ಗಣಿಗಾರಿಕೆ ಅಬ್ಬರ: ಗಣಿ ಇಲಾಖೆ ಹಾಗೂ ಜಿಲ್ಲಾಡಳಿತ ಡೋಂಟ್ ಕೇರ್

10 ಅಡಿ ಬೋರ್​ವೆಲ್ ಡ್ರಿಲ್ ಮಾಡಿ ಸ್ಫೋಟ ಮಾಡಿರುವ ಆರೋಪ ಕೇಳಿಬಂದಿದೆ. ನಿಯಮ ಮೀರಿ ಗಣಿಗಾರಿಕೆ ನಡಿಯುತ್ತಿದ್ದರೂ ಗಣಿ ಇಲಾಖೆ ಹಾಗೂ ಜಿಲ್ಲಾಡಳಿತ ಯಾವುದೇ ರೀತಿಯ ತಲೆ ಕೆಡಿಸಿಕೊಳ್ಳುತಿಲ್ಲ.

  • TV9 Web Team
  • Published On - 10:54 AM, 24 Jan 2021
ಗಣಿಗಾರಿಕೆ ಅಬ್ಬರ: ಗಣಿ ಇಲಾಖೆ ಹಾಗೂ ಜಿಲ್ಲಾಡಳಿತ ಡೋಂಟ್ ಕೇರ್
ಗಣಿಗಾರಿಕೆ

ಗದಗ: ಬೋರ್​ವೆಲ್ ಡ್ರಿಲ್ ಮಾಡಿ ಬ್ಲಾಸ್ಟಿಂಗ್ ಮಾಡೋದು ಕಾನೂನು ಬಾಹಿರವಾಗಿದ್ದರೂ ಗದಗ ತಾಲೂಕು ಹಾಗೂ ಶಿರಹಟ್ಟಿ ತಾಲೂಕಿನ ಕಲ್ಲಿನ ಕ್ವಾರಿ ಮಾಲೀಕರು ಸ್ಫೊಟಗೊಳಿಸಿ ಗಣಿಗಾರಿಕೆ ಮಾಡಿರುವ ದಂಧೆ ಬಯಲಾಗಿದೆ.

ತಾಲೂಕಿನ ಶೀತಾಲಹರಿ ಸುತ್ತಲಿನ ಕಲ್ಲು ಕ್ವಾರಿ ಹಾಗೂ ಶಿರಹಟ್ಟಿ ತಾಲೂಕಿನ ಮಾಗಡಿ, ಪರಸಾಪೂರ ಗ್ರಾಮದ ಸುತ್ತಲೂ ಭಾರಿ ಬ್ಲಾಸ್ಟಿಂಗ್ ಆಗಿರುವ ಮಾಹಿತಿ ತಿಳಿದುಬಂದಿದೆ.  10 ಅಡಿ ಬೋರ್​ವೆಲ್ ಡ್ರಿಲ್ ಮಾಡಿ ಸ್ಫೋಟ ಮಾಡಿರುವ ಆರೋಪ ಕೇಳಿಬಂದಿದ್ದು, ಕಾರ್ಮಿಕರು ಈ ಕುರಿತು ಬಾಯ್ಬಿಟ್ಟಿದ್ದಾರೆ. ಹೆಚ್ಚಿನ ಪ್ರಮಾಣದ ಸ್ಫೋಟಕ ಎಲ್ಲಿಂದ ತರುತ್ತಾರೆ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಸದ್ಯ ಕಾಡುತ್ತಿದೆ. ಅಲ್ಲದೇ ಟಿವಿ9 ರಿಯಾಲಿಟಿ ಚೆಕ್ ವೇಳೆ ಕಲ್ಲು ಗಣಿಗಾರಿಕೆ ಮಾಲೀಕರ ದಂಧೆ ಬಯಲಾಗಿದೆ. ನಿಯಮ ಮೀರಿ ಗಣಿಗಾರಿಕೆ ನಡಿಯುತ್ತಿದ್ದರೂ ಗಣಿ ಇಲಾಖೆ ಹಾಗೂ ಜಿಲ್ಲಾಡಳಿತ ಯಾವುದೇ ರೀತಿಯ ತಲೆ ಕೆಡಿಸಿಕೊಳ್ಳುತಿಲ್ಲ.

Shivamogga Blast ಶಿವಮೊಗ್ಗದ ಹುಣಸೋಡಿಯಲ್ಲಿನ ವಿಸ್ಫೋಟಕ್ಕೆ ಇದು ಕಾರಣವಾಗಿರಬಹುದಾ?