ವರದಕ್ಷಿಣೆ ಕಿರುಕುಳ, ಕೊಲೆಗೆ ಯತ್ನ ಆರೋಪ: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತನ ಮೇಲೆ FIR
ದೀಪ್ತಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದ. ಇದಕ್ಕೆ ದಿನೇಶ್ ಸಹೋದರಿ ರಮ್ಯಾ ಸಾಥ್ ಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ನೀರಿನ ಜತೆ ಪೌಡರ್ ಬೆರೆಸಿ ಕೊಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಸಹ ದೀಪ್ತಿ ಮಾಡಿದ್ದಾರೆ. ಈ ಬಗ್ಗೆ ಆರ್.ಆರ್.ನಗರ ಠಾಣೆಗೆ ಪತ್ನಿ ಕೆ.ಪಿ.ದೀಪ್ತಿ ದೂರು ನೀಡಿದ್ದು ಪತಿ ದಿನೇಶ್‌ಕುಮಾರ್ ಮತ್ತು ಆತನ ಸಹೋದರಿ ರಮ್ಯಾ ವಿರುದ್ಧ FIR ದಾಖಲಾಗಿದೆ.
ಬೆಂಗಳೂರು: ವರದಕ್ಷಿಣೆ ಕಿರುಕುಳ ಮತ್ತು ಪತ್ನಿ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆಎಎಸ್ ಅಧಿಕಾರಿ ಜಿ.ಟಿ.ದಿನೇಶ್‌ಕುಮಾರ್ ವಿರುದ್ಧ FIR ದಾಖಲಾಗಿದೆ.
ದಿನೇಶ್ ಪತ್ನಿ ಕೆ.ಪಿ.ದೀಪ್ತಿ ದೂರಿನ ಮೇರೆಗೆ ಬೆಂಗಳೂರಿನ ಆರ್.ಆರ್.ನಗರ ಠಾಣೆಯಲ್ಲಿ ದಿನೇಶ್‌ಕುಮಾರ್ ಮತ್ತು ಆತನ ಸಹೋದರಿ ರಮ್ಯಾ ವಿರುದ್ಧ FIR ದಾಖಲಾಗಿದೆ. 2015 ರಲ್ಲಿ ದಿನೇಶ್ ಕುಮಾರ್ – ಕೆ.ಪಿ.ದೀಪ್ತಿ ವಿವಾಹವಾಗಿತ್ತು. ಈ ವೇಳೆ 1 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ವರದಕ್ಷಿಣೆ ನೀಡಿದ್ದರು. ಮಕ್ಕಳಾದ ಬಳಿಕ ಮಕ್ಕಳಿಗೆ ಏನನ್ನೂ ಕೊಡಿಸದೆ ದಿನೇಶ್ ನಿರ್ಲಕ್ಷ್ಯವಹಿಸಿದ್ದ.
ಇದನ್ನು ಪ್ರಶ್ನಿಸಿದ್ದಕ್ಕೆ ದೀಪ್ತಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದ. ಇದಕ್ಕೆ ದಿನೇಶ್ ಸಹೋದರಿ ರಮ್ಯಾ ಸಾಥ್ ಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ನೀರಿನ ಜತೆ ಪೌಡರ್ ಬೆರೆಸಿ ಕೊಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಸಹ ದೀಪ್ತಿ ಮಾಡಿದ್ದಾರೆ. ಈ ಬಗ್ಗೆ ಆರ್.ಆರ್.ನಗರ ಠಾಣೆಗೆ ಪತ್ನಿ ಕೆ.ಪಿ.ದೀಪ್ತಿ ದೂರು ನೀಡಿದ್ದು ಪತಿ ದಿನೇಶ್‌ಕುಮಾರ್ ಮತ್ತು ಆತನ ಸಹೋದರಿ ರಮ್ಯಾ ವಿರುದ್ಧ FIR ದಾಖಲಾಗಿದೆ.
ಅಪ್ರಾಪ್ತ ಹೆಣ್ಣುಮಕ್ಕಳಿಗೆ ಕಿರುಕುಳ: SDPI ಸಮಿತಿಯ ಅಧ್ಯಕ್ಷ ಸಿದ್ದಿಕ್ ಉಳ್ಳಾಲ ಬಂಧನ
Published On - 11:06 am, Sun, 24 January 21