AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಡವರ ಜಾಗಕ್ಕೆ ಬಂದು ದಾಂಧಲೆ ನಡೆಸಿದ್ದ ರೌಡಿಶೀಟರ್ ಬಂಧನ

ಕಾಡುಗೋಡಿ ಪೊಲೀಸರಿಗೆ ಜುನೈದ್ ರೆಹಮಾನ್ ಎಂಬುವವರು ದೂರು ನೀಡಿದ್ದು, ದೂರು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಇದೇ ರೀತಿ ಹಲವು ಕಡೆ ಕಿರಿಕ್ ಮಾಡುತ್ತಾನೆ.

ಕಂಡವರ ಜಾಗಕ್ಕೆ ಬಂದು ದಾಂಧಲೆ ನಡೆಸಿದ್ದ ರೌಡಿಶೀಟರ್ ಬಂಧನ
ಜೆಸಿಬಿ ಮೂಲಕ ರಸ್ತೆ ಹಾಳು ಮಾಡಿದ್ದಾರೆ, ಬಂಧಿತ ಆರೋಪಿ ಪರಮೇಶ್
TV9 Web
| Updated By: sandhya thejappa|

Updated on: Sep 05, 2021 | 8:54 AM

Share

ಬೆಂಗಳೂರು: ಬೇರೆಯವರ ಜಾಗವನ್ನು ಆಸೆ ಪಟ್ಟಿದ್ದ ರೌಡಿಶೀಟರ್​ನ (Rowdy Sheeter) ಬಂಧಿಸಲಾಗಿದೆ. ಬೆಂಗಳೂರಿನ ಕಾಡುಗೋಡಿ ಪೊಲೀಸರು ರೌಡಿಶೀಟರ್ ಪರಮೇಶ್ ಎಂಬುವವನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಪರಮೇಶ್ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ದೊಮ್ಮಸಂದ್ರದಲ್ಲಿ ಕೆ.ಎಂ.ಕೆ ಕಂಪನಿ ಸಿಬ್ಬಂದಿಗೆ ಧಮ್ಕಿ ಹಾಕಿದ್ದ. ರಸ್ತೆ ಕಾಮಗಾರಿಗೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದ. ಜೆಸಿಬಿ ಸಮೇತ ಬಂದು ಪರಮೇಶ್ ಮತ್ತು ಆತನ ತಂಡ ಬೆದರಿಕೆ ಹಾಕಿದ್ದರು. ನಮ್ಮ ಅನುಮತಿ ಇಲ್ಲದೆ ಇಲ್ಲಿ ಏಕೆ ಕೆಲಸ ಮಾಡುತ್ತಿದ್ದೀರಾ? ಕಾಮಗಾರಿ ನಿಲ್ಲಿಸಿ ಎಂದು ಸೈಟ್ ಇಂಜಿನಿಯರ್ಗೆ ಧಮ್ಕಿ ಹಾಕಿದ್ದ ಎಂಬ ಆರೋಪ ಕೇಳಿಬಂದಿದೆ.

ಪರಮೇಶ್ ಸೈಟ್ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿ, ಕೆಲಸ ನಿಲ್ಲಿಸದಿದ್ದರೆ ಜೀವಸಹಿತ ಬಿಡಲ್ಲ ಎಂದು ಬೆದರಿಕೆ ಹಾಕಿದ್ದ. ಅಲ್ಲದೇ ಕಾಮಗಾರಿಗೆ ಹಾಕಲಾಗಿದ್ದ ಜಲ್ಲಿಕಲ್ಲು ಮತ್ತು ರಸ್ತೆಯನ್ನು ನಾಶ ಮಾಡಿದ್ದಾರೆ. ಇಲ್ಲಿ ಕಾಮಗಾರಿ ಮಾಡಲು ಬಿಡಲ್ಲ ಎಂದು ಅವಾಜ್ ಹಾಕಿದ ಆರೋಪಿ, ತನಗೆ ಸಂಬಂಧವೇ ಇಲ್ಲದ ಜಾಗಕ್ಕೆ ಹೋಗಿ ದಾಂಧಲೆ ನಡೆಸಿದ್ದಾನೆ. ಪರಮೇಶ್ ಗೂಂಡಾವರ್ತನೆಯ ದೃಶ್ಯ ಟಿವಿ9ಗೆ ಲಭ್ಯವಾಗಿದ್ದು, ಈ ಘಟನೆ ಸೆ.3 ರಂದು ಬೆಳಗ್ಗೆ 7.30ರ ಸುಮಾರಿಗೆ ನಡೆದಿದೆ.

