೇಶ ಮೆರವಣಿ ಸಾಗಿಸಿ ಎಂದು ಹೇಳಿದ್ದಕ್ಕೆ ಸಿಪಿಐ ಸೇರಿದಂತೆ ಇಬ್ಬರು ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಬಾದಾಮಿ ಪೊಲೀಸ್ ಠಾಣೆಯ ಸಿಪಿಐ ಕರೆಪ್ಪ ಬನ್ನೆ ಮೇಲೂ ಹಲ್ಲೆ ಮಾಡಿದ್ದು, ಶರಣು ಸಜ್ಜನ, ಮಹಾಂತೇಶ್ ಪಟ್ಟಣಶೆಟ್ಟಿ, ಸಿದ್ದೇಶ್, ಸಚಿನ್, ಗಂಗಾಧರ, ಬಸವರಾಜ ಸೇರಿದಂತೆ 11 ಜನರ ವಿರುದ್ಧ ಹಲ್ಲೆ ನಡೆಸಿದ ಆರೋಪ ಮಾಡಲಾಗಿದೆ. ಪ್ರಕರಣ ಸಂಬಂಧ ಆರು ಆರೋಪಿಗಳನ್ನ  ಪೊಲೀಸರು ಬಂಧಿಸಿದ್ದಾರೆ. ಕೆರೂರು ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕುಡಿದ‌ ಮತ್ತಲ್ಲಿ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ಹಲ್ಲೆಯಿಂದಾಗಿ ಮೂಗಿನಿಂದ ರಕ್ತಸ್ರಾವ ಉಂಟಾಗಿದೆ. ಸಿಪಿಐ ಹಾಗೂ ಕಾನ್ಸ್‌ಟೇಬಲ್​ಗಳು ಕೆರೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ರಾಚೋಟೇಶ್ವರ ದೇವಸ್ಥಾನದ ಬಳಿಯ ಸಾರ್ವಜನಿಕ ಗಣೇಶ ವಿಸರ್ಜನೆ ವೇಳೆ ಘಟನೆ ನಡೆದಿದ್ದು, ಸಣ್ಣಪುಟ್ಟ ಗಾಯವಾಗಿದ್ದ, ಸಿಪಿಐ,ಕಾನ್ಸ್‌ಟೇಬಲ್​ಗಳು ಕೆರೂರು ಚಿಕಿತ್ಸೆ ಪಡೆದು ಪುನಃ ಕರ್ತವ್ಯಕ್ಕೆ ತೆರಳಿದರು.

ವಿದ್ಯುತ್​ ಪ್ರವಹಿಸಿ ಮೂವರು ಸಾವು

ಚಿಕ್ಕಮಗಳೂರು: ವಿದ್ಯುತ್​ ಪ್ರವಹಿಸಿ ಮೂವರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಗಣಪತಿ ವಿಸರ್ಜಿಸಿ ಬರುವಾಗ ದುರಂತ ನಡೆದಿದ್ದು, ರಾಜು(47), ಪಾರ್ವತಿ(35), ರಚನಾ(28) ದುರ್ಮರಣ ಹೊಂದಿದ್ದಾರೆ. ಟ್ರ್ಯಾಕ್ಟರ್​​ನಲ್ಲಿದ್ದ ಪೆಂಡಾಲ್​​ಗೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡ 6 ಜನರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಗಂಭೀರ ಗಾಯಗೊಂಡ ಸಂಗೀತಾ, ಪಲ್ಲವಿ ಹಾಸನಕ್ಕೆ ಶಿಫ್ಟ್​ ಮಾಡಲಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಳೆಯಿಂದಾಗಿ ಮನೆ ಗೋಡೆ ಕುಸಿದು ಮಹಿಳೆ ಸಾವು

ಬಳ್ಳಾರಿ: ಭಾರಿ ಮಳೆಯಿಂದಾಗಿ ಮನೆ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿರುವಂತಹ ಘಟನೆ ಕುರಗೋಡು ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ನಡೆದಿದೆ. ಮನೆ ಗೋಡೆ ಕುಸಿದು ಉಮಾದೇವಿ(50) ಸಾವನ್ನಪ್ಪಿದ ಆಶಾ ಕಾರ್ಯಕರ್ತೆ. ಮನೆಯಲ್ಲಿ ಮಲಗಿದ್ದ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.