ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿದ್ದು ಕಾನೂನು ಬದ್ಧವಾಗಿದೆ: ಸಿದ್ದರಾಮಯ್ಯ ಟೀಕೆಗೆ ಜಗದೀಶ್ ಶೆಟ್ಟರ್ ತಿರುಗೇಟು
ಆರ್ಥಿಕವಾಗಿ ಹಿಂದುಳಿದವರಿಗೆ ಪ್ರಧಾನಿ ನರೇಂದ್ರ ಮೋದಿಯವರು 10% ಮೀಸಲಾತಿ ಕೊಟ್ಟಿದ್ದಾರೆ. ಕೆಲವರು ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಬಾಗಲಕೋಟೆ: ಆರ್ಥಿಕವಾಗಿ ಹಿಂದುಳಿದವರಿಗೆ ಪ್ರಧಾನಿ ನರೇಂದ್ರ ಮೋದಿಯವರು 10% ಮೀಸಲಾತಿ ಕೊಟ್ಟಿದ್ದಾರೆ. ಕೆಲವರು ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ವಿಶೇಷ ಪ್ರಕರಣದಲ್ಲಿ ಮೀಸಲಾತಿ ಕೊಟ್ಟಿದ್ದು ಸರಿ ಅಂತ ಹೇಳಿತು. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿದ್ದು ಕಾನೂನು ಬದ್ಧವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಹೇಳಿದರು. ರಾಜ್ಯಸಭೆಯಲ್ಲಿ ಸಚಿವರ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ಮಾಡಿರುವ ವಿಚಾರಕ್ಕೆ ಅವರು ತಿರುಗೇಟು ನೀಡಿದರು. ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಪ್ರಕರಣದಲ್ಲಿ ಕೊಟ್ಟಿದ್ದು ಸರಿ ಅಂತ ಮೆಜಾರಿಟಿ ಪ್ರಕಾರ ಕ್ಲಿಯರ್ ಆಯಿತು. ಹೀಗಾಗಿ ಇವತ್ತು ಎಲ್ಲೋ ಒಂದು ಕಡೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ರು ಅಂದ್ರೆ ನಾವು ಮಾಡಿದ್ದು ಸರಿಯಲ್ಲ ಅಂತಲ್ಲ. ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದ್ದು ಕಾನೂನು ಬದ್ದವಾಗಿದೆ ಎಂದರು.
ಇನ್ನು ಗುಜರಾತ್ ಮಾದರಿ ರಾಜ್ಯದಲ್ಲೂ ಟಿಕೆಟ್ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಪ್ರತಿಯೊಂದು ಹಂತದಲ್ಲೂ ಒಂದೊಂದು ಪ್ರಯೋಗ ಆಗುತ್ತದೆ. ಬೇರೆ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಸರ್ವೆ ಮಾಡುತ್ತಾರೆ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವ ವ್ಯವಸ್ಥೆ ಇದೆ. ಕೇವಲ ಕರ್ನಾಟಕವಷ್ಟೇ ಅಲ್ಲ, ಎಲ್ಲಾ ಕಡೆಯೂ ಅನ್ವಯ ಆಗುತ್ತೆ ಎಂದು ಹೇಳಿದರು.
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮುಂದಿನ ಬಾರಿಯೂ ನಾನೇ ಅಭ್ಯರ್ಥಿ: ಜಗದೀಶ್ ಶೆಟ್ಟರ್
ಹಿರಿಯರಿಗೆ ಟಿಕೆಟ್ ಕೈ ತಪ್ಪುವ ಆತಂಕ ವಿಚಾರವಾಗಿ ಅವರು ಪ್ರತಿಕ್ರಿಸಿದ್ದು, ಹಿರಿಯರು ಅಂದ್ರೆ ಏನು? ಹಿರಿಯರು ಅಂದ್ರೆ ಯಾರು? ಹಿರಿಯರು ಎನ್ನುವ ಡೆಫಿನೇಶನ್ ಏನು ಹೇಳಿ ಎಂದರು. ಅಮಿತ್ ಶಾ ಆಗಲಿ, ಮೋದಿ ಜಿ ಆಗಲಿ ಗುಜರಾತ್ ಮಾಡೇಲ್ ನಲ್ಲಿ ಎಲೆಕ್ಷನ್ ಮಾಡ್ತೀವಿ ಅಂತ ಎಲ್ಲಿಯಾದ್ರು ಹೇಳಿದ್ದಾರಾ ಎಂದರು ಪ್ರಶ್ನಿಸಿದರು. ನಮ್ಮ ನ್ಯಾಷನಲ್ ಪ್ರೆಸಿಡೆಂಟ್ ಹೇಳಬೇಕು ಇಲ್ಲ, ನಮ್ಮ ಉಸ್ತುವಾರಿ ಇದ್ದವರು ಹೇಳಬೇಕು ಎಂದರು.
