ಅನೈತಿಕ ಸಂಬಂಧ; ಪ್ರಿಯಕರನ ಕೊಂದು ಪತ್ನಿ ಮೇಲೆ ಹಲ್ಲೆ, ಗಂಡ ಜೈಲು ಪಾಲು

| Updated By: ಆಯೇಷಾ ಬಾನು

Updated on: Jan 12, 2022 | 11:00 AM

ಚಟ್ನಿಹಾಳ ಗ್ರಾಮದ ರೇಣುಕಾ ಗ್ಯಾನಪ್ಪ ಪೂಜಾರ ಸಂಸಾರದಲ್ಲಿ ಅಲ್ಲಾಸಾಬ್ ನದಾಪ್ ವಿಲನ್ ಆಗಿ ಬಂದಿದ್ದಾನೆ. ಪತಿ ಗ್ಯಾನಪ್ಪ ಇಲ್ಲದಿದ್ದಾಗ ಪ್ರಿಯಕರ ಅಲ್ಲಾಸಾಬ್ನನ್ನು ರೇಣುಕಾ ಮನೆಗೆ ಕರೆಸಿದ್ದಳು. ಇದೇ ವೇಳೆ ಮನೆಗೆ ಗ್ಯಾನಪ್ಪ ಹಿಂತಿರುಗಿದ್ದರು.

ಅನೈತಿಕ ಸಂಬಂಧ; ಪ್ರಿಯಕರನ ಕೊಂದು ಪತ್ನಿ ಮೇಲೆ ಹಲ್ಲೆ, ಗಂಡ ಜೈಲು ಪಾಲು
ಮೃತ ಅಲ್ಲಾಸಾಬ್ ನದಾಪ್ ಮತ್ತು ಆರೋಪಿ ಗ್ಯಾನಪ್ಪ ಪೂಜಾರ
Follow us on

ಬಾಗಲಕೋಟೆ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತ್ನಿ ಪ್ರಿಯಕರನ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಚಟ್ನಿಹಾಳ ಗ್ರಾಮದಲ್ಲಿ ನಡೆದಿದೆ. ಅಲ್ಲಾಸಾಬ್ ನದಾಪ್(28) ಕೊಲೆಯಾದ ವ್ಯಕ್ತಿ.

ಚಟ್ನಿಹಾಳ ಗ್ರಾಮದ ರೇಣುಕಾ ಗ್ಯಾನಪ್ಪ ಪೂಜಾರ ಸಂಸಾರದಲ್ಲಿ ಅಲ್ಲಾಸಾಬ್ ನದಾಪ್ ವಿಲನ್ ಆಗಿ ಬಂದಿದ್ದಾನೆ. ಪತಿ ಗ್ಯಾನಪ್ಪ ಇಲ್ಲದಿದ್ದಾಗ ಪ್ರಿಯಕರ ಅಲ್ಲಾಸಾಬ್ನನ್ನು ರೇಣುಕಾ ಮನೆಗೆ ಕರೆಸಿದ್ದಳು. ಇದೇ ವೇಳೆ ಮನೆಗೆ ಗ್ಯಾನಪ್ಪ ಹಿಂತಿರುಗಿದ್ದರು. ಆಗ ರೇಣುಕಾ ಮತ್ತು ಅಲ್ಲಾಸಾಬ್ ಜೊತೆ ಇರುವುದನ್ನು ಕಂಡು ಗ್ಯಾನಪ್ಪ ದೊಣ್ಣೆಯಿಂದ ಹೊಡೆದು ಹತ್ಯೆಗೈದಿದ್ದಾರೆ. ಹಾಗೂ ಪರಿಸ್ಥಿತಿ ನಿಯಂತ್ರಿಸಲು ಮುಂದೆ ಬಂದ ಪತ್ನಿ ರೇಣುಕಾ ಮೇಲೂ ಹಲ್ಲೆ ನಡೆಸಿದ್ದಾರೆ.

ಸದ್ಯ ಗಾಯಾಳು ರೇಣುಕಾಗೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣ ಸಂಬಂಧ ಇಳಕಲ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತಿ ಗ್ಯಾನಪ್ಪ, ಗ್ಯಾನಪ್ಪ ತಂದೆ ಚಂದ್ರಪ್ಪ, ಸಹೋದರ ಹನುಮಂತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆ ಮಾಡಿದ್ದ ಆರೋಪಿ ಅರೆಸ್ಟ್
ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಆಟೋ ಚಾಲಕನ ಹತ್ಯೆ ಕೇಸ್​ಗೆ ಸಂಬಂಧಿಸಿ ಬೆಳಗಾವಿಯ ಮಾಳಮಾರುತಿ ಪೊಲೀಸರಿಂದ ಮೂವರ ಬಂಧನವಾಗಿದೆ. ಉಜ್ವಲ ನಗರದ ಇಬ್ರಾಹಿಂ ಸಯ್ಯದ್, ಮಹ್ಮದ್ ಮನ್ನೂರಕರ, ಗಾಂಧಿನಗರದ ಉಲ್ಮಾನ್ ಯರಗಟ್ಟಿ ಬಂಧಿತ ಆರೋಪಿಗಳು. ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಆಟೋ ಚಾಲಕನ ಬರ್ಬರ ಹತ್ಯೆ ಮಾಡಲಾಗಿತ್ತು. ಪಾರ್ಟಿಗೆಂದು ಕರೆದು ಸ್ನೇಹಿತನನ್ನೇ ದುಷ್ಕರ್ಮಿಗಳು ಕೊಲೆಗೈದಿದ್ದರು. ಉಜ್ವಲ ನಗರದ ನೋಹಾನ್ ಧಾರವಾಡಕರ್ (23) ಕೊಲೆಯಾಗಿದ್ದ ಯುವಕ. ಪಾಳು ಬಿದ್ದ ಮನೆಯ ಶೌಚಾಲಯದಲ್ಲಿ ಆಟೋ ಚಾಲಕನ ಶವ ಪತ್ತೆಯಾಗಿತ್ತು.

ಇದನ್ನೂ ಓದಿ: ಪ್ರಧಾನಿ ಭದ್ರತೆ ಲೋಪ ತನಿಖೆಯ ನೇತೃತ್ವ ವಹಿಸಲಿರುವ ಸುಪ್ರೀಂಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಯಾರು? -ಇಂದು ಹೆಸರು ಪ್ರಕಟಿಸಲಿರುವ ಸಿಜೆಐ

ಕೊವಿಡ್​: ಲತಾ ಮಂಗೇಶ್ಕರ್​ ನೋಡಲು ಮನೆಯವರಿಗೂ ಅನುಮತಿ ಇಲ್ಲ; ಖ್ಯಾತ ಗಾಯಕಿಯ ಹೆಲ್ತ್​ ಅಪ್​ಡೇಟ್​​

Published On - 9:15 am, Wed, 12 January 22