ಚುನಾವಣೆಯಲ್ಲಿ ಮುಸ್ಲಿಮರು ಸೋಲಲ್ಲ, ಅವರನ್ನು ಸೋಲಿಸ್ತಾರೆ: ಮಹೇಶ್ವರಾನಂದ ಸ್ವಾಮೀಜಿ

ಮುಸ್ಲಿಮರು ಚುನಾವಣೆಯಲ್ಲಿ ಸೋಲುವುದಿಲ್ಲ, ಅವರನ್ನು ಸೋಲಿಸಲಾಗುತ್ತದೆ ಎಂದು ಮಹೇಶ್ವರಾನಂದ ಸ್ವಾಮೀಜಿ ಆರೋಪಿಸಿದ್ದಾರೆ. ರಾಜ್ಯದಲ್ಲಿ ಒಂದು ಕೋಟಿ ಮುಸ್ಲಿಂ ಜನಸಂಖ್ಯೆ ಇದ್ದರೂ ಕೇವಲ 10 ಶಾಸಕರಿದ್ದಾರೆ. ಇತರ ಸಮುದಾಯಗಳ ಪ್ರಾತಿನಿಧ್ಯಕ್ಕೆ ಹೋಲಿಸಿದರೆ ಇದು ಬಹಳ ಕಡಿಮೆ. ಮುಂದಿನ ಬಾರಿ 30 ಮುಸ್ಲಿಂ ಶಾಸಕರಾಗಬೇಕು ಎಂದು ಕರೆ ನೀಡಿದ ಅವರು, ಮುಸ್ಲಿಂರನ್ನ ಬಿಟ್ಟು ಭವಿಷ್ಯದ ಭಾರತ ನಿರ್ಮಾಣ ಸಾಧ್ಯವಿಲ್ಲ ಎಂದಿದ್ದಾರೆ.

ಚುನಾವಣೆಯಲ್ಲಿ ಮುಸ್ಲಿಮರು ಸೋಲಲ್ಲ, ಅವರನ್ನು ಸೋಲಿಸ್ತಾರೆ: ಮಹೇಶ್ವರಾನಂದ ಸ್ವಾಮೀಜಿ
ಮಹೇಶ್ವರಾನಂದ ಸ್ವಾಮೀಜಿ
Edited By:

Updated on: Dec 24, 2025 | 4:03 PM

ಬಾಗಲಕೋಟೆ, ಡಿಸೆಂಬರ್​​ 24: ದೇಶದ ಮೂವತ್ತು ಕೋಟಿ ಮುಸ್ಲಿಮರನ್ನ ಬಿಟ್ಟು ಭವಿಷ್ಯದ ಭಾರತ ನಿರ್ಮಾಣ ಸಾಧ್ಯವಿಲ್ಲ. ರಾಜ್ಯದಲ್ಲಿ ಒಂದು ಕೋಟಿ ಜನ ಮುಸ್ಲಿಂ ಜನಸಂಖ್ಯೆ ಇದ್ದರೂ ಕೇವಲ 10 ಜನ ಶಾಸಕರಿದ್ದಾರೆ. ಮುಸಲ್ಮಾನರು ಚುನಾವಣೆಯಲ್ಲಿ ಸೋಲುವುದಿಲ್ಲ, ಅವರನ್ನು ಸೋಲಿಸಲಾಗುತ್ತೆ ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಮಹೇಶ್ವರಾನಂದ ಸ್ವಾಮೀಜಿ ಹೇಳಿದ್ದಾರೆ.

ಸ್ವಾಮೀಜಿ ಹೇಳಿದ್ದೇನು?

ರಾಜ್ಯದಲ್ಲಿ ಲಿಂಗಾಯತರು ಕೇವಲ 66 ಲಕ್ಷ ಜನ ಇದ್ದಾರೆ. ಆದರೆ ಅವರ ಸಮುದಾಯದ 59 ಜನ ಶಾಸಕರಿದ್ದಾರೆ. 60 ಲಕ್ಷ ಜನಸಂಖ್ಯೆಯಿರುವ ಒಕ್ಕಲಿಗರ 46 ಜನ ಎಂಎಲ್​​ಎಗಳಿದ್ದಾರೆ. 15 ಲಕ್ಷ ಇರುವ ಬ್ರಾಹ್ಮಣ ಸಮುದಾಯದ 10 ಶಾಸಕರಿದ್ದಾರೆ. ಆದ್ರೆ ಮುಸ್ಲಿಂ ಸಮುದಾಯದಿಂದ ಈ ಸಂಖ್ಯೆ ಬಹಳ ಕಡಿಮೆ ಇದೆ. ಚುನಾವಣೆ ಸಂದರ್ಭದಲ್ಲಿ ಕೇವಲ 15 ಜನ ಮುಸಲ್ಮಾನರಿಗೆ ಕಾಂಗ್ರೆಸ್ ಪಕ್ಷ‌ ಟಿಕೆಟ್ ಕೊಡುತ್ತೆ. ಅದರಲ್ಲಿ 9 ಜನ ಗೆಲ್ತಾರೆ 6 ಜನ ಸೋಲ್ತಾರೆ. ಆದರೆ ಮುಂದಿನ ಬಾರಿ ಮುಸ್ಲಿಂ ಸಮುದಾಯದ 30 ಜನ ಶಾಸಕರಾಗಬೇಕು ಎಂದು ಸ್ವಾಮೀಜಿ ಕರೆ ನೀಡಿದ್ದಾರೆ.

ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿಗೆ ಲೋಕಾಯುಕ್ತ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತು ಇದೆ ಗೊತ್ತೇ?

ಗಂಗಾವತಿಯಲ್ಲಿ ಇಕ್ಬಾಲ್‌ ಅನ್ಸಾರಿ ಸೋಲುವುದಿಲ್ಲ, ಅವರನ್ನ ಸೋಲಿಸಲಾಗುತ್ತೆ. ವಿಜಯಪುರದಲ್ಲೂ ಹಮೀದ ಮುಷರಫಿ ಅವರ ಸ್ಥಿತಿ ಇದೇ ಆಗಿದೆ. ಆದರೆ ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ ಆಣೆಗೂ ಹಮೀದ ಮುಷರಫಿ ಅವರನ್ನು ಸೋಲಿಸುವವರನ್ನ ಮುಂದಿನ ಬಾರಿ ನಾವು ಸೋಲಿಸುತ್ತೇವೆ ಎಂದು ಹೇಳುವ ಮೂಲಕ ಸ್ವಾಮೀಜಿ ಪರೋಕ್ಷವಾಗಿ ಯತ್ನಾಳ್​​ರನ್ನ ಬೆಂಬಲಿಸುವ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಟಿಪ್ಪು ಸುಲ್ತಾನ್​​ ಮತ್ತು ಅಬ್ದುಲ್​​ ಕಲಾಂ ಅವರ ಸಾಧನೆ ಬಗ್ಗೆಯೂ ಈ ವೇಳೆ ಉಲ್ಲೇಖಿಸಿರುವ ಅವರು, ಟಿಪ್ಪು ಸುಲ್ತಾನ್​​ ಕುರಿತು ನಟ ಶಾರುಖ್ ಖಾನ್ ಸಿನೆಮಾ ಮಾಡಬೇಕೆಂದೂ ಮನವಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:01 pm, Wed, 24 December 25