ರೈತರ ಹೊಲಗಳು ಹಾಳಾಗುವುದಕ್ಕೆ ನೀವೇ ಕಾರಣ: ಸಚಿವ ಮರುಗೇಶ್ ನಿರಾಣಿ ಭಾಷಣಕ್ಕೆ ಅಡ್ಡಿಪಡಿಸಿದ ಬಿಜೆಪಿ ಮುಖಂಡ

| Updated By: sandhya thejappa

Updated on: Jan 30, 2022 | 4:55 PM

ರಾತ್ರಿ ವೇಳೆ ವಿದ್ಯುತ್ ಪೂರೈಕೆ ಮಾಡುವುದರಿಂದ ಸಮಸ್ಯೆ ಆಗುತ್ತಿದೆ. ರಾತ್ರಿ ವೇಳೆ ಬೆಳೆಗೆ ನೀರು ಬಿಟ್ಟು ಮನೆಗೆ ವಾಪಸ್ ಬರುತ್ತೇವೆ. ನೀರು ಹೆಚ್ಚಾಗಿ ಹರಿದು ಭೂಮಿ ಹಾಳಾಗುತ್ತಿದೆ ಎಂದು ತಿಳಿಸಿದ ನಾಡಗೌಡ, ರಾತ್ರಿ ವೇಳೆ ಕೆಲಸ ಮಾಡುವುದು ಅಷ್ಟೊಂದು ಸುಲಭವಲ್ಲ ಎಂದರು.

ರೈತರ ಹೊಲಗಳು ಹಾಳಾಗುವುದಕ್ಕೆ ನೀವೇ ಕಾರಣ: ಸಚಿವ ಮರುಗೇಶ್ ನಿರಾಣಿ ಭಾಷಣಕ್ಕೆ ಅಡ್ಡಿಪಡಿಸಿದ ಬಿಜೆಪಿ ಮುಖಂಡ
ಮುರುಗೇಶ್ ನಿರಾಣಿ ಭಾಷಣಕ್ಕೆ ಅಡ್ಡಿಪಡಿಸಿದ ಬಿಜೆಪಿ ಮುಖಂಡ
Follow us on

ಬಾಗಲಕೋಟೆ: ಬಿಜೆಪಿ ಮುಖಂಡರೊಬ್ಬರು (BJP Leader) ಸಚಿವ ಮರುಗೇಶ್ ನಿರಾಣಿ (Murugesh Nirani) ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ಬಾಗಲಕೋಟೆ (Bagalkot) ಜಿಲ್ಲೆಯ ಬಾದಾಮಿ ತಾಲೂಕಿನ ಅಗಸನಕೊಪ್ಪ ಗ್ರಾಮದಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ರೈತರ ಪಂಪ್ ಸೆಟ್ಗೆ ವಿದ್ಯುತ್ ಸೌಲಭ್ಯದ ಬಗ್ಗೆ ಮರುಗೇಶ್ ನಿರಾಣಿ ಭಾಷಣ ಮಾಡುತ್ತಿದ್ದರು. ಈ ವೇಳೆ ಬಿಜೆಪಿಯ ನಾಡಗೌಡ ಎಂಬುವವರು ನಿರಾಣಿ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ. ರೈತರ ಹೊಲಗಳು ಹಾಳಾಗುವುದಕ್ಕೆ ನೀವೇ ಕಾರಣರಾಗಿದ್ದೀರಿ. ನಮಗೆ ಹಗಲಿನ ವೇಳೆ 12 ಗಂಟೆ ವಿದ್ಯುತ್ ಪೂರೈಕೆ ಮಾಡಿ ಅಂತ ಆಗ್ರಹಿಸಿದ್ದಾರೆ.

