- Kannada News Photo gallery Cricket photos KBC 13: GANGULY-SEHWAG COULD NOT ANSWER THE QUESTION RELATED TO DHONI
KBC 13: ಧೋನಿ ಕುರಿತಾದ ಪ್ರಶ್ನೆಗೆ ತಬ್ಬಿಬ್ಬಾದ ಗಂಗೂಲಿ, ಸೆಹ್ವಾಗ್..!
KBC 13 GANGULY-SEHWAG: ಟ್ರಾವಿಸ್ ಡೌಲಿನ್ ವಿಕೆಟ್, ಇದು ಯಾವ ಮಾಜಿ ಟೀಮ್ ಇಂಡಿಯಾ ನಾಯಕನ ಏಕೈಕ ಅಂತರಾಷ್ಟ್ರೀಯ ವಿಕೆಟ್?. ಈ ಪ್ರಶ್ನೆಯ ಉತ್ತರದ ನಾಲ್ಕು ಆಯ್ಕೆಗಳು ಹೀಗಿವೆ.
Updated on: Sep 04, 2021 | 3:59 PM

ಬಾಲಿವುಡ್ ಶೆಹನ್ಷಾ ಅಮಿತಾಭ್ ಬಚ್ಚನ್ ಹಿಂದಿ ಕಿರುತೆರೆಯಲ್ಲಿ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಪತಿ ಕಾರ್ಯಕ್ರಮದಲ್ಲಿ ಈ ವಾರ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಅತಿಥಿಗಳಾಗಿ ಕಾಣಿಸಿಕೊಂಡಿದ್ದರು. ಇದೇ ವೇಳೆ ಬಿಗ್ ಬಿ ಜೊತೆ ಕ್ರಿಕೆಟ್ ಅಂಗಳದ ಹಲವು ರಸ ನಿಮಿಷಗಳನ್ನು ಹಂಚಿಕೊಂಡರು. ಇನ್ನು ಕಾರ್ಯಕ್ರಮದಲ್ಲಿ ಹಲವು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ದಾದಾ-ವೀರು ಜೋಡಿ 25 ಲಕ್ಷ ರೂ. ಗೆದ್ದುಕೊಂಡರು.

ಆದರೆ ಈ ಪ್ರಶ್ನೆಗಳಿಗೆ ಉತ್ತರಿಸಲು ನಾಲ್ಕು ಲೈಫ್ ಲೈನ್ಗಳನ್ನು ಬಳಸಿಕೊಂಡಿದ್ದು ವಿಶೇಷವಾಗಿತ್ತು. ಅದರಲ್ಲೂ ಪ್ರಶ್ನೆಯೊಂದಕ್ಕೆ ಸೌರವ್ ಗಂಗೂಲಿ ಹಾಗೂ ಸೆಹ್ವಾಗ್ ವಿಭಿನ್ನ ಉತ್ತರ ನೀಡುವ ಮೂಲಕ ಗೊಂದಲಕ್ಕೆ ಒಳಗಾದದರು. ಈ ವೇಳೆ ಕೂಡ ಲೈಫ್ ಲೈನ್ ಮೊರೆ ಹೋಗುವ ಮೂಲಕ ಸರಿ ಉತ್ತರ ನೀಡಿದರು.

ಆ ಪ್ರಶ್ನೆ ಮತ್ಯಾರದ್ದೂ ಅಲ್ಲ. ಬದಲಾಗಿ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕುರಿತಾದದ್ದು ಎಂಬುದು ವಿಶೇಷ. ಕ್ರಿಕೆಟ್ಗೆ ಸಂಬಂಧಿಸಿದ ಪ್ರಶ್ನೆ ಕೇಳುವುದಾಗಿ ತಿಳಿಸಿದ ಅಮಿತಾಭ್ ಬಚ್ಚನ್, ಪ್ರಶ್ನೆಯೇನೆಂದರೆ- ಟ್ರಾವಿಸ್ ಡೌಲಿನ್ ವಿಕೆಟ್, ಇದು ಯಾವ ಮಾಜಿ ಟೀಮ್ ಇಂಡಿಯಾ ನಾಯಕನ ಏಕೈಕ ಅಂತರಾಷ್ಟ್ರೀಯ ವಿಕೆಟ್?. ಈ ಪ್ರಶ್ನೆಯ ಉತ್ತರದ ನಾಲ್ಕು ಆಯ್ಕೆಗಳು ಹೀಗಿವೆ.

