IT Raid: ಚುನಾವಣೆ ಹೊತ್ತಲ್ಲೇ ಇಂದು ಕರ್ನಾಟಕದ ವಿವಿಧ ಕಡೆ ಐಟಿ ದಾಳಿ; ಎಲ್ಲೆಲ್ಲಿ?

|

Updated on: Apr 20, 2023 | 1:01 PM

ಚುನಾವಣಾ ಸಮಯದಲ್ಲಿ ಐಟಿ ಅಧಿಕಾರಿಗಳು ಫುಲ್​ ಆ್ಯಕ್ಟಿವ್​ ಆಗಿದ್ದು, ರಾಜ್ಯದ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಅದರಂತೆ ಇಂದು(ಏ.20) ಮುಂಜಾನೆ ಉಡುಪಿಯ ಮೊಗವೀರ ಸಮುದಾಯದ ಮುಖಂಡನ ನಿವಾಸ, ವಿಜಯಪುರ ಬಾಲಾಜಿ ಸಕ್ಕರೆ ಕಾರ್ಖಾನೆ ನಿರ್ದೇಶಕರ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ.

IT Raid: ಚುನಾವಣೆ ಹೊತ್ತಲ್ಲೇ ಇಂದು ಕರ್ನಾಟಕದ ವಿವಿಧ ಕಡೆ ಐಟಿ ದಾಳಿ; ಎಲ್ಲೆಲ್ಲಿ?
ಉಡುಪಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಐಟಿ ದಾಳಿ
Follow us on

ಉಡುಪಿ: ಚುನಾವಣಾ ಸಮಯದಲ್ಲಿ ಐಟಿ ಅಧಿಕಾರಿಗಳು(IT Officers) ಫುಲ್​ ಆ್ಯಕ್ಟಿವ್​ ಆಗಿದ್ದು, ರಾಜ್ಯದ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಹೌದು ಕಳೆದ ಕೆಲ ದಿನಗಳ ಹಿಂದೆ ಮಂಗಳೂರು, ಮೈಸೂರು ಸೇರಿದಂತೆ ಕೆಲ ಕಡೆ ಕಾಂಗ್ರೆಸ್(Congress) ಮುಖಂಡರುಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿತ್ತು. ನಿನ್ನೆ(ಏ.19) ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಕೆಜಿಎಫ್​ ಬಾಬು(KGF Babu) ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದು, ಬೆಂಗಳೂರು ಸೇರಿ ರಾಜ್ಯಾದ್ಯಂತ 50 ಕಡೆ ಹಲವಾರು ಕಾಂಗ್ರೆಸ್ ನಾಯಕರ ನಿವಾಸದ ಮೇಲೆ ದಾಳಿ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದರಂತೆ ಇಂದು(ಏ.20) ಮುಂಜಾನೆ ಮೊಗವೀರ ಸಮುದಾಯದ ಮುಖಂಡ ಜಿ.ಶಂಕರ್​ಗೆ ಐಟಿ ಶಾಕ್ ನೀಡಿದ್ದು, ಅಕ್ರಮ ಹಣದ ವಹಿವಾಟು ನಡೆಸಿದ ಆರೋಪದ ಹಿನ್ನೆಲೆ ಉಡುಪಿಯಲ್ಲಿನ ಜಿ.ಶಂಕರ್ ಸಂಸ್ಥೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಜಿ.ಶಂಕರ್​​ ಫ್ಯಾಮಿಲಿ ಟ್ರಸ್ಟ್​​, ಮನೆ, ಕಚೇರಿಯಲ್ಲಿನ ಲೆಕ್ಕ ಪತ್ರ ಮತ್ತು ನಗದು ವಹಿವಾಟಿನ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.

ವಿಜಯಪುರ ಬಾಲಾಜಿ ಸಕ್ಕರೆ ಕಾರ್ಖಾನೆ ನಿರ್ದೇಶಕರ ಮನೆ ಮೇಲೆ ಐಟಿ ದಾಳಿ..

ಬಾಗಲಕೋಟೆ: ಜಿಲ್ಲೆಯಲ್ಲಿ ಏಕ ಕಾಲದಲ್ಲಿ ಎರಡು ಕಡೆ ಐಟಿ ದಾಳಿ ನಡೆಸಿದ್ದು, ಜಿಲ್ಲೆಯ ನವನಗರ ಸೆಕ್ಟರ್ ನಂ 55 ರಲ್ಲಿರುವ ವಿಜಯಪುರ ಬಾಲಾಜಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಹೆಚ್​.ಎಲ್ ಪಾಟೀಲ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇನ್ನು ಈ ಬಾಲಾಜಿ ಶುಗರ್ಸ್ ಕಾರ್ಖಾನೆಯಲ್ಲಿ ಇತ್ತೀಚೆಗೆ ಎಸ್.ಆರ್ ಪಾಟೀಲ್ ಅವರ ಭಾವಚಿತ್ರದ ಗೋಡೆ ಗಡಿಯಾರ, ಟಿ ಶರ್ಟ್ ಪತ್ತೆಯಾಗಿದ್ದವು. ಈ ಹಿನ್ನಲೆ ಇಂದು ಐಟಿ ಅಧಿಕಾರಿಗಳು ದಾಲಿ ನಡೆಸಿದ್ದಾರೆ.

ಇದನ್ನೂ ಓದಿ:IT Raid: ಕೆಜಿಎಫ್​ ಬಾಬು ನಿವಾಸದಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ತು 5000 ರೇಷ್ಮೆ‌ ಸೀರೆ, 2000ಕ್ಕೂ ಹೆಚ್ಚು ಡಿಡಿ

ಬಾಲಾಜಿ ​ ಕಾರ್ಖಾನೆ ಪಾಲುದಾರರ ಮನೆ ಮೇಲೆ ಐಟಿ ದಾಳಿ

ಹೌದು ಒಂದು ಕಡೆ ಬಾಲಾಜಿ ಸಕ್ಕರೆ ಕಾರ್ಖಾನೆ ನಿರ್ದೇಶಕರ ಮನೆ ಮೇಲೆ ಐಟಿ ದಾಳಿ ನಡೆಯುತ್ತಿದ್ದರೆ. ಇತ್ತ ಆನಂದ ನಗರದಲ್ಲಿರುವ ಬಾಲಾಜಿ ಶುಗರ್ಸ್ ಸಕ್ಕರೆ ಕಾರ್ಖಾನೆಯ ಪಾಲುದಾರ ದಿ.ನಂದಕುಮಾರ ಪಾಟೀಲ್ ಮನೆಯಲ್ಲಿಯೂ ಕೂಡ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