ಬಾಗಲಕೋಟೆ: ನಾನು ಸುಳ್ಳು ಹೇಳಿ ಬದುಕಿದ ಮಗಾ ಅಲ್ಲಾ. ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಏನು ಹೇಳುತ್ತಾರೆ ಅದನ್ನು ಚಾಚು ತಪ್ಪದೆ ಪಾಲಿಸೋರು ಯಾರಾದರೂ ಇದ್ದರೆ, ಅದು ವಿಜಯಾನಂದ ಕಾಶಪ್ಪನವರ್ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ (Vijayananda Kashappanavar) ಹೇಳಿದರು. ಜಿಲ್ಲೆಯ ಹುನಗುಂದ ತಾಲೂಕಿನ ಬೆಳಗಲ್ ಗ್ರಾಮದಲ್ಲಿ ಎಸ್ಆರ್ಕೆ ಸಕ್ಕರೆ ಕಾರ್ಖಾನೆ ಭೂಮಿಪೂಜೆ ಬಳಿಕ ಅವರು ಮಾತನಾಡಿ, ಇದು ನಮ್ಮ ಕ್ಷೇತ್ರದ ಜನರಿಗೆ ಉದ್ಯೋಗ ಕೊಡುವ ಉದ್ದೇಶದಿಂದ ಕಾರ್ಖಾನೆ ಆರಂಭ ಮಾಡುತ್ತಿದ್ದೇವೆ. ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಕೊಟ್ಟಿದ್ದು ಮಾಜಿ ಸಿಎಂ ಸಿದ್ದರಾಮಯ್ಯ. ಬಿಜೆಪಿಯ ಒಬ್ಬ ನಾಯಕರಾದರೂ ಬೆಂಬಲ ಬೆಲೆ ಕೊಟ್ಟಿದ್ರಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅನೇಕ ಭಾಗ್ಯಗಳನ್ನು ನೀಡಿದ್ದಾರೆ. ಎಲ್ಲ ಬೆಳೆಗೆ ಬೆಂಬಲ ಬೆಲೆ ಕೊಟ್ಟಿದ್ದು ಯಾರಪ್ಪಾ ಸಿದ್ದರಾಮಯ್ಯ ಒಬ್ಬರೆ. ಒಬ್ಬ ಬಿಜೆಪಿಯವರು ಕೊಟ್ರಾ? ಇಂದು ಯಾವುದೇ ಬೆಳೆಗೆ ಬೆಂಬಲ ಬೆಲೆ ಇಲ್ಲ. ಬೆಂಬಲ ಬೆಲೆ ಕೊಟ್ಟ ಪುಣ್ಯಾತ್ಮ ಸಿದ್ದರಾಮಯ್ಯ ಎಂದು ಸಿದ್ದರಾಮಯ್ಯ ಪರ ಕಾಶಪ್ಪನವರ್ ಬ್ಯಾಟ್ ಬೀಸಿದರು.
ಇದನ್ನೂ ಓದಿ: ನೂರಕ್ಕೆ ನೂರರಷ್ಟು ಕಾಶಪ್ಪನವರ್ಗೆ ಟಿಕೆಟ್ ಕೊಡುತ್ತೇವೆ, ಈ ಸಾರಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ: ಸಿದ್ದರಾಮಯ್ಯ
ಬಡವರ ಭಾಗ್ಯವಿದಾತ ಸಿದ್ದರಾಮಯ್ಯ
ಬಸ್ ಯಾತ್ರೆ ರದ್ದತಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಕಾರಣ ಎಂಬ ಮಾತು ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಇದೆಲ್ಲ ಸುಳ್ಳು ಬಿಜೆಪಿಯವರು ಜನಸ್ಪಂದನ ಮಾಡಿದರು. ಆದರೆ ಜನರಿಗೆ ಒಂದು ಮನೆ ಕಟ್ಟಿ ಕೊಡೋಕೆ ಆಗಲಿಲ್ಲ. ಬಡವರ ಭಾಗ್ಯವಿದಾತ ಸಿದ್ದರಾಮಯ್ಯ. ಡಿಕೆ ಶಿವಕುಮಾರ ಹಾಗೂ ಸಿದ್ದರಾಮಯ್ಯ ಒಂದೆ ಆಗಿದ್ದಾರೆ. ಇಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಾರೆ. ಸಿದ್ದರಾಮಯ್ಯ ನಾನೆ ಕಾಂಗ್ರೆಸ್ ಆಗ್ರಗಣ್ಯ ನಾಯಕ ಅಂತ ಬಿಂಬಿಸಿಕೊಳ್ಳಲು ಹೊರಟಿಲ್ಲ. ಇದೆಲ್ಲಾ ಊಹಾಪೋಹ ಇಬ್ಬರೂ ಒಂದೇ ಇದಾರೆ ಎಂದು ಹೇಳಿದರು.
