Earthquake: ಬಾಗಲಕೋಟೆಯಲ್ಲೂ ಭೂಕಂಪನ ಅನುಭವ; ಖಚಿತಪಡಿಸಿದ ಜಿಲ್ಲಾಡಳಿತ

| Updated By: sandhya thejappa

Updated on: Sep 05, 2021 | 10:44 AM

ರಾತ್ರಿ 11.43 ರ ಸುಮಾರಿಗೆ ನಮಗೆ ಭೂಕಂಪನದ ಅನುಭವ ಆಗಿದೆ. ಹತ್ತರಿಂದ ಹನ್ನೆರಡು ಸೆಕೆಂಡುಗಳ ಕಾಲ ಭೂಕಂಪಿಸಿದ ಅನುಭವ ನಮಗೆ ಆಗಿದೆ. ರೋಲರ್ ಸಂಚರಿಸುವ ವೇಳೆ ಬರುವ ಶಬ್ದದ ಹಾಗೆ ಶಬ್ದ ಕೇಳಿಸಿದೆ.

Earthquake: ಬಾಗಲಕೋಟೆಯಲ್ಲೂ ಭೂಕಂಪನ ಅನುಭವ; ಖಚಿತಪಡಿಸಿದ ಜಿಲ್ಲಾಡಳಿತ
ಬಿರುಕು ಬಿಟ್ಟಿರುವ ಗೋಡೆ, ಭೂಕಂಪನದ ಅನುಭವವಾದ ಸ್ಥಳ
Follow us on

ಬಾಗಲಕೋಟೆ: ವಿಜಯಪುರ ಜಿಲ್ಲೆಯಾದ್ಯಂತ ಕಳೆದ ರಾತ್ರಿ 11.47ಕ್ಕೆ ಭೂಮಿ ಕಂಪಿಸಿದ (Earthquake) ಅನುಭವವಾಗಿದೆ. ಅದರಂತೆ ಬಾಗಲಕೋಟೆಯಲ್ಲೂ ರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿದುಬಂದಿದೆ. ರಾತ್ರಿ 11.50ಕ್ಕೆ ಭೂಮಿ ಕಂಪಿಸಿದ ಅನುಭವಾಗಿದೆ ಎಂದು ಹೇಳಲಾಗುತ್ತಿದೆ. ಬಾಗಲಕೋಟೆ, ಜಮಖಂಡಿ ತಾಲೂಕಿನಲ್ಲಿ ಕಂಪನದ ಅನುಭವವಾಗಿದ್ದು, ಈ ಬಗ್ಗೆ ಬಾಗಲಕೋಟೆ ಜಿಲ್ಲಾಡಳಿತ ಖಚಿತಪಡಿಸಿದೆ. ಅಂಕಲಗಿ ಗ್ರಾಮದಲ್ಲಿ ಭೂಕಂಪನದ ಅನುಭವವಾದ ಹಿನ್ನೆಲೆ ಕೊಟ್ಟಿಗೆಯಲ್ಲಿ ದನಕರುಗಳು ಎದ್ದು ನಿಂತಿರುವುದು ತಿಳಿದುಬಂದಿದೆ. ಕೆ.ಎಲ್.ಬಿಲ್.ಕೇರಿ ಎಂಬುವರ ಕೊಟ್ಟಿಗೆಯಲ್ಲಿದ್ದ ಹಸುಗಳು ಭೂಕಂಪನ ಅನುಭವಕ್ಕೆ ದಿಢೀರನೆ ಎದ್ದು ನಿಂತಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ ರಾತ್ರಿ 11.43 ರ ಸುಮಾರಿಗೆ ನಮಗೆ ಭೂಕಂಪನದ ಅನುಭವ ಆಗಿದೆ. ಹತ್ತರಿಂದ ಹನ್ನೆರಡು ಸೆಕೆಂಡುಗಳ ಕಾಲ ಭೂಕಂಪಿಸಿದ ಅನುಭವ ನಮಗೆ ಆಗಿದೆ. ರೋಲರ್ ಸಂಚರಿಸುವ ವೇಳೆ ಬರುವ ಶಬ್ದದ ಹಾಗೆ ಶಬ್ದ ಕೇಳಿಸಿದೆ. 10ರಿಂದ 12 ಸೆಕೆಂಡ್‌ ಕಾಲ ಕಂಪನದ ಅನುಭವ ಆಗಿದೆ. ನಮ್ಮ ಮನೆಯ ಸದಸ್ಯರು ಹೊರಗೆ ಬಂದು ನಿಂತಿದ್ದೆವು. ಮಕ್ಕಳು, ಮನೆಮಂದಿ ಭಯಗೊಂಡಿದ್ದರು ಎಂದು ಬಾಗಲಕೋಟೆ ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಸಲೀಮ್ ಶೇಕ್ ತಿಳಿಸಿದ್ದಾರೆ. ಸಲೀಮ್ ಶೇಖ್ ಅವರ ಮನೆ ಗೋಡೆ ಮೇಲೆ ಚಿಕ್ಕದಾಗಿ ಬಿರುಕು ಕಾಣಿಸಿಕೊಂಡಿದೆ.

ವಿಜಯಪುರದಲ್ಲಿ ಕಂಪನದ ತೀವ್ರತೆ 3.9ರಷ್ಟು ದಾಖಲು
ರಾತ್ರಿ 11.47ರ ಸುಮಾರಿಗೆ ವಿಜಯಪುರ ಸೇರಿದಂತೆ ಜಿಲ್ಲೆಯಾದ್ಯಂತ ಭೂಮಿ ಕಂಪಿಸಿದ ಅನುಭವ, ವಿಚಿತ್ರ ಶಬ್ದ ಎದುರಾಗಿದೆ. ಭಯದಿಂದ ಜನರು ತಮ್ಮ ಮನೆಗಳಿಂದ ಹೊರಗಡೆ ಓಡಿಬಂದಿದ್ದಾರೆ. 3 ರಿಂದ 4 ಸೆಕೆಂಡ್ ಕಾಲ ಭೂಮಿ‌ ನಡುಗಿದ ಅನುಭವವಾಗಿದ್ದು ಭೂಮಿಯಿಂದ ಕೇಳಿ‌ ಬಂದ ವಿಚಿತ್ರ ಶಬ್ದಕ್ಕೆ ಜನರಲ್ಲಿ ಭೀತಿ ಎದುರಾಗಿದೆ. ಸದ್ಯ ಗಣಿ, ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ

ನೈಜೀರಿಯಾ ಡ್ರಗ್ ಪೆಡ್ಲರ್​ನನ್ನು ಬಂಧಿಸಿದ ಸಿಸಿಬಿ, ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ವಶ

ಬೆಳಗಾವಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತ ಮೊಹಮ್ಮದ್ ಜಮಾದಾರ್ ತಯಾರಿಸುವ ಗಣಪತಿ

(Earthquake experience in Bagalkot and District Administration confirmed the earthquake)

Published On - 10:39 am, Sun, 5 September 21