Crime News: ಪ್ರೀತಿಸಲು ನಿರಾಕರಿಸಿದ ಬಾಲಕಿಗೆ ಚಾಕು ಇರಿದ! ಒನ್​​ ಸೈಡ್ ಲವ್ ಹೆಸರಿನಲ್ಲಿ ಯುವಕನ ಹುಚ್ಚಾಟ

ಅಪ್ರಾಪ್ತೆ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ, 23 ವರ್ಷದ ರವಿ ಅಥಣಿ ಎಂಬ ಯುವಕ ವನ್ ಸೈಡ್ ಲವ್ ಹೆಸರಿನಲ್ಲಿ ಕೆಲ ದಿನಗಳಿಂದ ಪ್ರೀತಿಸುವಂತೆ ಬಾಲಕಿಗೆ ಪೀಡಿಸುತ್ತಿದ್ದ, ಬಾಲಕಿ ಪ್ರೀತಿಗೆ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದು, ಯುವಕ ಚಾಕು ಇರಿದಿದ್ದಾನೆ.

Crime News: ಪ್ರೀತಿಸಲು ನಿರಾಕರಿಸಿದ ಬಾಲಕಿಗೆ ಚಾಕು ಇರಿದ! ಒನ್​​ ಸೈಡ್ ಲವ್ ಹೆಸರಿನಲ್ಲಿ ಯುವಕನ ಹುಚ್ಚಾಟ
23 ವರ್ಷದ ರವಿ ಅಥಣಿ
Edited By:

Updated on: Sep 18, 2021 | 10:53 AM

ಬಾಗಲಕೋಟೆ: ಪ್ರೀತಿಸಲು ನಿರಾಕರಿಸಿದ ಬಾಲಕಿಗೆ ಯುವಕ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ನಡೆದಿದೆ. ಅಪ್ರಾಪ್ತೆಯ ಕುತ್ತಿಗೆ ಹಾಗೂ ಕಿವಿಗೆ ಚಾಕುವಿನಿಂದು ಇರಿದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಪ್ರಾಪ್ತೆ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ, 23 ವರ್ಷದ ರವಿ ಅಥಣಿ ಎಂಬ ಯುವಕ ಒನ್​​ ಸೈಡ್ ಲವ್ ಹೆಸರಿನಲ್ಲಿ
ಕೆಲ ದಿನಗಳಿಂದ ಪ್ರೀತಿಸುವಂತೆ ಬಾಲಕಿಗೆ ಪೀಡಿಸುತ್ತಿದ್ದ, ಬಾಲಕಿ ಪ್ರೀತಿಗೆ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದು, ಯುವಕ ಚಾಕು ಇರಿದಿದ್ದಾನೆ.

ಸದ್ಯ ತೇರದಾಳ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮೂಲಗಳ ಪ್ರಕಾರ ಅಪ್ರಾಪ್ತೆ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ. ಸದ್ಯ ಯುವಕನನ್ನು ತೇರದಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಡುಪಿ: ಸಮುದ್ರದಲ್ಲಿ ಮೀನುಗಾರಿಕೆ ದೋಣಿ ಮಗುಚಿ ಇಬ್ಬರು ನಾಪತ್ತೆ
ಸಮುದ್ರದಲ್ಲಿ ಮೀನುಗಾರಿಕೆ ದೋಣಿ ಮಗುಚಿ ಇಬ್ಬರು ನಾಪತ್ತೆಯಾದ ಘಟನೆ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ತಾರಾಪತಿ ಬಳಿ ನಡೆದಿದೆ. ಶುಕ್ರವಾರ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಆದರೆ ಶುಕ್ರವಾರ ಸಂಜೆಯಿಂದ ಶರಣ್(25), ಅಣ್ಣಪ್ಪ(30) ನಾಪತ್ತೆಯಾಗಿದ್ದಾರೆ. ಜಯಗುರೂಜಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಕರಾವಳಿ ಕಾವಲು ಪಡೆಯಿಂದ ನಾಪತ್ತೆಯಾದ ಮೀನುಗಾರರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
Crime News: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಪ್ರೇಯಸಿಗೆ ಚಾಕುವಿನಿಂದ ಇರಿದು ತಾನೂ ಚುಚ್ಚಿಕೊಂಡ ಪ್ರಿಯತಮ

ಪ್ರೀತಿಗೆ ನೋ ಎಂದಿದ್ದಕ್ಕೆ ಚಾಚುವಿನಿಂದ ಚುಚ್ಚಿ ಹತ್ಯೆಗೈದ ವ್ಯಕ್ತಿ ಪೊಲೀಸರ ಸೆರೆ

 

Published On - 10:32 am, Sat, 18 September 21