ಪಂಚಮಸಾಲಿ ಮೀಸಲಾತಿ ಡಿ. 19 ರೊಳಗೆ ನಿರ್ಧಾರ
ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ನಮಗೆ ಸಿಎಂ ಬೊಮ್ಮಾಯಿ ಭರವಸೆ ಕೊಟ್ಟಿದ್ದಾರೆ. ಡಿಸೆಂಬರ್ 19 ರೊಳಗೆ ನಿರ್ಧಾರ. ಕೈಗೊಳ್ಳೋದಾಗಿ ಹೇಳಿದಾರೆ. ಮೀಸಲಾತಿ ಕೊಡುತ್ತಾರೆ ಎಂಬ ಭರವಸೆ ಇದೆ. ಅವರು ನೀಡಿದ ಭರವಸೆಯಂತೆ ಮೀಸಲಾತಿ ನೀಡದಿದ್ದರೆ ಡಿಸೆಂಬರ್ 22 ರಂದು 25 ಲಕ್ಷ ಜನ ಸೇರಿ ಬೆಳಗಾವಿ ಸುವರ್ಣಸೌಧದ ಮುಂದೆ ಪ್ರತಿಭಟನೆ ಮಾಡುತ್ತೇವೆ.
ಇದನ್ನೂ ಓದಿ: ಜನವರಿ 9ರಿಂದ ಜಿಲ್ಲಾ ಕೇಂದ್ರಗಳಲ್ಲಿ ಬಸ್ ಯಾತ್ರೆ ಮಾಡುತ್ತೇವೆ: ಸಿದ್ದರಾಮಯ್ಯ
ಮುರುಗೇಶ್ ನಿರಾಣಿ ಮತ್ತು ವಚನಾನಂದ ಶ್ರೀ ವಿರುದ್ದ ಕಿಡಿ
ಇವತ್ತು ಇವರೆಲ್ಲ (ಮುರುಗೇಶ್ ನಿರಾಣಿ,ವಚನಾನಂದ ಶ್ರಿ ) ಎಚ್ಚೆತ್ತುಕೊಳ್ಳುತ್ತಿದ್ದಾರೆ. ಮೀಸಲಾತಿ ಕ್ರೆಡಿಟ್ ಎಲ್ಲಿ ಕಾಶಪ್ಪನವರ್, ಬಸವ ಜಯಮೃತ್ಯುಂಜಯ ಸ್ವಾಮೀಜಿಗಳಿಗೆ ಹೋಗುತ್ತೋ ಎಂಬ ಹೊಟ್ಟೆ ಕಿಚ್ಚಿನಲ್ಲಿದ್ದಾರೆ. ಮೀಸಲಾತಿ ಹೋರಾಟದಲ್ಲಿ ಇವರಿಬ್ಬರ ಪಾತ್ರವೇನೂ ಇಲ್ಲ ಎಂದು ಮುರುಗೇಶ್ ನಿರಾಣಿ ಮತ್ತು ವಚನಾನಂದ ಶ್ರೀ ವಿರುದ್ಧ ವಿಜಯಾನಂದ ಕಾಶಪ್ಪನವರ್ ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:29 pm, Wed, 14 December 22