ರಾತ್ರಿ ವೇಳೆ ವಿದ್ಯುತ್ ಪೂರೈಕೆ ಮಾಡುವುದರಿಂದ ಸಮಸ್ಯೆ ಆಗುತ್ತಿದೆ. ರಾತ್ರಿ ವೇಳೆ ಬೆಳೆಗೆ ನೀರು ಬಿಟ್ಟು ಮನೆಗೆ ವಾಪಸ್ ಬರುತ್ತೇವೆ. ನೀರು ಹೆಚ್ಚಾಗಿ ಹರಿದು ಭೂಮಿ ಹಾಳಾಗುತ್ತಿದೆ ಎಂದು ತಿಳಿಸಿದ ನಾಡಗೌಡ, ರಾತ್ರಿ ವೇಳೆ ಕೆಲಸ ಮಾಡುವುದು ಅಷ್ಟೊಂದು ಸುಲಭವಲ್ಲ ಎಂದರು. ಅದಕ್ಕೆ ನಿರಾಣಿ ಎಲ್ಲರೂ ಸಮಯಕ್ಕೆ ಸರಿಯಾಗಿ ವಿದ್ಯುತ್ ಬಿಲ್ ಪಾವತಿಸಿ. 24 ಗಂಟೆಯೂ ವಿದ್ಯುತ್ ಪೂರೈಕೆ ಮಾಡುತ್ತೇವೆ ಅಂತ ನಿರಾಣಿ ಭರವಸೆ ನೀಡಿದರು.

ನಿಮಗೆ ಏನು ಕೆಲಸ ಬೇಕಾಗಿದೆ ಎಂದು ಫೋನ್ ಮುಖಾಂತರ ಅಥವಾ ಪತ್ರ ಮೂಲಕ ಹೇಳಿ. ನಿಶ್ಚಿತವಾಗಿಯೂ ಮಾಡುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ನಾವು ಒಂದೇ ಕಾಲೇಜ್. ಇಬ್ಬರು ಮೂವತ್ತು ವರ್ಷದ ಸ್ನೇಹಿತರು. ಯಾವುದೇ ಪತ್ರಕೊಟ್ಟರೂ ಅವರು ನಮ್ಮ ಕೆಲಸ ಮಾಡಿ ಕೊಡುತ್ತಾರೆ. ಅದೇ ರೀತಿ ಯಡಿಯೂರಪ್ಪನವರು ಕೂಡಾ. ಅವರು ಮುಖ್ಯಮಂತ್ರಿ ಇರುವರೆಗೂ ವಿಜಯೇಂದ್ರ ರೀತಿ ಮುರಗೇಶ್ ನಿರಾಣಿಯನ್ನೂ ಕಂಡಿದ್ದಾರೆ ಅಂತ ನಿರಾಣಿ ಭಾಷಣದಲ್ಲಿ ಹೇಳಿದರು.

ಅವರಿಬ್ಬರಲ್ಲೂ ನಾನೂ ಒಬ್ಬವ ಎಂದು ಬಿಎಸ್​ವೈ ನೋಡಿಕೊಂಡು ಬಂದಿದ್ದಾರೆ. ಹೀಗೆಲ್ಲ ಇರುವಾಗ, ಬೀಳಗಿ ವಿಧಾನಸಭಾ ಕ್ಷೇತ್ರದ ಕನಸು ನನಸಾಗಲು ನಿಮ್ಮೆಲ್ಲರ ಆಶೀರ್ವಾದದಿಂದ ಕೆಲಸ ಮಾಡುತ್ತೀನಿ ಎಂದು ಮಾತನಾಡಿದ ನಿರಾಣಿ, ಪರೋಕ್ಷವಾಗಿ ಶಾಸಕ ಯತ್ನಾಳ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ

ಕನ್ನಡಿಗನ ಕಥೆಯಲ್ಲಿ ಬಾಲಿವುಡ್​ ನಟ ಅಕ್ಷಯ್​ ಕುಮಾರ್​? ಅಕ್ಕಿ ಪಾಲಿಗೆ ಮತ್ತೊಂದು ಬಯೋಪಿಕ್

ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಗೋಲ್​ಮಾಲ್: ಕರ್ನಾಟಕ ಯೂತ್ ಕಾಂಗ್ರೆಸ್ ನಾಯಕರಿಂದಲೇ ಹೈಕಮಾಂಡ್​ಗೆ ದೂರು

Published On - 4:53 pm, Sun, 30 January 22