ಬಾಗಲಕೋಟೆ, ಏ.14: ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಧಾರುಣ ಘಟನೆ ಬಾಗಲಕೋಟೆ(Bagalkote) ಜಿಲ್ಲೆಯ ಬೀಳಗಿ ತಾಲೂಕಿನ ಹೊನ್ಯಾಳ ಕ್ರಾಸ್ ಬಳಿ ನಡೆದಿದೆ. ಬಾದದಿನ್ನಿ ಗ್ರಾಮದ ಯಂಕಪ್ಪ ತೋಳಮಟ್ಟಿ, ಆತನ ಪತ್ನಿ ಯಲ್ಲವ್ವ, ಮಗ ಪುಂಡಲೀಕ, ಮಗಳು ನಾಗವ್ವ ಹಾಗೂ ಗಂಡ ಅಶೋಕ ಬಮ್ಮಣ್ಣವರ ಮೃತರು. ಇವರು ಹೊಲದ ಕೆಲಸ ಮುಗಿಸಿ ರಸ್ತೆಪಕ್ಕ ನಿಂತಿದ್ದರು. ಈ ವೇಳೆ ಟೈರ್ ಬ್ಲಾಸ್ಟ್ ಆಗಿ ಟಿಪ್ಪರ್ ವಾಹನ ಒಂದೇ ಕುಟುಂಬದ ಐವರ ಮೇಲೆ ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ಬೀಳಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯಾದಗಿರಿ: ತಾಲೂಕಿನ ರಾಮಸಮುದ್ರ ಗ್ರಾಮದ ಮಲ್ಲರೆಡ್ಡಿ ಪೂಜಾರಿ ಅವರ ಜಮೀನಿನಲ್ಲಿ ಹಸುವಿನ ಮೇಲೆ ಚಿರತೆ ದಾಳಿ ಮಾಡಿದ್ದು, ಹಸು ಸಾವನ್ನಪ್ಪಿದೆ. ಮಲ್ಲರೆಡ್ಡಿ ಅವರಿಗೆ ಸೇರಿದ್ದ ಹಸು ಇದಾಗಿದ್ದು, ಹಸುವಿನ ಜೊತೆಗೆ ಎರಡು ಎತ್ತುಗಳ ಮೇಲೂ ದಾಳಿ ನಡೆಸಿದೆ. ಚಿರತೆ ದಾಳಿ ಘಟನೆಯಿಂದ ರೈತರಲ್ಲಿ ಭಯದಲ್ಲಿ ಇದ್ದಾರೆ. ಇನ್ನು ಇಷ್ಟೇಲ್ಲಾ ಘಟನೆ ನಡೆದರೂ ಸ್ಥಳಕ್ಕೆ ಭೇಟಿ ನೀಡದ ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಯಾದಗಿರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಶಿರಸಿಯಲ್ಲಿ ಭೀಕರ ಅಪಘಾತ; ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ರಸ್ತೆ ಕಾರ್ಮಿಕರ ಮೇಲೆ ಹರಿದ ಕಾರು
ಕಲಬುರಗಿ: ಕಮಲಾಪುರ ಬಳಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತದಿಂದ ವಿಜಯಕುಮಾರ್ ಶಿವಶರಣಪ್ಪ ನಾಗನಳ್ಳಿ(45) ಎಂಬುವವರು ಸಾವನ್ನಪ್ಪಿದ ಘಟನೆ ನಡೆದಿದೆ. ಕಲಬುರಗಿ ನಗರದ ಬಿದ್ದಾಪುರ ಕಾಲೋನಿಯ ನಿವಾಸಿ ವಿಜಯಕುಮಾರ್, ಕಲಬುರಗಿಯಿಂದ ಭಾಲ್ಕಿಯಲ್ಲಿನ ತಮ್ಮ ಸಹೋದರಿಯ ಬಳಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು,
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಕೊಂಡ್ಯೊಯುವಾಗಲೇ ಮೃತರಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:13 pm, Sun, 14 April 24