Gold Rate Today: ಬೆಂಗಳೂರಿನಲ್ಲಿ ಏರಿಕೆಯಾದ ಚಿನ್ನ, ಬೆಳ್ಳಿ ದರ; 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಬೆಲೆ ಎಷ್ಟಿದೆ ಗೊತ್ತಾ?
Gold Price Today: ದೈನಂದಿನ ದರ ಬದಲಾವಣೆಯಲ್ಲಿ ಅಲ್ಪ ಏರಿಳಿತ ಕಾಣುತ್ತಿರುವುದು ಸಹಜ. ಹೀಗಿರುವಾಗ ಇಂದಿನ ದರ ವಿವರ ಪರಿಶೀಲಿಸಿ ನೀವು ಕೂಡಿಟ್ಟ ಹಣದಲ್ಲಿ ಚಿನ್ನ ಖರೀದಿಸಬಹುದು ಎಂದಾದರೆ ಯೋಚಿಸಿ.
Gold Silver Rate Today | ಕಳೆದ ಕೆಲ ದಿನಗಳಿಂದ ಚಿನ್ನದ ದರ ಕೊಂಚ ಇಳಿಕೆ ಕಂಡಿತ್ತು. ಆದರೆ ಇಂದು ( ಸೆಪ್ಟೆಂಬರ್ 5, ರವಿವಾರ) ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಆಗಿದೆ. ಅದೇ ರೀತಿ ಬೆಳ್ಳಿ ಬೆಲೆಯೂ (Silver Price) ಸಹ ಕೊಂಚ ಏರಿಕೆ ಕಂಡಿದೆ. ಚಿನ್ನದ ದರ (Gold Price) ಇಳಿಕೆಯತ್ತ ಸಾಗಿರಬೇಕು ಎಂಬ ನಿರೀಕ್ಷೆ ತಪ್ಪಲ್ಲ. ಆದರೆ ದೈನಂದಿನ ದರ ಬದಲಾವಣೆಯಲ್ಲಿ ಅಲ್ಪ ಏರಿಳಿತ ಕಾಣುತ್ತಿರುವುದು ಸಹಜ. ಹೀಗಿರುವಾಗ ಇಂದಿನ ದರ ವಿವರ ಪರಿಶೀಲಿಸಿ ನೀವು ಕೂಡಿಟ್ಟ ಹಣದಲ್ಲಿ ಚಿನ್ನ ಖರೀದಿಸಬಹುದು ಎಂದಾದರೆ ಯೋಚಿಸಿ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,500 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,45,000 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 3,000 ರೂಪಾಯಿ ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,550 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,85,500 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 3,300 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿ ದರದಲ್ಲಿಯೂ ಸಹ ಕೊಂಚ ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 65,200 ರೂಪಾಯಿ ನಿಗದಿ ಆಗಿದೆ. ನಿನ್ನೆಯ ದರಕ್ಕಿಂತ 1,600 ರೂಪಾಯಿ ಏರಿಕೆ ಕಂಡಿದೆ.
ಇಂದು ಬೆಂಗಳೂರು, ಚೆನ್ನೈ, ಮುಂಬೈ ಸೇರಿದಂತೆ ಹೈದರಾಬಾದ್, ಕೇರಳ, ಜೈಪುರದಲ್ಲಿಯೂ ಸಹ ಚಿನ್ನ, ಬೆಳ್ಳಿ ದರ ಏರಿಕೆ ಆಗಿದೆ. ಕಷ್ಟ ಕಾಲದಲ್ಲಿ ನೆರವಾಗುವ ಚಿನ್ನಕ್ಕೆ ತುಂಬಾ ಬೇಡಿಕೆ ಇದೆ. ಹಣ ಕೈಯ್ಯಲ್ಲಿದ್ದಾಗ ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡುವ ಪದ್ಧತಿ ಈಗಿನಿಂದ ಬಂದದ್ದಲ್ಲ, ಮೊದಲಿನಿಂದಲೂ ಸಹ ಈ ಪದ್ಧತಿ ಇದೆ. ಕೇವಲ ಆಭರಣಗಳನ್ನು ತೊಟ್ಟು ಸಂತೋಷ ಪಡುವುದೊಂದೇ ಅಲ್ಲದೇ ಕಷ್ಟ ಕಾಲದಲ್ಲಿ ನೆರವಾಗುವ ಚಿನ್ನಾಭರಣದ ದರ ಎಷ್ಟಿದೆ ಎಂದು ತಿಳಿಯುವ ಕುತೂಹಲ ಕೆರಳುವುದು ಸಾಮಾನ್ಯ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,960 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,49,600 ರೂಪಾಯಿ ನಿದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 450 ರೂಪಾಯಿ ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 49,050 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,90,500 ರೂಪಾಯಿ ನಿಗದಿ ಆಗಿದೆ. ಸುಮಾರು 4,900 ರೂಪಾಯಿ ಏರಿಕೆ ಕಂಡಿದೆ. ಕೆಜಿ ಬೆಳ್ಳಿ ಬೆಲೆ 69,600 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,800 ರೂಪಾಯಿ ನಿಗದಿ ಆಗಿದೆ.
ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,400 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,64,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,000 ರೂಪಾಯಿ ಏರಿಕೆ ಕಂಡು ಬಂದಿದೆ. ಅದೆ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,400 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,74,000 ರೂಪಾಯಿ ನಿದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,000 ರೂಪಾಯಿ ಹೆಚ್ಚಳವಾಗಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ 1,600 ರೂಪಾಯಿ ಏರಿಕೆ ಕಂಡು ಬಂದಿದ್ದು, 65,200 ರೂಪಾಯಿ ನಿಗದಿ ಆಗಿದೆ.
ಇದನ್ನೂ ಓದಿ:
Gold Rate Today: ಚಿನ್ನದ ದರ ಕೊಂಚ ಇಳಿಕೆ, ಬೆಳ್ಳಿ ಬೆಲೆ ಏರಿಕೆ; ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?
Gold Rate Today: ಇಳಿಕೆಯ ಹಾದಿ ಹಿಡಿದ ಚಿನ್ನದ ದರ; ಆಭರಣ ಖರೀದಿಸಲು ಸುಸಮಯ
(Gold price increase today 0n 2021 september 5 check silver price in bangalore delhi mumbai and minor city)
Published On - 7:31 am, Sun, 5 September 21