ನೈಜೀರಿಯಾ ಡ್ರಗ್ ಪೆಡ್ಲರ್​ನನ್ನು ಬಂಧಿಸಿದ ಸಿಸಿಬಿ, ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ವಶ

ಮುಂಬೈನಲ್ಲಿ ಕಡಿಮೆ ಬೆಲೆಗೆ ಮಾದಕ ವಸ್ತು ಖರೀದಿಸುತ್ತಿದ್ದ. ಈತ ವೀಸಾ ನಿಯಮ ಉಲ್ಲಂಘಿಸಿ ಕಾನೂನು ಬಾಹಿರವಾಗಿ ವಾಸ್ತವ್ಯ ಮಾಡಿದ್ದ. ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳಿಗೆ ಈತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಕಮ್ಮನಹಳ್ಳಿ ಬಾಡಿಗೆ ಮನೆಯ ಮೇಲೆ ದಾಳಿ ಮಾಡಿ ಸಿಸಿಬಿ ಬಂಧಿಸಿದೆ.

ನೈಜೀರಿಯಾ ಡ್ರಗ್ ಪೆಡ್ಲರ್​ನನ್ನು ಬಂಧಿಸಿದ ಸಿಸಿಬಿ, ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ವಶ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸಿಸಿಬಿ ಪೊಲೀಸರು ನೈಜೀರಿಯಾ ಡ್ರಗ್ ಪೆಡ್ಲರ್ ಫಿಲಿಪ್ಸ್ನನ್ನು ಸೆರೆ ಹಿಡಿದಿದ್ದಾರೆ. ಹಾಗೂ 500 ಗ್ರಾಂ ಎಂಡಿಎಂಎ, 400 ಗ್ರಾಂ ಎಕ್ಸ್ಟಸಿ ಟ್ಯಾಬ್ಲೆಟ್ ಸೇರಿ ಒಂದು ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ.

ಮುಂಬೈನಲ್ಲಿ ಕಡಿಮೆ ಬೆಲೆಗೆ ಮಾದಕ ವಸ್ತು ಖರೀದಿಸುತ್ತಿದ್ದ. ಈತ ವೀಸಾ ನಿಯಮ ಉಲ್ಲಂಘಿಸಿ ಕಾನೂನು ಬಾಹಿರವಾಗಿ ವಾಸ್ತವ್ಯ ಮಾಡಿದ್ದ. ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳಿಗೆ ಈತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಕಮ್ಮನಹಳ್ಳಿ ಬಾಡಿಗೆ ಮನೆಯ ಮೇಲೆ ದಾಳಿ ಮಾಡಿ ಸಿಸಿಬಿ ಬಂಧಿಸಿದೆ.

ಗಾಂಜಾದಿಂದ ಸಂಪಾದಿಸಿದ್ದ ಆಸ್ತಿಯೆಲ್ಲಾ ಪೊಲೀಸರ ವಶ
ಇನ್ನು ಮತ್ತೊಂದೆಡೆ ಬೆಂಗಳೂರು ಗ್ರಾಮಾಂತರ ಪೊಲೀಸರು ಗಾಂಜಾ ದಂಧೆಕೋರರಿಗೆ ನಡುಕು ಹುಟ್ಟಿಸುವಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ಗಾಂಜಾ ದಂಧೆಯಲ್ಲಿ ಕಳೆದ ನಾಲ್ಕೈದು ವರ್ಷದಿಂದ ತೊಡಗಿದ್ದ ಅಂಜಯ್ ಕುಮಾರ್ ಎಂಬಾತ ಆನೇಕಲ್‌ನಲ್ಲಿ ಒಂದೂವರೆ ಕೋಟಿಗೂ ಅಧಿಕ ಆಸ್ತಿ ಮಾಡಿದ್ದ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ್ದ ಪೊಲೀಸರು, ಅಂಜಯ್ ಕುಮಾರ್, ಗಾಂಜಾ ದಂಧೆಯಿಂದ ಸಂಪಾದಿಸಿದ್ದ ಸಂಪೂರ್ಣ ಸ್ಥಿರ ಮತ್ತು ಚರ ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ. ವಿಶೇಷ ಅಂದ್ರೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗಾಂಜಾ ಕೇಸ್‌ನಲ್ಲಿ ಸಿಕ್ಕಿ ಬಿದ್ದವನ ಆಸ್ತಿ ಜಪ್ತಿ ಮಾಡಿದ್ದು, ಬೆಂಗಳೂರು ಗ್ರಾಮಾಂತರ ಪೊಲೀಸರು ಕಾರ್ಯ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ..

ಡ್ರಗ್ಸ್‌ ಕೇಸ್‌ನಲ್ಲಿ ಸಿಲುಕಿದ್ದ ನಟಿಯರ ಆಸ್ತಿಯೂ ವಶವಾಗುತ್ತಾ?
ಕಳೆದ ವರ್ಷ ಡ್ರಗ್‌ ಕೇಸ್‌ನಲ್ಲಿ ಸ್ಯಾಂಡಲ್‌ವುಡ್ ತಾರೆಯರ ಸಹಿತ ಕೆಲ ಪೆಡ್ಲರ್ಸ್ ಸಿಸಿಬಿ ಬಲೆಗೆ ಬಿದ್ದಿದ್ರು. ಈ ವೇಳೆ ವೀರೇನ್ ಖನ್ನಾ ಸೇರಿದಂತೆ ಹಲವು ಮಂದಿ ಡ್ರಗ್ ಪೆಡ್ಲಿಂಗ್ ಮಾಡಿರೋದು ಸಹ ಪತ್ತೆಯಾಗಿತ್ತು. ಹಾಗಾಗಿ ಸಿಸಿಬಿ ಕೂಡ ಬೆಂಗಳೂರು ಗ್ರಾಮಾಂತರ ಪೊಲೀಸರ ಮಾದರಿಯಲ್ಲೇ, ನಟಿಯರ ಜೊತೆಗೆ ಪೆಡ್ಲರ್ಸ್‌ಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತಾ ಅನ್ನೋ ಅನುಮಾನ ಶುರುವಾಗಿದೆ.

ಇದನ್ನೂ ಓದಿ: ಧಾರವಾಡ ಕೃಷಿ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘನ್ ವಿದ್ಯಾರ್ಥಿಗಳಿಂದ ವೀಸಾ ವಿಸ್ತರಿಸುವಂತೆ ಭಾರತ ಸರ್ಕಾರಕ್ಕೆ ಮನವಿ

Read Full Article

Click on your DTH Provider to Add TV9 Kannada