ನೂರಕ್ಕೆ ನೂರರಷ್ಟು ಕಾಶಪ್ಪನವರ್​ಗೆ ಟಿಕೆಟ್ ಕೊಡುತ್ತೇವೆ, ಈ ಸಾರಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ: ಸಿದ್ದರಾಮಯ್ಯ

ಈ ಸಾರಿ ನಾವು ಅಧಿಕಾರಕ್ಕೆ ನಾವು ಬಂದೇ ಬರುತ್ತೇವೆ. ನೂರಕ್ಕೆ ನೂರರಷ್ಟು ವಿಜಯಾನಂದ ಕಾಶಪ್ಪನವರ್​ಗೆ ಕಾಂಗ್ರೆಸ್​ ಟಿಕೆಟ್​ ಕೊಡುತ್ತೇವೆ ಎಂದು ಜಿಲ್ಲೆಯ ಹುನಗುಂದ ತಾಲೂಕಿನ ಬೆಳಗಲ್​ ಗ್ರಾಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದರು.

ನೂರಕ್ಕೆ ನೂರರಷ್ಟು ಕಾಶಪ್ಪನವರ್​ಗೆ ಟಿಕೆಟ್ ಕೊಡುತ್ತೇವೆ, ಈ ಸಾರಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ: ಸಿದ್ದರಾಮಯ್ಯ
ಕಾಶಪ್ಪನವರ ಅವರ ಒಡೆತನದ ಎಸ್.ಆರ್​.ಕೆ ಸಕ್ಕರೆ ಕಾರ್ಖಾನೆಗೆ ಭೂಮಿಪೂಜೆ ನೆರವೇರಿಸಿ ಸಿದ್ದರಾಮಯ್ಯ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 14, 2022 | 5:03 PM

ಬಾಗಲಕೋಟೆ: ಈ ಸಾರಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ನೂರಕ್ಕೆ ನೂರರಷ್ಟು ವಿಜಯಾನಂದ ಕಾಶಪ್ಪನವರ್ (Kashappanavar) ​ಗೆ ಕಾಂಗ್ರೆಸ್​ ಟಿಕೆಟ್​ ಕೊಡುತ್ತೇವೆ ಎಂದು ಜಿಲ್ಲೆಯ ಹುನಗುಂದ ತಾಲೂಕಿನ ಬೆಳಗಲ್​ ಗ್ರಾಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದರು. ವಿಜಯಾನಂದ ಕಾಶಪ್ಪನವರ್​ಗೆ ನೀವು ಆಶೀರ್ವಾದ ಮಾಡುತ್ತೀರಲ್ಲಾ ಎಂದು ಜನರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು. ಹುನಗುಂದ ಭಾಗದಲ್ಲಿ ರೈತಾಪಿ ಜನ ಇರುವಂತವರು. ಹಿಂದುಳಿದ ವರ್ಗದವರು ಇರುವಂತವರು. ನಿರುದ್ಯೋಗ ಇರುವಂತವರು. ಈ ಭಾಗದಲ್ಲಿ ಎಸ್​ಆರ್ ಕಾಶಪ್ಪನವರ ಕಾಲದಲ್ಲೇ ಜಮೀನು ಖರೀದಿಸಿದ್ದೇವೆ. ಇದಕ್ಕೆ ಅನುಮತಿ ಕೊಡಬೇಕೆಂದು ಕೇಳಿಕೊಂಡರು. ಒಂದೇ ಸಾರಿಗೆ ನಾವು ಕಾರ್ಖಾನೆ ಆರಂಭಿಸಲು ಮಂಜೂರಾತಿ ಕೊಟ್ಟಿದ್ದೇವೆ ಎಂದರು.

ಕಾಶಪ್ಪನವರ ಈ ಭಾಗದಲ್ಲಿ ನೀರಾವರಿ ಕಡಿಮೆ ಇದೆ. ನೀರಾವರಿ ಪ್ರದೇಶ ಆಗಬೇಕು ಅಂತ ನನ್ನ ಬಳಿ ಹೇಳಿದರು. ಆಗ ರಾಮಥಾಳ ಲಿಪ್ಟ್ ಇರಿಗೇಷನ್ 762 ಕೋಟಿ ರೂ. ಅನುದಾನದಲ್ಲಿ ಆ ಯೋಜನೆಗೆ ಮಂಜೂರಾತಿ ಕೊಟ್ಟಿತು. ಸುಮಾರು 60 ಸಾವಿರ ಎಕರೆಗೆ ನೀರು ಸಿಗಬೇಕಾದರೆ ಅದಕ್ಕೆ ಕಾಶಪ್ಪನವರ ಕಾರಣ ಎಂದು ತಿಳಿಸಿದರು.

