ಗಣರಾಜ್ಯೋತ್ಸವದಂದು ರಾಜ್ಯದಲ್ಲಿ ಮೊಳಗಲಿದೆ ರೈತ ಕಹಳೆ.. ರೈತ ಪರೇಡ್ನಲ್ಲಿ 10 ಸಾವಿರ ವಾಹನ ಭಾಗಿ
ಜನವರಿ 26ರಂದು ರಾಜ್ಯದಲ್ಲೂ ರೈತರಿಂದ ಪರೇಡ್ ಇರಲಿದೆ. ಗಣರಾಜ್ಯೋತ್ಸವದ ಧ್ವಜಾರೋಹಣ ಬಳಿಕ ರೈತರಿಂದ ಪರೇಡ್ ಮಾಡಲಾಗುತ್ತಿದ್ದು, ನೆಲಮಂಗಲದ ನೈಸ್ ಜಂಕ್ಷನ್ನಿಂದ ಫ್ರೀಡಂಪಾರ್ಕ್ವರೆಗೂ ಪರೇಡ್ ನಡೆಸಲಾಗುತ್ತೆ.
ಬೆಂಗಳೂರು: ಜನವರಿ 26ರಂದು ರಾಜ್ಯದಲ್ಲೂ ರೈತರಿಂದ ಪರೇಡ್ ಇರಲಿದೆ. ಗಣರಾಜ್ಯೋತ್ಸವದ ಧ್ವಜಾರೋಹಣ ಬಳಿಕ ರೈತರಿಂದ ಪರೇಡ್ ಮಾಡಲಾಗುತ್ತಿದ್ದು, ನೆಲಮಂಗಲದ ನೈಸ್ ಜಂಕ್ಷನ್ನಿಂದ ಫ್ರೀಡಂಪಾರ್ಕ್ವರೆಗೂ ಪರೇಡ್ ನಡೆಸಲಾಗುತ್ತೆ. ಇದರಲ್ಲಿ ಟ್ರ್ಯಾಕ್ಟರ್ ಸೇರಿ 10 ಸಾವಿರ ವಾಹನಗಳು ಭಾಗಿಯಾಗಲಿವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 57ದಿನಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದು ಒಂದೂವರೆ ವರ್ಷ ಕಾಯ್ದೆ ಜಾರಿ ಮಾಡಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆದ್ರೆ ಇದನ್ನು ಒಪ್ಪದ ರೈತ ಸಂಘಟನೆಗಳು ಜನವರಿ 26 ಗಣರಾಜ್ಯೋತ್ಸವದ ದಿನದಂದು ಪರೇಡ್ ನಡೆಸಲು ಮುಂದಾಗಿದೆ. ಈ ಬಗ್ಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ “ಕೃಷಿ ತಿದ್ದುಪಡಿ ಕಾಯ್ದೆಯನ್ನ ಹಿಂಪಡೆಯಲು ದೆಹಲಿಯಲ್ಲಿ 57 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಹತ್ತು ಸುತ್ತಿನ ಮಾತುಕತೆ ನಡೆಸಿದ್ದಾರೆ. ನಮ್ಮ ಬೇಡಿಕೆಯನ್ನ ಬಿಟ್ಟು ಬೇರೆಯಲ್ಲ ಮಾತನಾಡುತ್ತಿದ್ದಾರೆ . ಒಂದೂವರೆ ವರ್ಷ ಕಾಯ್ದೆ ಜಾರಿ ಮಾಡಲ್ಲ ಅಂತ ಹೇಳಿದ್ದಾರೆ. ಆದ್ರೆ ಆನಂತರ ಜಾರಿ ಮಾಡುತ್ತಾರಾ.
ಸಂಪೂರ್ಣ ಖಾಸಗೀಕರಣ ಮಾಡುವ ನಿಟ್ಟಿನಲ್ಲಿ ಕಾಯ್ದೆ ಜಾರಿಗೆ ತಂದಿದ್ದಾರೆ. ಗೂಡ್ಸ್ ವಾಹನಗಳ ಮೇಲೂ ಅದಾನಿ ಹೆಸರಿದೆ. ಜನರು ಮಾತನಾಡಬೇಕು. ಕೃಷಿ ವಲಯದಲ್ಲಿ ಶೇ 85 ರಷ್ಟು ಜನರು ಇದ್ದಾರೆ. ಕೃಷಿ ಕ್ಷೇತ್ರವನ್ನ ಖಾಸಗಿ ವಲಯ ಮಾಡಲು ಹೊರಟಿದ್ದಾರೆ. ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆಯನ್ನು ಕೈಬಿಡಬೇಕು. ಇಲ್ಲವಾದ್ರೆ ಜನವರಿ 26 ರಂದು ರೈತರಿಂದ ಪರೇಡ್ ಇರುತ್ತದೆ. ಸರ್ಕಾರ ತಡೆದರೇ ಪೇಚೆಗೆ ಸಿಲುಕಿಕೊಳ್ಳಲಿದೆ. ಹಲವು ಸಂಘಟನೆಗಳು ಈ ಪರೇಡ್ನಲ್ಲಿ ಭಾಗವಹಿಸಲಿವೆ. ಈ ಬಗ್ಗೆ ಸರ್ಕಾರಕ್ಕೆ ಅನುಮತಿ ಕೇಳಿದ್ದೇವೆ. ಆದ್ರೆ ರೈತರ ಪರೇಡ್ಗೆ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ ಮಾತುಕತೆ ನಡೆಸುತ್ತಿದ್ದಾರೆ” ಎಂದು ಹೇಳಿದ್ರು.