ಇನ್ನು ಸಚಿವ ಸಂಪುಟ ಬದಲಾವಣೆ ವಿಚಾರವಾಗಿ ಮಾತನಾಡಿದ್ದು, ಅದು ಮುಖ್ಯಮಂತ್ರಿಗಳು ಮತ್ತು ವರಿಷ್ಠರಿಗೆ ಬಿಟ್ಟ ವಿಚಾರ. ಅದರ ಬಗ್ಗೆ ನನಗೇನು ಅನುಭವ ಇಲ್ಲ. ಜನಾರ್ಧನ ರೆಡ್ಡಿ ಪುನಃ ರಾಜಕೀಯ ಅಖಾಡಕ್ಕೆ, ಪುನಃ ಬಿಜೆಪಿಗೆ ಬರ್ತಾರಾ ಎಂಬ ವಿಚಾರ. ಅದು ಅವರಿಗೆ ಬಿಟ್ಟ ವಿಚಾರ. ಅದರ ಚರ್ಚೆಗೆ ನಾನು ಹೋಗೊದಿಲ್ಲ. ಅದರಲ್ಲಿ ನನ್ಯಾಕೆ ತರ್ತಿರಿ, ಹಿಂದೆ ಬಿಜೆಪಿಯಲ್ಲಿದ್ದರು. ಬಿಜೆಪಿ ಅಭಿಮಾನಿ ಇದಾರೆ ಈ ಬಗ್ಗೆ ಬರಿಷ್ಟರು ನಿರ್ಧಾರ ಕೈಗೊಳ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.
ಇದನ್ನು ಓದಿ: ಕೈಗಾರಿಕೆಗಳನ್ನು ಸ್ಥಾಪಿಸುವ ವಿಚಾರದಲ್ಲಿ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ: ಮಾಜಿ ಸಿಎಂ ಜಗದೀಶ್ ಶೆಟ್ಟರ್
ಹಿಂದುತ್ವ ಮತ್ತೊಂದು ಅನ್ನುವ ಪ್ರಶ್ನೆ ಇಲ್ಲ. ಮೋದಿಯವರ ಧಾರ್ಮಿಕ ನಡುವಳಿಕೆ ಎಲ್ಲವೂ ಸಹಿತ ಹಿಂದೂ ಸಮಾಜವನ್ನು ಒಗ್ಗೂಡಿಸಬೇಕು, ಒಗ್ಗಟ್ಟು, ಶಕ್ತಿ ಕೊಡಿಸಬೇಕು. ಈ ಕೆಲಸವನ್ನು ಅವರು ಮಾಡ್ತಿದ್ದಾರೆ. ಯಾವುದೇ ಸ್ಕೀಮ್ ತೆಗೆದುಕೊಂಡರೆ ಅದು ಹಿಂದೂ ಸಮಾಜಕ್ಕೆ ಮಾತ್ರ ಅನ್ವಯ ಆಗೋದಿಲ್ಲ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಇದೆ. ಯಾವುದೇ ಡಿಸಿಜನ್ ತೆಗೆದುಕೊಂಡರೆ, ಅದರಲ್ಲಿ ಹಿಂದೂ ಮುಸ್ಲಿಂ, ಕ್ರಿಶ್ಚಿಯನ್ ಅಂತ ಡಿಫ್ರೆನ್ಸ್ ಇಲ್ಲ. ಎಲ್ಲರೂ ಫಲಾನುಭವಿಗಳಿದ್ದಾರೆ. ಧಾರ್ಮಿಕ ಕೇಂದ್ರಗಳನ್ನ ಭಕ್ತರು ಆಕರ್ಷಣೆಯ ಸ್ಥಳವನ್ನಾಗಿ ಮಾಡಿದ್ದಾರೆ. ಇದನ್ನ ಹಿಂದುತ್ವ ಹಿಂದುತ್ವ ಅಂದ್ರೆ ನಾನೇನು ಮಾಡುವುದಕ್ಕೆ ಆಗಲ್ಲ. ಅಭಿವೃದ್ಧಿ ನೋಡೋದಾದ್ರೆ, ಒಂದೇ ಮಾತರಂ ರೈಲ್ವೆ ಎಲ್ಲಾ ಕಡೆ ಸ್ಟಾರ್ಟ್ ಆಗಿದೆ ಎಂದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:26 pm, Sun, 11 December 22