ಬಣಜಿಗ ಸಮಾಜದ ಬಗ್ಗೆ ವ್ಯಂಗ್ಯ ಆರೋಪ: ಯಾರೋ ಮಂತ್ರಿ ಮಗ ಅಂದರು, ಅದಕ್ಕೆ‌ ನಾನು ಅಂದೆ ಎಂದ ಕಾಶಪ್ಪನವರ್

| Updated By: ವಿವೇಕ ಬಿರಾದಾರ

Updated on: Oct 24, 2022 | 3:51 PM

ಹುಕ್ಕೇರಿಯಲ್ಲಿ ನಡೆದ ಪಂಚಮಸಾಲಿ ಸಮುದಾಯದಲ್ಲಿ ನಡೆದ ಪಂಚಮಸಾಲಿ ಮೀಸಲಾತಿ ಸಮಾವೇಶದಲ್ಲಿ ಬಣಜಿಗ ಸಮುದಾಯಕ್ಕೆ ವ್ಯಂಗ್ಯವಾಡಿರುವ ಆರೋಪ ಕೇಳಿಬಂದಿದೆ.

ಬಣಜಿಗ ಸಮಾಜದ ಬಗ್ಗೆ ವ್ಯಂಗ್ಯ ಆರೋಪ: ಯಾರೋ ಮಂತ್ರಿ ಮಗ ಅಂದರು, ಅದಕ್ಕೆ‌ ನಾನು ಅಂದೆ ಎಂದ ಕಾಶಪ್ಪನವರ್
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್
Follow us on

ಬಾಗಲಕೋಟೆ: ಬಣಜಿಗ ಸಮಾಜದವರ ಬಗ್ಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ವ್ಯಂಗ್ಯವಾಡಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದ್ದು, ಈ ಬಗ್ಗೆ ಬಾಗಲಕೋಟೆಯಲ್ಲಿ (Bagalkot) ಮಾತನಾಡಿದ ಅವರು ನಾನು ಯಾವುದೇ ಸಮಾಜ ಮತ್ತು ವ್ಯಕ್ತಿಗಳನ್ನು ನಿಂದನೆ ಮಾಡಿಲ್ಲ. ಮೀಸಲಾತಿ ಸಮಾವೇಶದಲ್ಲಿ ಯಾರೋ ಮಂತ್ರಿ ಮಗ ಅಂದರು. ಅದಕ್ಕೆ‌ ನಾನು ಕೂಡ ಮಂತ್ರಿ ಮಗ ಅಂದಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ಪಂಚಮಸಾಲಿ (Panchamasali) ಸಮುದಾಯಕ್ಕೂ 2ಎ ಮೀಸಲಾತಿ ನೀಡಬೇಕು ಎಂದು ಅ.23ರಂದು ಹುಕ್ಕೇರಿಯಲ್ಲಿ ನಡೆದಿದ್ದ ಸಮಾವೇಶದಲ್ಲಿ ಬಣಜಿಗ ಸಮಾಜದವರ ವ್ಯಂಗ್ಯವಾಗಿ ಮಾತನಾಡಿದ್ದರು.

ಉಮೇಶ್ ಕತ್ತಿ ಅವರು ಹುಕ್ಕೇರಿ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದವರು‌. ಅವರ ಮೇಲೆ‌ ಗೌರವವಿದೆ. ಅನಾವಶ್ಯಕ ವಿಷಯಾಂತರ ಮಾಡಲಾಗಿದೆ. ನಾನು ವೇದಿಕೆಯಲ್ಲಿ ಯಾವುದೇ ಜಾತಿ, ವ್ಯಕ್ತಿ ಹೆಸರು ಎತ್ತಿ ಮಾತಾಡಿಲ್ಲ. ನಾನು ಎಲ್ಲ ಲಿಂಗಾಯತ ಒಳಸ ಸಮಾಜಕ್ಕೆ ಹೇಳಲು ಬಯಸುತ್ತೇನೆ, ಲಿಂಗಧಾರಣೆ ಮಾಡುವ ನಾವೆಲ್ಲರೂ ಒಂದು. ನಾವು ಬಣಜಿಗ ಸಮುದಾಯಕ್ಕೆ ಬೀಗರು ಅಂತಿವಿ. ಅನಾವಶ್ಯಕ ವಿಷಯಾಂತರ ಮಾಡಲಾಗಿದೆ ಎಂದರು.

