ಬಾಗಲಕೋಟೆ: ಮಹಾಮಾರಿ ಕೊರೊನಾಗೆ ಇಡೀ ದೇಶವೇ ತತ್ತರಿಸಿ ಹೋಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಅಂಧ ಮಹಿಳೆಯೊಬ್ಬರು ಕೊರೊನಾದಿಂದ ಕಂಗೆಟ್ಟ ಬಡವರಿಗೆ ಆಸರೆಯಾಗಿದ್ದಾರೆ. ಆಕ್ಷನೆಡ್ ಸಂಸ್ಥೆಯ ರೀಜನಲ್ ಮ್ಯಾನೇಜರ್ ಆಗಿರುವ ನಂದಿನಿ ಅವರು ಓರ್ವ ಅಂಧೆಯಾಗಿದ್ದು, ಕೊರೊನಾದಿಂದ ಬಳಲಿದ ಬಡ ಜನರ ಕಷ್ಟ ಅರ್ಥ ಮಾಡಿಕೊಂಡು ಅವರಿಗೆ ಆಸರೆಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಸೋರಗಾಂವ, ಬರಗಿ, ಗುಲಗಾಲ ಜಂಬಗಿ, ಒಂಟಗೋಡಿ, ನಾಗರಾಳ, ಮಾಲಾಪೂರ ಗ್ರಾಮಗಳ ಬಡ ಜನರಿಗೆ ಸಂಸ್ಥೆಯಿಂದ ದಿನಸಿ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಈ […]
Follow us on
ಬಾಗಲಕೋಟೆ:ಮಹಾಮಾರಿ ಕೊರೊನಾಗೆ ಇಡೀ ದೇಶವೇ ತತ್ತರಿಸಿ ಹೋಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಅಂಧ ಮಹಿಳೆಯೊಬ್ಬರು ಕೊರೊನಾದಿಂದ ಕಂಗೆಟ್ಟ ಬಡವರಿಗೆ ಆಸರೆಯಾಗಿದ್ದಾರೆ. ಆಕ್ಷನೆಡ್ ಸಂಸ್ಥೆಯ ರೀಜನಲ್ ಮ್ಯಾನೇಜರ್ ಆಗಿರುವ ನಂದಿನಿ ಅವರು ಓರ್ವ ಅಂಧೆಯಾಗಿದ್ದು, ಕೊರೊನಾದಿಂದ ಬಳಲಿದ ಬಡ ಜನರ ಕಷ್ಟ ಅರ್ಥ ಮಾಡಿಕೊಂಡು ಅವರಿಗೆ ಆಸರೆಯಾಗಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಸೋರಗಾಂವ, ಬರಗಿ, ಗುಲಗಾಲ ಜಂಬಗಿ, ಒಂಟಗೋಡಿ, ನಾಗರಾಳ, ಮಾಲಾಪೂರ ಗ್ರಾಮಗಳ ಬಡ ಜನರಿಗೆ ಸಂಸ್ಥೆಯಿಂದ ದಿನಸಿ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಈ ಅಂಧ ಮಹಿಳೆಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.