ಇದನ್ನೂ ಓದಿ: ಜನವರಿ 9ರಿಂದ ಜಿಲ್ಲಾ ಕೇಂದ್ರಗಳಲ್ಲಿ ಬಸ್​ ಯಾತ್ರೆ ಮಾಡುತ್ತೇವೆ: ಸಿದ್ದರಾಮಯ್ಯ

ರೈತರು ಉಳಿದರೆ ಸರ್ಕಾರ, ನಾವೆಲ್ಲಾ ಉಳಿಯುವುದಕ್ಕೆ ಸಾಧ್ಯ

ಸೂಕ್ತ ಬೆಲೆ ನಿಗದಿಗೆ ಒತ್ತಾಯಿಸಿ ಕಬ್ಬು ಬೆಳೆಗಾರರ ಧರಣಿ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಸೂಕ್ತ ಬೆಲೆ ನಿಗದಿ ಮಾಡಿ ಎಂದು ರೈತರು ಹೋರಾಟ ಮಾಡ್ತಿದ್ದಾರೆ. ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದರೆ ಕಬ್ಬು ಬೆಳೆಗಾರರಷ್ಟೇ ಅಲ್ಲ. ಯಾವುದೇ ಬೆಳೆ ಆದರೂ ಎಂಎಸ್​​ಪಿ ಮಾದರಿ ಬೆಲೆ ಕೊಡುತ್ತೇವೆ. ರೈತರು ಉಳಿದರೆ ಸರ್ಕಾರ, ನಾವೆಲ್ಲಾ ಉಳಿಯುವುದಕ್ಕೆ ಸಾಧ್ಯ. ಜನರ ಹಣ ಖರ್ಚು ಮಾಡಲು ಸಿಎಂಗೆ ಯಾಕೆ ಹೊಟ್ಟೆ ಉರಿ ಎಂದು ಪ್ರಶ್ನಿಸಿದರು. ಅಧಿಕಾರಕ್ಕೆ ಬಂದ್ರೆ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ. ಜನರಿಗೆ ನಾವು ಕೊಟ್ಟ ಎಲ್ಲಾ ಭರವಸೆಯನ್ನು ಈಡೇರಿಸುತ್ತೇವೆ ಎಂದು ಹೇಳಿದರು.

ನಾವು ಅಧಿಕಾರಕ್ಕೆ ಬಂದ್ರೆ 7 ಕೆಜಿಯಲ್ಲ, 10 ಕೆಜಿ ಅಕ್ಕಿ ಕೊಡ್ತೇವೆ.

ನಾವು ಅಧಿಕಾರಕ್ಕೆ ಬಂದರೆ 7 ಕೆಜಿಯಲ್ಲ 10 ಕೆಜಿ ಅಕ್ಕಿ ಕೊಡುತ್ತೇವೆ. ಸ್ವಾತಂತ್ರ್ಯ ಬಂದಾಗ ನಮಗೆ ಆಹಾರ ಸ್ವಾವಲಂಬನೆ ಇರಲಿಲ್ಲ. ಇಂದಿರಾ ಗಾಂಧಿ ನೇತೃತ್ವದ​ ಸರ್ಕಾರ ಆಹಾರ ಸ್ವಾವಲಂಬನೆ ಮಾಡಿತು. ನಾನು ಸಿಎಂ ಆದ ಮೇಲೂ ಉಚಿತವಾಗಿ ಹಸಿವು ಮುಕ್ತ ರಾಜ್ಯ ಆಗಲೇಬೇಕು ಅಂತಾ ತಲಾ 7 ಕೆಜಿ ಅಕ್ಕಿ ಕೊಟ್ಟೆ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತೆ ಪುಕ್ಕಟೆ ಪ್ರಚಾರ ಪಡೆದ್ರು ಅಂದರು. ಅಲ್ಲದೇ ಉಚಿತವಾಗಿ ಕೊಡ್ತಿದ್ದ 7 ಕೆಜಿ ಅಕ್ಕಿ 5 ಕೆಜಿಗೆ ಇಳಿಸಿದ್ರು. ಹಾಗಾದ್ರೆ ಗುಜರಾತ್​, ಮಧ್ಯಪ್ರದೇಶದಲ್ಲಿ ಉಚಿತವಾಗಿ ಅಕ್ಕಿ ಕೊಡ್ತಾರಾ? ಸಿಎಂ​ ಬಸವರಾಜ ಬೊಮ್ಮಾಯಿ ಯಾಕೆ ಜನರಿಗೆ ಸುಳ್ಳು ಹೇಳ್ತಿದ್ದೀರಿ? ನಾವು ಅಧಿಕಾರಕ್ಕೆ ಬಂದ್ರೆ 7 ಕೆಜಿಯಲ್ಲ, 10 ಕೆಜಿ ಅಕ್ಕಿ ಕೊಡ್ತೇವೆ. ಬಡವರು, ರೈತರು, ಕಾರ್ಮಿಕರಿಗಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದೆ. ಬೊಮ್ಮಾಯಿ ಅವರೇ ಯಾಕೆ ಇಂದಿರಾ ಕ್ಯಾಂಟೀನ್ ಬಂದ್​​ ಮಾಡಿದ್ರಿ ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