ನಾನು ವೇದಿಕೆಯಲ್ಲಿ ಯಾವುದೇ ಜಾತಿ,ವ್ಯಕ್ತಿ ಹೆಸರು ಎತ್ತಿ ಮಾತಾಡಿಲ್ಲ. ಯಾರೊ ಮಂತ್ರಿ ಮಗ ಅಂದರು. ಅದಕ್ಕೆ ‌ನಾನು ಕೂಡ ಮಂತ್ರಿ ಮಗ ಅಂದ್ದಿದ್ದೇನೆ ಅಷ್ಟೇ. ನಾನು ಎಲ್ಲ ಲಿಂಗಾಯತ ಒಳಸಮಾಜಕ್ಕೆ ಹೇಳಲು ಬಯಸುತ್ತೇನೆ. ಲಿಂಗಧಾರಣೆ ಮಾಡುವ ನಾವೆಲ್ಲರೂ ಒಂದು. ನಾವು ಬಣಜಿಗ ಸಮುದಾಯಕ್ಕೆ ಬೀಗರು ಅಂತಿವಿ ಎಂದು ತಿಳಿಸಿದರು.

ಕಳೆದ ಬಾರಿ ನನ್ನ ಪತ್ನಿ ವೀಣಾ ಕಾಶಪ್ಪನವರ್​ ಲೋಕಸಭೆ ಚುನಾವಣೆ ವೇಳೆಯೂ ಅಪಪ್ರಚಾರ ಮಾಡಿದರು. ಆ ಬಗ್ಗೆ ಮಾತಾಡಿದ್ದಕ್ಕೆ ಪತ್ನಿ ವೀಣಾ ಕಾಶಪ್ಪನವರ ವಿರುದ್ದಾ ಮಾತಾಡಿದರು. ಈಗ ನನಗೆ ಅವಾಚ್ಯಶಬ್ದ ಬಳಸಿ ಮಾತಾಡೋದು ಸರಿಯಲ್ಲ. ನನ್ನ ಭಾವಚಿತ್ರ ಸುಟ್ಟು ಹಾಕಿದರೂ ನನಗೆ ವ್ಯತ್ಯಾಸ ಬೀಳೋದಿಲ್ಲ. ನನಗೆ ಹುಚ್ಚು ನಾಯಿ ಅಂದವರು ಯಾರು ಅಂತೆಲ್ಲ ಗೊತ್ತಿದೆ. ಪದೆ ಪದೆ ಚುನಾವಣೆ ವೇಳೆ ಈ ತರಹ ಮಾತಾಡೋದು ಸರಿಯಲ್ಲ. ನಾನು ಹುಕ್ಕೇರಿ ಅವರ ಹೆಸರು ತೆಗೆದುಕೊಂಡು ಮಾತಾಡಿಲ್ಲ ಎಂದು ಹೇಳಿದ್ದಾರೆ.

ನಾನು ಬೆಳಗಾವಿ ಜನರಿಗೆ ಹೇಳಲು ಬಯಸುತ್ತೇನೆ. ನನಗೆ ಕೊಲೆ ಮಾಡೋದಾಗಿ ಬೆದರಿಕೆ ಕರೆಗಳು ಬಂದಿವೆ. ಇದಕ್ಕೆಲ್ಲ ಹೆದರುವ ಮಗ ಅಲ್ಲ. ನಾನು ಕಾನೂನು ಹೋರಾಟ ಮಾಡುತ್ತೇವೆ‌. ವ್ಯಯಕ್ತಿಕವಾಗಿ ನನ್ನ ಎದುರು ಹಾಕಿಕೊಳ್ಳೋದಕ್ಕೆ ಬಂದರೇ, ಬಟ್ಟೆ ಬಿಚ್ಚಿ ಬರೋದಕ್ಕೆ ನಾನು ಸಿದ್ದ ಎಂದು ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:51 pm, Mon, 24 October 22