Car Insurance Types: ನಿಮಗೆ ಗೊತ್ತಿರಬೇಕಾದ ಕಾರು ವಿಮೆಯ ಬಗೆಗಳಿವು

ಕಾರು ಇನ್ಷೂರೆನ್ಸ್​ನಲ್ಲಿ ಎಷ್ಟು ಬಗೆ? ಅದರ ಕವರೇಜ್ ಇತ್ಯಾದಿ ವಿವರಗಳ ಬಗ್ಗೆ ಈ ಲೇಖನದಲ್ಲಿ ಉಪಯುಕ್ತವಾದ ಮಾಹಿತಿ ಇದೆ.

1/10
ಕಾರಿನ ಇನ್ಷೂರೆನ್ಸ್​ನ ಪ್ರಾಮುಖ್ಯ ಪದೇ ಪದೇ ಗೊತ್ತಾಗುತ್ತಲೇ ಇರುತ್ತದೆ. ಮಾರ್ಕೆಟ್​ನಲ್ಲಂತೂ ಹಲವು ಬಗೆಯ ಇನ್ಷೂರೆನ್ಸ್ ಪ್ರಾಡಕ್ಟ್​ಗಳು ಲಭ್ಯವಿವೆ. ಇಲ್ಲಿ ಕೆಲವು ಪ್ರಾಥಮಿಕ ಬಗೆಯ ಕಾರು ಇನ್ಷೂರೆನ್ಸ್​ ಬಗ್ಗೆ ನೀಡಲಾಗಿದೆ. ಆರಂಭಿಕ ಹಂತದಲ್ಲಿ ಇರುವವರಿಗೆ ಇದರಿಂದ ಅನುಕೂಲ ಆಗುತ್ತದೆ.
ಕಾರಿನ ಇನ್ಷೂರೆನ್ಸ್​ನ ಪ್ರಾಮುಖ್ಯ ಪದೇ ಪದೇ ಗೊತ್ತಾಗುತ್ತಲೇ ಇರುತ್ತದೆ. ಮಾರ್ಕೆಟ್​ನಲ್ಲಂತೂ ಹಲವು ಬಗೆಯ ಇನ್ಷೂರೆನ್ಸ್ ಪ್ರಾಡಕ್ಟ್​ಗಳು ಲಭ್ಯವಿವೆ. ಇಲ್ಲಿ ಕೆಲವು ಪ್ರಾಥಮಿಕ ಬಗೆಯ ಕಾರು ಇನ್ಷೂರೆನ್ಸ್​ ಬಗ್ಗೆ ನೀಡಲಾಗಿದೆ. ಆರಂಭಿಕ ಹಂತದಲ್ಲಿ ಇರುವವರಿಗೆ ಇದರಿಂದ ಅನುಕೂಲ ಆಗುತ್ತದೆ.
2/10
ಕಾರು ಅಪಘಾತ ಸಂಭವಿಸಿ, ಅದರಿಂದ ಆಗುವ ಆಸ್ತಿಯ ಹಾನಿಯ ರಿಪೇರಿ, ಆ ನಂತರ ವೈದ್ಯಕೀಯ ಬಿಲ್, ಅಪಘಾತದಿಂದ ಆಗುವ ಗಾಯದ ಹಾನಿಯನ್ನು ಲಯಾಬಿಲಿಟಿ ಇನ್ಷೂರೆನ್ಸ್ ಕವರ್ ಮಾಡುತ್ತದೆ.
ಕಾರು ಅಪಘಾತ ಸಂಭವಿಸಿ, ಅದರಿಂದ ಆಗುವ ಆಸ್ತಿಯ ಹಾನಿಯ ರಿಪೇರಿ, ಆ ನಂತರ ವೈದ್ಯಕೀಯ ಬಿಲ್, ಅಪಘಾತದಿಂದ ಆಗುವ ಗಾಯದ ಹಾನಿಯನ್ನು ಲಯಾಬಿಲಿಟಿ ಇನ್ಷೂರೆನ್ಸ್ ಕವರ್ ಮಾಡುತ್ತದೆ.
3/10
ರಕ್ಷಣೆ ದೊರೆಯುತ್ತದೆ
ರಕ್ಷಣೆ ದೊರೆಯುತ್ತದೆ
ಲಯಾಬಿಲಿಟಿ ಇನ್ಷೂರೆನ್ಸ್ ಎಂಬುದು ಕನಿಷ್ಠ ಪ್ರಮಾಣದ ಇನ್ಷೂರೆನ್ಸ್​ ಕವರ್. ಕಾರು ಚಾಲಕರಿಗೆ ಇದು ಕಡ್ಡಾಯ. ನಿಮ್ಮದೇ ತಪ್ಪಿಂದ ಅಪಘಾತ ಸಂಭವಿಸಿದಾಗ ಇದರಿಂದ ರಕ್ಷಣೆ ದೊರೆಯುತ್ತದೆ.