1. ಎಂಎಸ್ ಧೋನಿ 2. ಮೊಹಮ್ಮದ್ ಅಜರುದ್ದೀನ್ 3. ಸುನೀಲ್ ಗವಾಸ್ಕರ್ 4. ರಾಹುಲ್ ದ್ರಾವಿಡ್. ಈ ನಾಲ್ಕು ಆಯ್ಕೆಯನ್ನು ನೋಡಿ ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ಗೊಂದಲಕ್ಕೊಳಗಾದರು. ಬಳಿಕ ಇಬ್ಬರೂ ಬೇರೆ ಬೇರೆ ಉತ್ತರಗಳನ್ನು ನೀಡಿದರು. ಗಂಗೂಲಿ ಸುನಿಲ್ ಗವಾಸ್ಕರ್ ಹೆಸರನ್ನು ತೆಗೆದುಕೊಂಡರೆ, ಸೆಹ್ವಾಗ್ ಅಜರುದ್ದೀನ್ ಹೆಸರನ್ನು ಹೇಳಿದರು. ಇದಾಗ್ಯೂ ಇದೇ ಸರಿಯಾದ ಉತ್ತರ ಎಂಬ ವಿಚಾರದಲ್ಲಿ ಇಬ್ಬರಲ್ಲಿ ಒಮ್ಮತ ಮೂಡಿಬಂದಿರಲಿಲ್ಲ. ಹೀಗಾಗಿ ಎಕ್ಸ್ಪರ್ಟ್ ಲೈಫ್ ಲೈನ್ ಮೊರೆ ಹೋದರು.

ಲೈಫ್ ಲೈನ್ ಸಹಾಯದಿಂದ ಸರಿಯಾದ ಉತ್ತರ ಪಡೆದ ವೀರು-ದಾದಾ ಮಹೇಂದ್ರ ಸಿಂಗ್ ಧೋನಿ ಎಂದು ಉತ್ತರಿಸಿದರು. ಟ್ರಾವಿಸ್ ಡೌಲಿನ್ 2009 ಚಾಂಪಿಯನ್ಸ್ ಟ್ರೋಫಿಯಲ್ಲಿ ವೆಸ್ಟ್ ಇಂಡೀಸ್ ಪರ ಆಡಿದ್ದರು. ಮಹೇಂದ್ರ ಸಿಂಗ್ ಧೋನಿ ಆ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಕೀಪಿಂಗ್ ಜವಾಬ್ದಾರಿ ನೀಡಿ ಬೌಲಿಂಗ್ ಮಾಡಿದ್ದರು. ಆ ವೇಳೆ ಟ್ರಾವಿಸ್ ಡೌಲಿನ್ ಧೋನಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದರು. ಇದು ಎಂಎಸ್ಡಿ ಹೆಸರಿನಲ್ಲಿರುವ ಏಕೈಕ ಅಂತರಾಷ್ಟ್ರೀಯ ವಿಕೆಟ್. ಇನ್ನು ಸುನೀಲ್ ಗವಾಸ್ಕರ್ ಕೂಡು ಒಂದು ಟೆಸ್ಟ್ ವಿಕೆಟ್ ಪಡೆದಿದ್ದಾರೆ, ಆದರೆ ಅದು ಜಹೀರ್ ಅಬ್ಬಾಸ್ ಅವರದ್ದು ಎಂಬುದು ಇಲ್ಲಿ ವಿಶೇಷ.

ಇನ್ನು ಈರ್ವರೂ ಚಾರಿಟಿಗಾಗಿ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಸೆಹ್ವಾಗ್-ವೀರು ಜೋಡಿ 25 ಲಕ್ಷ ರೂಗಳನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲದೆ ಕೆಲ ಕಾಲ ಅಮಿತಾಭ್ ಬಚ್ಚನ್ ಅವರನ್ನು ದಾದಾ ಹಾಟ್ ಸೀಟ್ನಲ್ಲಿ ಕೂರಿಸಿ ಪ್ರಶ್ನೆಗಳನ್ನ ಎಸೆದರು. ಇದೇ ಕಾರ್ಯಕ್ರಮದ ಬಂಗಾಳಿ ಅವರತರಣಿಕೆಗೆ ಈ ಹಿಂದೆ ಸೌರವ್ ಗಂಗೂಲಿ ನಿರೂಪಕರಾಗಿದ್ದರು. ಹೀಗಾಗಿ ಪ್ರಶ್ನೆಗಳನ್ನು ಕೇಳುವಾಗ ತುಸು ಕರುಣೆಯಿರಲಿ ಎಂದು ಬಿಗ್ ಬಿ ದಾದಾ ಅವರ ಕಾಲೆಳೆದರು. ಒಟ್ಟಿನಲ್ಲಿ ಅಮಿತಾಭ್ ಬಚ್ಚನ್, ಸೆಹ್ವಾಗ್, ಗಂಗೂಲಿ ಸಮಾಗಮದ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿದ್ದು, ಬಿಗ್ ಬಿ ಪ್ರಶ್ನೆಗೆ ವೀರು ನೀಡುವ ಉತ್ತರ, ದಾದಾ ಅವರ ಮರುಪ್ರಶ್ನೆಯನ್ನು ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ.



