ಕಾಡುಗೋಡಿ ಪೊಲೀಸರಿಗೆ ಜುನೈದ್ ರೆಹಮಾನ್ ಎಂಬುವವರು ದೂರು ನೀಡಿದ್ದು, ದೂರು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಇದೇ ರೀತಿ ಹಲವು ಕಡೆ ಕಿರಿಕ್ ಮಾಡುತ್ತಾನೆ. ಪರಮೇಶ್ ವಿರುದ್ಧ ಹೊಸಕೋಟೆ, ಕಾಡುಗೋಡಿ, ವೈಟ್ ಫೀಲ್ಡ್ ಸೇರಿದಂತೆ ಹಲವೆಡೆ ಪ್ರಕರಣ ದಾಖಲಾಗಿದೆ. ಆರ್ಟಿಐನಲ್ಲಿ ಮಾಹಿತಿ ಪಡೆದುಕೊಂಡು ತನಗೆ ಸಂಬಂಧವೇ ಇಲ್ಲದ ಜಾಗಕ್ಕೆ ಬಂದು ನೀಡಿ ಧಮ್ಕಿ ಹಾಕುತ್ತಾನಂತೆ. ಜೊತೆಗೆ ಮಾಲೀಕರನ್ನ ಬೆದರಿಸಿ ಹಣ ಪಡೆಯುತ್ತಾನಂತೆ.

2015ರಲ್ಲಿ ಹೊಸಕೋಟೆ ಠಾಣೆಯಲ್ಲಿ ಪರಮೇಶ್ ವಿರುದ್ಧ ರೌಡಿಶೀಟರ್ ಓಪನ್ ಆಗಿತ್ತು. ಸೆ.3 ರಂದು ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿದರಹಳ್ಳಿ ಹೋಬಳಿಯ ಕೆ.ದೊಮ್ಮಸಂದ್ರದಲ್ಲಿ ಕೆ.ಎಂ.ಕೆ ಕಂಪನಿಗೆ ಸೇರಿದ ಜಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಸರ್ವೆ ನಂಬರ್ 62 ರಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಜೆಸಿಬಿ ಸಮೇತ ಬಂದ ಆರೋಪಿ ಪರಮೇಶ್ ಮತ್ತು ಆತನ ತಂಡ ನಮ್ಮ ಅನುಮತಿ ಇಲ್ಲದೇ ಇಲ್ಲಿ ಯಾಕೆ ಕೆಲಸ ಮಾಡುತ್ತಿದ್ದೀರಾ? ಕಾಮಗಾರಿ ನಿಲ್ಲಿಸಿ ಎಂದು ಧಮ್ಕಿ ಹಾಕುತ್ತಾರೆ. ಅಲ್ಲದೇ ಸೈಟ್ ಇಂಜಿನಿಯರ್ನ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೆಲಸ ನಿಲ್ಲಿಸಬೇಕು ಇಲ್ಲದಿದ್ದರೆ ಜೀವಸಹಿತ ಬಿಡೋದಿಲ್ಲ ಅಂತ ಬೆದರಿಕೆ ಹಾಕಿರುವುದು ತಿಳಿದುಬಂದಿದೆ.

ಇದನ್ನೂ ಓದಿ

ಪಿಪಿಇ ಕಿಟ್​ ಧರಿಸಿದ ಸಿಬ್ಬಂದಿಯನ್ನು ನೋಡಿ ದೆವ್ವ ಎಂದು ಹೆದರಿ ಕಿರುಚಾಡಿದ ರೋಗಿ; ಅಕ್ಕಪಕ್ಕದವರೆಲ್ಲಾ ಗಾಬರಿ

ಶಿಕ್ಷಕನ ನೆನಪಿಗಾಗಿ ದೇವಾಲಯ ನಿರ್ಮಾಣ; 96 ವರ್ಷಗಳ ಹಿಂದಿನ ದೇವಸ್ಥಾನಕ್ಕೆ ನಿತ್ಯವೂ ಪೂಜೆ ಸಲ್ಲಿಸಿ ಸ್ಮರಿಸುತ್ತಿರುವ ಗ್ರಾಮಸ್ಥರು

(Bengaluru Police arrested Rowdy Sheeter who threatened the engineer)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