4/10
ವೈಪರೀತ್ಯದ ಹಾನಿ, ಕಳುವು ಮತ್ತಿತರ ಬಗೆಯಿಂದ ರಕ್ಷಣೆ
ವೈಪರೀತ್ಯದ ಹಾನಿ, ಕಳುವು ಮತ್ತಿತರ ಬಗೆಯಿಂದ ರಕ್ಷಣೆ
ಇನ್ನು ಕಾಂಪ್ರಹೆನ್ಸಿವ್ ಕಾರು ಇನ್ಷೂರೆನ್ಸ್ ವಾಹನವನ್ನು ಹಲವು ಬಗೆಯಲ್ಲಿ ರಕ್ಷಿಸುತ್ತದೆ. ಹವಾಮಾವ ವೈಪರೀತ್ಯದ ಹಾನಿ, ಕಳುವು ಮತ್ತಿತರ ಬಗೆಯಿಂದ ರಕ್ಷಣೆ ಸಿಗುತ್ತದೆ. ಇವಕ್ಕೆಲ್ಲ ಪ್ರತ್ಯೇಕ ಕವರ್ ಸಾಧ್ಯ ಇರುವುದಿಲ್ಲ.
5/10
ಅಪಘಾತ ಕವರ್ ಅಡಿ ಪಾವತಿ ಮಾಡಲಾಗುತ್ತದೆ
ಅಪಘಾತ ಕವರ್ ಅಡಿ ಪಾವತಿ ಮಾಡಲಾಗುತ್ತದೆ
ಒಂದು ವೇಳೆ ಅಪಘಾತ ಸಂಭವಿಸಿದಲ್ಲಿ ಅದರಿಂದ ಕಾರಿಗೆ ಆದ ಹಾನಿಗೆ ಅಪಘಾತ ಕವರ್ ಅಡಿ ಪಾವತಿ ಮಾಡಲಾಗುತ್ತದೆ. ಒಂದು ವೇಳೆ ದುರಸ್ತಿಗಾಗಿ ಆಗುವ ಖರ್ಚಿನ ಪ್ರಮಾಣವು ವಾಹನದ ವೆಚ್ಚಕ್ಕಿಂತ ಹೆಚ್ಚಾದಲ್ಲಿ ಕಾರಿನ ಮೌಲ್ಯದಷ್ಟನ್ನು ಮಾತ್ರ ಪಾವತಿಸಲಾಗುತ್ತದೆ. ಶೂನ್ಯ ಸವಕಳಿ (ಝೀರೋ ಡಿಪ್ರಿಸಿಯೇಷನ್) ಎಂಬುದು ಇನ್ಷೂರೆನ್ಸ್ ಎಂಬುದು ಕವರೇಜ್​ನ ಭಾಗ.
6/10
ಆಲೋಚಿಸಿ ನಿರ್ಧಾರ ಮಾಡಿ
ಆಲೋಚಿಸಿ ನಿರ್ಧಾರ ಮಾಡಿ
ಒಂದು ವೇಳೆ ಕಾರು ಸ್ವಲ್ಪ ಮಟ್ಟಿಗೆ ಹಳೆಯದಾದಲ್ಲಿ ಅಪಘಾತ ವಿಮೆಯಲ್ಲಿ ಹಣ ಹೂಡಿಕೆ ಮಾಡುವುದು ಸೂಕ್ತ ಅಲ್ಲ. ಆದ್ದರಿಂದ ಸದ್ಯದ ಮಾರುಕಟ್ಟೆ ಮೌಲ್ಯಮಾಪನವನ್ನು ಮಾಡಿ, ಅದರ ಪ್ರಕಾರವಾಗಿ ಇನ್ಷೂರೆನ್ಸ್​ ಕವರ್ ಪಡೆಯಬಹುದು.
