Gold Rate Today: ಚಿನ್ನದ ದರ ಕೊಂಚ ಇಳಿಕೆ, ಬೆಳ್ಳಿ ಬೆಲೆ ಏರಿಕೆ; ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?
ಈ ವಾರದ ಪ್ರಾರಂಭದಿಂದ ಚಿನ್ನ, ಬೆಳ್ಳಿ ದರ ಏರಿಕೆಯತ್ತ ಸಾಗುತ್ತಲೇ ಇತ್ತು. ಬಳಿಕ ಎರಡು ದಿನಗಳಿಂದ ಆಭರಣದ ಬೆಲೆ ಇಳಿಕೆ ಕಂಡಿದೆ. ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಚಿನ್ನದ ದರ ಇಳಿಕೆ ಕಂಡಿದೆ.
Gold Silver Price Today | ಬೆಂಗಳೂರು: ನಿನ್ನೆ ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿತ್ತು. ಆದರೆ ಬೆಳ್ಳಿ ದರ (Silver Price) ಏರಿಕೆಯತ್ತ ಸಾಗಿತ್ತು. ಇಂದು (ಸೆಪ್ಟೆಂಬರ್, 4 ಶನಿವಾರ) ಚಿನ್ನದ ದರದಲ್ಲಿ ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಕೊಂಚ ಏರಿಕೆ ಕಂಡಿದೆ. ಇದು ಗ್ರಾಹಕರಿಗೆ ಕೊಂಚ ಖುಷಿ ನೀಡುವ ವಿಚಾರ. ಈ ವಾರದ ಪ್ರಾರಂಭದಿಂದ ಚಿನ್ನ (Gold Price), ಬೆಳ್ಳಿ ದರ ಏರಿಕೆಯತ್ತ ಸಾಗುತ್ತಲೇ ಇತ್ತು. ಬಳಿಕ ಎರಡು ದಿನಗಳಿಂದ ಆಭರಣದ ಬೆಲೆ ಇಳಿಕೆ ಕಂಡಿದೆ. ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಚಿನ್ನದ ದರ ಇಳಿಕೆ ಕಂಡಿದೆ. ಯಾವ ಯಾವ ನಗರಗಳಲ್ಲಿ ಎಷ್ಟಿದೆ ಬೆಲೆ ಎಂಬುದನ್ನು ತಿಳಿಯೋಣ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,200 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,42,000 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಅದೆ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,220 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,82,200 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಇಳಿಕೆ ಆಗಿದೆ. ಬೆಳ್ಳಿ ದರದಲ್ಲಿ ಇಂದು ಕೊಂಚ ಏರಿಕೆ ಆಗಿದ್ದು, ಕೆಜಿ ಬೆಳ್ಳಿ ಬೆಲೆ 100 ರೂಪಾಯಿ ಏರಿಕೆ ಬಳಿಕ 63,600 ರೂಪಾಯಿ ನಿಗದಿಯಾಗಿದೆ.
ಕಳೆದ ಕೆಲವು ದಿನಗಳಿಂದ ಚಿನ್ನಾಭರಣದ ಬೆಲೆ ಇಳಿಕೆ ಕಾಣುತ್ತಿದೆ. ಮದುವೆ ಸಮಾರಂಭಗಳಿಗೆ, ವಿಶೇಷ ಪೂಜೆಯ ನಿಮಿತ್ತ ಆಭರಣ ಕೊಳ್ಳುವ ಆಸೆ ಇದ್ದವರು ಈ ಕುರಿತಂತೆ ಯೋಚಿಸಬಹುದು. ದೈನಂದಿನ ದರ ಬದಲಾವಣೆಯಲ್ಲಿ ಚಿನ್ನ, ಬೆಳ್ಳಿ ದರ ಹಾವು ಏಣಿ ಆಟ ಆಡುತ್ತಿರುವುದು ಸರ್ವೇಸಾಮಾನ್ಯ. ಕಳೆದ ಮೂರ್ನಾಲ್ಕು ದಿನಗಳಿಂದ ಚಿನ್ನದ ದರ ಇಳಿಕೆ ಕಾಣುತ್ತಿರುವುದು ಬಂಗಾರದ ಪ್ರಿಯರಿಗೆ ಖುಷಿ ನೀಡುವ ವಿಚಾರ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,510 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,45,100 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,560 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,85,600 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಳ್ಳಿ ದರದಲ್ಲಿಯೂ ಸಹ ಇಳಿಕೆ ಆಗಿದ್ದು, ಕೆಜಿ ಬೆಳ್ಳಿಗೆ 67,800 ರೂಪಾಯಿಯಾಗಿದೆ. ನಿನ್ನೆಯ ದರಕ್ಕಿಂತ ಸುಮಾರು 600 ರೂಪಾಯಿ ಇಳಿಕೆ ಕಂಡಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,350 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,63,500 ರೂಪಾಯಿ ನಿಗದಿ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 50,580 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,05,800 ರೂಪಾಯಿ ನಿಗದಿ ಆಗಿದೆ. ಬೆಳ್ಳಿ ದರದಲ್ಲಿ ಕೊಂಚ ಏರಿಕೆ ಆಗಿದ್ದು, 100 ರೂಪಾಯಿ ಏರಿಕೆ ಬಳಿಕ ಕೆಜಿ ಬೆಳ್ಳಿಗೆ 63,600 ರೂಪಾಯಿ ನಿಗದಿಯಾಗಿದೆ.
ಇದನ್ನೂ ಓದಿ:
Gold Rate Today: ಚಿನ್ನ ದರ ಕೊಂಚ ಏರಿಕೆ, ಬೆಳ್ಳಿ ದರ ಇಳಿಕೆ; ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?
Gold Rate Today: ವಿವಿಧ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ ದರ ಭಾರೀ ಇಳಿಕೆ; ಹೀಗಿದೆ ಬೆಲೆ