ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ನಾಲ್ವರ ದುರ್ಮರಣ; ಓರ್ವನನ್ನು ರಕ್ಷಿಸಲು ಹೋಗಿ ಮಗ, ಅಳಿಯ ಮತ್ತು ಬೋಟ್ ಆಪರೇಟರ್ ಸಾವು

| Updated By: ಆಯೇಷಾ ಬಾನು

Updated on: Oct 07, 2021 | 4:25 PM

ಮಾನಸಿಕ ಅಸ್ವಸ್ಥ ಶಿವಪ್ಪ ಅಮಲೂರು ಎಂಬುವವರು ನದಿಯಲ್ಲಿ ಮುಳುಗಿದ್ದಾರೆ. ಈ ವೇಳೆ ಶಿವಪ್ಪನ ಮೃತದೇಹ ಹುಡುಕಲು ಶಿವಪ್ಪ ಅಮಲೂರು ಪುತ್ರ ಯಮನಪ್ಪ ಅಮಲೂರು ಮತ್ತು ಶಿವಪ್ಪ ಅಮಲೂರು ಅಳಿಯ ಶರಣಗೌಡ ಬಿರಾದರ್ ಇಬ್ಬರು ಬೋಟ್ನಲ್ಲಿ ತೆರಳಿದ್ದಾರೆ.

ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ನಾಲ್ವರ ದುರ್ಮರಣ; ಓರ್ವನನ್ನು ರಕ್ಷಿಸಲು ಹೋಗಿ ಮಗ, ಅಳಿಯ ಮತ್ತು ಬೋಟ್ ಆಪರೇಟರ್ ಸಾವು
ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ನಾಲ್ವರ ದುರ್ಮರಣ
Follow us on

ಬಾಗಲಕೋಟೆ: ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಬಳಿ ಓರ್ವನನ್ನು ರಕ್ಷಿಸಲು ಹೋಗಿ ನಾಲ್ವರು ಮೃತಪಟ್ಟಿದ್ದಾರೆ. ಶಿವಪ್ಪ ಅಮಲೂರು, ಯಮನಪ್ಪ ಅಮಲೂರು(45), ಶರಣಗೌಡ ಬಿರಾದರ್(30) ಮತ್ತು ಪರಶು ಎಂಬುವವರು ಮೃತ ದುರ್ದೈವಿಗಳು.

ಮಾನಸಿಕ ಅಸ್ವಸ್ಥ ಶಿವಪ್ಪ ಅಮಲೂರು ಎಂಬುವವರು ನದಿಯಲ್ಲಿ ಮುಳುಗಿದ್ದಾರೆ. ಈ ವೇಳೆ ಶಿವಪ್ಪನ ಮೃತದೇಹ ಹುಡುಕಲು ಶಿವಪ್ಪ ಅಮಲೂರು ಪುತ್ರ ಯಮನಪ್ಪ ಅಮಲೂರು ಮತ್ತು ಶಿವಪ್ಪ ಅಮಲೂರು ಅಳಿಯ ಶರಣಗೌಡ ಬಿರಾದರ್ ಸೇರಿ 11 ಜನ ಬೋಟ್​ನಲ್ಲಿ ತೆರಳಿದ್ದಾರೆ. ಆಗ ವಿದ್ಯುತ್ ಸ್ಪರ್ಶಿಸಿ ಶಿವಪ್ಪನ ಪುತ್ರ, ಅಳಿಯ ಮತ್ತು ಇವರ ಜೊತೆಗೆ ಇವರನ್ನು ಕರೆದೊಯ್ದಿದ್ದ ಬೋಟ್ ಆಪರೇಟರ್ ಪರಶು ಸೇರಿ ಮೂವರು ಮೃತಪಟ್ಟಿದ್ದಾರೆ. ಅದೃಷ್ಟವಷಾತ್​ ಬೋಟ್​ನಲ್ಲಿದ್ದ ಇತರೆ 8 ಜನರು ಪಾರಾಗಿದ್ದಾರೆ. ಮೃತರು ವಿಜಯಪುರ ಜಿಲ್ಲೆ ತಾಳಿಕೋಟಿ ತಾಲ್ಲೂಕಿನ ಹರನಾಳ ಮೂಲದವರು ಎಂದು ತಿಳಿದು ಬಂದಿದೆ.

ಶಿವಪ್ಪ ಅಮಲೂರರ ಶವ ಹುಡುಕೋದಕ್ಕೆ ಬೋಟ್ ಮೂಲಕ ಹೋದ ಮಗ, ಅಳಿಯ, ಬೋಟ್ ಆಪರೇಟರ್ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಹುನಗುಂದ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಧೈರ್ಯ ಇದ್ದರೆ ನನ್ನ ಮುಂದೆ ಬನ್ನಿ, ಚರ್ಚಿಸೋಣ; ಉಗ್ರರಿಗೆ ಸವಾಲು ಹಾಕಿದ ಶ್ರದ್ಧಾ ಬಿಂದ್ರೂ

Published On - 4:21 pm, Thu, 7 October 21