7/10
ಇನ್ಷೂರೆನ್ಸ್​ ಭಾರತದಾದ್ಯಂತ ಲಭ್ಯವಿಲ್ಲ
ಇನ್ಷೂರೆನ್ಸ್​ ಭಾರತದಾದ್ಯಂತ ಲಭ್ಯವಿಲ್ಲ
ವಯಕ್ತಿಕ ಗಾಯದ ಸುರಕ್ಷತೆಯು ಚಾಲಕ ಮತ್ತು ಸಹ ಪ್ರಯಾಣಿಕರ ವೈದ್ಯಕೀಯ ಬಿಲ್​ ಅನ್ನು ಕವರ್ ಮಾಡುತ್ತದೆ. ಇದರಲ್ಲಿ ಯಾರ ತಪ್ಪಿಂದ ಅಪಘಾತ ಸಂಭವಿಸಿತು ಎಂಬುದು ಗಣನೆಗೆ ಬರಲ್ಲ. ಆದರೆ ಈ ಇನ್ಷೂರೆನ್ಸ್​ ಭಾರತದಾದ್ಯಂತ ಲಭ್ಯವಿಲ್ಲ.
8/10
ಸ್ವಂತ ಹಣದಿಂದ ರಿಪೇರಿ
ಸ್ವಂತ ಹಣದಿಂದ ರಿಪೇರಿ
ನಿಮ್ಮ ಕಾರನ್ನು ಮತ್ತೊಂದು ವಾಹನ ಗುದ್ದಿ, ಅದಕ್ಕೆ ಇನ್ಷೂರೆನ್ಸ್ ಇಲ್ಲದಿದ್ದಲ್ಲಿ ನಿಮ್ಮದೇ ಸ್ವಂತ ಹಣದಿಂದ ರಿಪೇರಿಗೆ ಖರ್ಚು ಮಾಡಬೇಕಾಗುತ್ತದೆ. ಇನ್ನು ಕಡಿಮೆ ಮೊತ್ತದ ಕವರೇಜ್​ ಇರುವ ಕಡೆಗೆ ಅನುಸರಿಸಬೇಕಾದ ನಿಯಮದ ಕಡೆಗೆ ಗಮನ ಹರಿಸಬೇಕಾಗುತ್ತದೆ. ಅದು ಯಾವಾಗೆಂದರೆ, ತಪ್ಪು ಮಾಡಿದ ಚಾಲಕರ ಲಯಾಬಿಲಿಟಿಯು ಗಾಯಾಳುಗಳ ವೈದ್ಯಕೀಯ ವೆಚ್ಚವನ್ನೂ ಭರಿಸಲಾರದಷ್ಟು ವಿಪರೀತ ಕಡಿಮೆ ಇದ್ದಾಗ ಹೀಗಾಗುತ್ತದೆ.
9/10
ಕಡಿಮೆ ಮೊತ್ತವಿದ್ದಲ್ಲಿ
ಕಡಿಮೆ ಮೊತ್ತವಿದ್ದಲ್ಲಿ
ಸಾಮಾನ್ಯವಾಗಿ ಹೇಗೆಂದರೆ, ತಪ್ಪು ಮಾಡಿದ ಚಾಲಕರ ಇನ್ಷೂರೆನ್ಸ್ ಮಿತಿಯ ಒಳಗೆ, ಅದರ ಮೂಲಕವೇ ಎಲ್ಲ ಹಾನಿಗೂ ಪಾವತಿ ಮಾಡಲಾಗುತ್ತದೆ. ಒಂದು ವೇಳೆ ಅದು ಸಾಕಾಗಲಿಲ್ಲ ಎಂದಾದರೆ ಅಂಡರ್ ಇನ್ಷೂರ್ಡ್​ ಮೋಟಾರಿಸ್ಟ್ ಕವರೇಜ್​ನಿಂದ ಹೆಚ್ಚುವರಿ ಮೊತ್ತವು ಅದೆಷ್ಟು ಮಿತಿಯ ತನಕ ಆಯ್ಕೆ ಮಾಡಲಾಗುತ್ತದೋ ಅಲ್ಲಿಯವರೆಗೆ ಆಗುತ್ತದೆ.
10/10
ನೆನಪಿಟ್ಟುಕೊಳ್ಳಬೇಕಾದದ್ದು
ನೆನಪಿಟ್ಟುಕೊಳ್ಳಬೇಕಾದದ್ದು
ನೆನಪಿಟ್ಟುಕೊಳ್ಳಬೇಕಾದ ಅಂಶ ಏನೆಂದರೆ, ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ, ಭಾರತದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಸಂಚಾರ ಮಾಡುವುದಕ್ಕೆ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಕವರ್, ಅದು ಕೂಡ ಕಾಂಪ್ರಹೆನ್ಸಿವ್ ಇನ್ಷೂರೆನ್ಸ್ ಇಲ್ಲದ ಸಂದರ್ಭದಲ್ಲಿ ಕಡ್ಡಾಯ.

Click on your DTH Provider to Add TV9 Kannada