ಬಾಗಲಕೋಟೆ: ಜಿಲ್ಲೆಯ ಬೀಳಗಿ(Bilagi) ತಾಲ್ಲೂಕಿನ ಬಿಸ್ನಾಳ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳ ನೀಡಿ ಪರಸಪ್ಪ ಬೀಳಗಿ ಎಂಬಾತ ಪತ್ನಿ ರೇಖಾ ಬೀಳಗಿ(24)ಅವರನ್ನ ಕೊಡಲಿಯಿದ ಕೊಚ್ಚಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರೆಲ್ಲರೂ ಸೇರಿ ಅಪರೂಪದ ನಿರ್ಣಯವನ್ನ ಕೈಗೊಂಡಿದ್ದಾರೆ. ತಪ್ಪು ಮಾಡಿದವರು ಯಾರೇ ಆದರೂ, ಆತನಿಗೆ ತಕ್ಕ ಶಿಕ್ಷೆಯಾಗಬೇಕೆಂಬ ನಿಲುವಿನೊಂದಿಗೆ ಒಂದೊಳ್ಳೆ ನಿರ್ಧಾರ ಮಾಡಿದ್ದಾರೆ. ಹೌದು ಕೊಲೆ ಮಾಡಿದ ಪಾಪಿ ಪತಿ ಪರಸಪ್ಪ ಹಾಗೂ ಆತನ ಕುಟುಂಬಸ್ಥರಿಗೆ ಯಾರೂ ಜಾಮೀನಾಗಬಾರದೆಂದು, ಊರಿನ ತುಂಬ ಹಿರಿಯರು ಸೇರಿ ಡಂಗುರ ಹೊಡೆಸಿದ್ದಾರೆ. ಇನ್ನು ಈ ಕೊಲೆ ಕೇಸ್ ಸಂಬಂಧ ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎರಡು ವರ್ಷದ ಹಿಂದೆ ಮದುವೆಯಾಗಿದ್ದ. ಜೊತೆಗೆ ಒಂದು ವರ್ಷದ ಮಗು ಕೂಡ ಇತ್ತು. ಈ ಮಧ್ಯೆ ವರದಕ್ಷಿಣೆ ಕೊಡಲಿಲ್ಲವೆಂದು ಪತ್ನಿಯನ್ನೇ ಕೊಲೆ ಮಾಡಿದ ಆರೋಪಿಗೆ ಯಾರು ಸಹಾಯ ಮಾಡಬಾರದು ಎಂಬ ನಿರ್ಣಯವನ್ನು ಕೈಗೊಂಡ ಗ್ರಾಮಸ್ಥರು, ಯಾರು ಅವರ ಸಹಾಯಕ್ಕೆ ಹೋಗಬಾರದು ಎಂದು ನಿರ್ಧರಿಸಿದ್ದಾರೆ. ಒಂದು ವೇಳೆ ಜಾಮೀನು ನೀಡುವ ಮೂಲಕ ಅವರಿಗೆ ಸಹಾಯ ಮಾಡಿದ್ದು ಕಂಡುಬಂದರೆ. ಅವರನ್ನೇ ಠಾಣೆಗೆ ಒಪ್ಪಿಸುತ್ತೇವೆ ಎಂದು ಡಂಗುರ ಸಾರಿದ್ದಾರೆ.
ಇದನ್ನೂ ಓದಿ:ವರದಕ್ಷಿಣೆ ಕಿರುಕುಳ, ಕೊಲೆಗೆ ಯತ್ನ ಆರೋಪ: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತನ ಮೇಲೆ FIR
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಆನೇಕಲ್ ತಾಲ್ಲೂಕಿನ ಚಂದಾಪುರದ ಹೆನ್ನಾಗರ ಬಳಿಯ A2B ಹೋಟೆಲ್ ಬಳಿ ಕಾರಿನ ಗ್ಲಾಸ್ ಹೊಡೆದು ಹಣ,
ಚಿನ್ನಾಭರಣ, ಲ್ಯಾಪ್ಟಾಪ್ನ್ನು ಕಳ್ಳರು ಎಗರಿಸಿದ ಘಟನೆ ನಿನ್ನೆ(ಜು.4) ಸಂಜೆ ನಡೆದಿದೆ. ಉದ್ಯಮಿ ನವೀನ್ ಎಂಬವರಿಗೆ ಸೇರಿದ ಕಾರು ಇದಾಗಿದ್ದು, 2 ರೂ ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ. ರಾತ್ರಿ 7 ಗಂಟೆಯ ಸಮಯದಲ್ಲಿ ಊಟ ಮಾಡಲು ಹೋಟೆಲ್ಗೆ ತೆರಳಿದ್ದಾಗ, ಕಳ್ಳರು ಕ್ಷಣಮಾತ್ರದಲ್ಲಿ ಕೈಚಳಕ ತೋರಿಸಿ ಎಸ್ಕೇಪ್ ಆಗಿದ್ದಾರೆ. ಊಟ ಮುಗಿಸಿ ಕಾರ್ ಪಾರ್ಕಿಂಗ್ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:57 pm, Wed, 5 July 23