ಬಾಗಲಕೋಟೆ: ಜಿಲ್ಲೆಯ ಜಮಖಂಡಿ ನಗರದಲ್ಲಿ ಅನಧಿಕೃತವಾಗಿ ಸರ್ಕಲ್ ನಿರ್ಮಾಣ ಹಿನ್ನೆಲೆ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇಂದು(ಮಾರ್ಚ್ 18) ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಮಖಂಡಿ ತಹಶೀಲ್ದಾರ್ ಸದಾಶಿವ ಮಕ್ಕೋಜಿ ಆದೇಶ ಹೊರಡಿಸಿದ್ದಾರೆ. ಎರಡು ದಿನಗಳ ಹಿಂದೆ ಮೌಲಾನಾ ಅಬ್ದುಲ್ ಕಲಾಂ ಸರ್ಕಲ್ ನಿರ್ಮಾಣ ವೇಳೆ ಶಾಸಕ ಆನಂದ ನ್ಯಾಮಗೌಡ, PSI ಬಸವರಾಜ ನಡುವೆ ವಾಗ್ವಾದ ನಡೆದಿತ್ತು. ನಂತರ ಜಮಖಂಡಿಯಲ್ಲಿ 20ಕ್ಕೂ ಹೆಚ್ಚು ಸರ್ಕಲ್ ನಿರ್ಮಾಣ ಆಗಿತ್ತು. ಈ ವಿವಾದ ಹೆಚ್ಚಾಗುತ್ತಿದ್ದಂತೆ 144 ಸೆಕ್ಷನ್ ಜಾರಿ ಮಾಡಲಾಗಿದೆ.
ನಗರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸದ್ಯ ನಗರದಲ್ಲಿ ನಿರ್ಮಾಣ ಆಗಿದ್ದ ಅನಧಿಕೃತ ಸರ್ಕಲ್ಗಳನ್ನು ಪೊಲೀಸರು ತೆರವು ಮಾಡಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಅನಧಿಕೃತ ಸರ್ಕಲ್ಗಳನ್ನು ರಾತ್ರೋರಾತ್ರಿ ತೆರವು ಮಾಡಲಾಗಿದೆ.
ಮೌಲಾನಾ ಅಬ್ದುಲ್ ಕಲಾಂ ಸರ್ಕಲ್ ನಿರ್ಮಾಣ ವೇಳೆ ಜಮಖಂಡಿ ಪಟ್ಟಣದ ಕಾಂಗ್ರೆಸ್ ಶಾಸಕ ಆನಂದ್ ಸಿದ್ದು ನ್ಯಾಮಗೌಡ ಅವರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬಸವರಾಜ ಮೇಲೆ ವಾಗ್ದಾಳಿ ನಡೆಸಿದ್ದರು. ಪೊಲೀಸರ ಮೇಲೆ ಅಸಭ್ಯ ಭಾಷೆ ಬಳಸಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿತ್ತು. ನಿರ್ಮಾಣವಾಗಲಿರುವ ವೃತ್ತದ ಪರಿಶೀಲನೆಗೆ ಬಂದಿದ್ದ ಆನಂದ್ ನ್ಯಾಮಗೌಡಗೆ ಸರ್ಕಲ್ ನಿರ್ಮಾಣದಿಂದ ಆಗುವ ಸಮಸ್ಯೆಗಳ ಬಗ್ಗೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿವರಿಸಲು ಹೋದಾಗ ಘಟನೆ ನಡೆದಿತ್ತು.
ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲು ಬಿಜೆಪಿ ಪ್ಲಾನ್; ಹಿಂದೂ ಫೈರ್ ಬ್ಯ್ರಾಂಡ್ ಕರೆಸಲು ಚಿಂತನೆ
ಈ ವೃತ್ತ ನಿರ್ಮಿಸಿದರೆ ಸಮಸ್ಯೆಯಾಗುತ್ತದೆ ಎಂದು ಶಾಸಕರಿಗೆ ಪಿಎಸ್‌ಐ ಬಸವರಾಜ್ ಕೊಣ್ಣೂರ್ ತಿಳಿಸಿದ್ದು, “ಸುಮ್ಮನಿರು. ಇದರ ಬಗ್ಗೆ ನಿನಗೆ ಏನೂ ಗೊತ್ತಿಲ್ಲ. ನಿಮಗೆ ಪ್ರಸ್ತುತ ಸರ್ಕಾರದ ಬೆಂಬಲವಿದೆ ಎಂದು ನನಗೆ ತಿಳಿದಿದೆ. ಆದರೆ ನಾವು ಅಧಿಕಾರಕ್ಕೆ ಬಂದಾಗ ನಾನು ನಿಮ್ಮನ್ನು ಬಿಡುವುದಿಲ್ಲ” ಎಂದು ಆಕ್ರೋಶ ಹೊರಹಾಕಿದ್ದರು.
“ನೀವು ಶಾಸಕರೇ? ಯಾವುದು ಸರಿ ಮತ್ತು ತಪ್ಪು ಎಂದು ನಿರ್ಧರಿಸಲು ನೀವು ಯಾರು? ನಿನ್ನ ಕರ್ತವ್ಯವನ್ನು ಮಾತ್ರ ಮಾಡು. ನಿನ್ನ ಮೇಲೆ ಯಾವಾಗಲೂ ನನ್ನ ಕಣ್ಣಿರುತ್ತದೆ” ಎಂದು ಎಚ್ಚರಿಕೆ ನೀಡಿದ್ದರು. ನಂತರ ಜಮಖಂಡಿಯಲ್ಲಿ 20ಕ್ಕೂ ಹೆಚ್ಚು ಸರ್ಕಲ್ ನಿರ್ಮಾಣ ಆಗಿತ್ತು. ಸದ್ಯ ಪೊಲೀಸರು ಸರ್ಕಲ್ಗಳನ್ನು ತೆರವುಗೊಳಿಸಿ ಒಂದು ದಿನಕ್ಕೆ 144 ಸೆಕ್ಷನ್ ಜಾರಿ ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:07 am, Sat, 18 March 23